HomeFresh Newsಭಾರತದಲ್ಲಿ ಹೆಚ್ಚಿದ ಆಟಾಳುಗಳ ಡೋಪಿಂಗ್ ; ತೀರಾ ಅಪಾಯಕಾರಿ ದೇಶವೆಂದು ಹಣೆಪಟ್ಟಿ

ಭಾರತದಲ್ಲಿ ಹೆಚ್ಚಿದ ಆಟಾಳುಗಳ ಡೋಪಿಂಗ್ ; ತೀರಾ ಅಪಾಯಕಾರಿ ದೇಶವೆಂದು ಹಣೆಪಟ್ಟಿ

ಇತ್ತೀಚಿನ ವರುಷಗಳಲ್ಲಿ ಭಾರತದ ಕ್ರೀಡಾಪಟುಗಳು ಹೆಚ್ಚಿನ ಪ್ರಮಾಣದಲ್ಲಿ ಡೋಪಿಂಗ್ ಮದ್ದಿನಮಲಿನಲ್ಲಿ ಸಿಕ್ಕಿ ಬಿದ್ದಿರುವುದರಿಂದ ಎಐಯು ಭಾರತ ಅಥ್ಲೆಟಿಕ್ ಫೆಡರೇಶನನ್ನು ಅಪಾಯಕಾರಿ ದೇಶ ಸಂಸ್ಥೆಯೆಂದು ಘೋಷಿಸಿದೆ.

ವಿಶ್ವ ಅಥ್ಲೆಟಿಕ್ಸ್‍ನ ಎಐಯು- ಅಥ್ಲೆಟಿಕ್ಸ್ ಇಂಟೆಗ್ರಿಟಿ ಘಟಕವು ಡೋಪಿಂಗ್ ಬಲವೃದ್ಧಿ ಕಾರಣಕ್ಕೆ ಭಾರತವನ್ನು ಅಪಾಯಕಾರಿ ದೇಶವೆಂದು ಹಣೆಪಟ್ಟಿ ಹಚ್ಚಿದೆ. ಉದ್ದೀಪನ ಮದ್ದು ಸೇವನೆ ವಿಷಯದಲ್ಲಿ ಭಾರತವು ಅಪಾಯಕಾರಿ ದೇಶವಾಗಿ ಬದಲಾಗಿದೆ ಎಂದು ಎಐಯು ಭಾರತವನ್ನು ಮರು ವರ್ಗೀಕರಣ ಮಾಡಿದೆ. ಭಾರತವು ಇಲ್ಲಯವರೆಗೆ ಉದ್ದೀಪನ ಮದ್ದು ವಿಷಯದಲ್ಲಿ ಬಿ ವಿಭಾಗದಲ್ಲಿ ಇತ್ತು; ಈಗ ಅದನ್ನು ಅಪಾಯಕಾರಿ ಎ ವರ್ಗಕ್ಕೆ ಸೇರಿಸಲಾಗಿದೆ. ಹಾಗಾಗಿ ಇನ್ನು ಮುಂದೆ ನಮ್ಮ ಆಟಾಳುಗಳು ಕಠಿಣ ಡೋಪಿಂಗ್ ಪರೀಕ್ಷೆಯನ್ನು ಎದುರಿಸಬೇಕಾಗುತ್ತದೆ.

ವಿಶ್ವ ಅಥ್ಲೆಟಿಕ್ಸ್‍ನ ಉದ್ದೀಪನ ಮದ್ದು ಸೇವನೆ ತಡೆ ನಿಯಮಗಳ 15ನೇ ವಿಧಿಯಡಿ ಎಐಯು ಘಟಕವು ಭಾರತ ಅಥ್ಲೆಟಿಕ್ಸ್ ಫೆಡರೇಶನನ್ನು ಬಿಯಿಂದ ಎಗೆ ಅಪಾಯಕಾರಿಯೆಂದು ಹಿಂಬಡ್ತಿ ನೀಡಿದೆ. ಭಾರತದಲ್ಲಿ ಉದ್ದೀಪನ ಮದ್ದು ಸೇವನೆ ಹಿಂದಿನಿಂದಲೂ ಇದೆ. ಅದನ್ನು ತಡೆಯುವ ಕಾರ್ಯ ಯೋಜನೆಗಳು ಫಲ ನೀಡದೆ, ಅದು ಮತ್ತಷ್ಟು ಹೆಚ್ಚಿದೆ ಎಂದು ಎಐಯು ಮುಖ್ಯಸ್ಥ ಡೇವಿಡ್ ಹೌಮನ್ ಖೇದ ವ್ಯಕ್ತಪಡಿಸಿದ್ದಾರೆ.

2022ರಿಂದ 2025ರ ನಡುವೆ ಡೋಪಿಂಗ್ ನಿಯಮ ಉಲ್ಲಂಘನೆಯಲ್ಲಿ ಭಾರತವು ಜಾಗತಿಕವಾಗಿ ಎರಡನೆಯ ಸ್ಥಾನಕ್ಕೆ ಜಿಗಿದಿದೆ. ಭಾರತದಲ್ಲಿ ಸದ್ಯ 148 ಕ್ರೀಡಾಪಟುಗಳು ಡೋಪಿಂಗ್ ಕಾರಣಕ್ಕೆ ಅಮಾನತುಗೊಂಡಿದ್ದಾರೆ. ಆ ಮೂಲಕ ಭಾರತ ಕೆನ್ಯಾವನ್ನು ಹಿಂದಿಕ್ಕಿದೆ. ಮೂರು ವರುಷಕ್ಕೊಮ್ಮೆ ಎಐಯು ವರ್ಗ ತಪಾಸಣೆ ಮಾಡುತ್ತದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments