HomeFresh Newsನೆಕ್ಸಾ ಮಾಂಡೋವಿ ಮೋಟಾರ್ಸ್‌ನಲ್ಲಿ ವಿಜಯದಶಮಿ ಹಬ್ಬದ ಪ್ರಯುಕ್ತ ವಿಶೇಷ ಕೊಡುಗೆ

ನೆಕ್ಸಾ ಮಾಂಡೋವಿ ಮೋಟಾರ್ಸ್‌ನಲ್ಲಿ ವಿಜಯದಶಮಿ ಹಬ್ಬದ ಪ್ರಯುಕ್ತ ವಿಶೇಷ ಕೊಡುಗೆ

ನಗರದ ಮೇರಿಹಿಲ್‌ನಲ್ಲಿರುವ ನೆಕ್ಸಾ ಮಾಂಡೋವಿ ಮೋಟಾರ್ಸ್‌ನಲ್ಲಿ ವಿಜಯದಶಮಿ ಹಬ್ಬದ ಪ್ರಯುಕ್ತ ಮಾರುತಿ ಸುಜುಕಿಯ ನೂತನ ಇ-ವಿಟಾರಾ ಎಲೆಕ್ಟ್ರಿಕ್ ಎಸ್‌ಯುವಿ ಖರೀದಿಗೆ ಆಕರ್ಷಕ ಹಬ್ಬದ ವಿಶೇಷ ಕೊಡುಗೆಗಳನ್ನು ಘೋಷಿಸಿದೆ.

ಪರಿಸರ ಸ್ನೇಹಿ ತಂತ್ರಜ್ಞಾನ ಹಾಗೂ ಆಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ಮಾರುತಿ ಸುಜುಕಿ ಇ-ವಿಟಾರಾ ಎಲೆಕ್ಟ್ರಿಕ್ ಎಸ್‌ಯುವಿ ವಾಹನಕ್ಕೆ ಒಟ್ಟು ಒಂದು ಲಕ್ಷ ರೂಪಾಯಿವರೆಗೆ ವಿಶೇಷ ಪ್ರಯೋಜನಗಳನ್ನು ನೀಡಲಾಗುತ್ತಿದೆ.

ಈ ಕೊಡುಗೆಯಡಿ 50 ಸಾವಿರ ರೂಪಾಯಿ ಮೌಲ್ಯದ ಹೋಮ್ ಚಾರ್ಜರ್ ಹಾಗೂ ಅದರ ಅಳವಡಿಕೆ ಉಚಿತವಾಗಿ ಲಭ್ಯವಾಗಲಿದೆ. ಇದರೊಂದಿಗೆ ಹಳೆಯ ವಾಹನವನ್ನು ವಿನಿಮಯ ಮಾಡಿಕೊಳ್ಳುವ ಗ್ರಾಹಕರಿಗೆ30 ಸಾವಿರ ರೂಪಾಯಿವರೆಗೆ ಎಕ್ಸ್‌ಚೇಂಜ್ ಬೋನಸ್ ಕೂಡ ನೀಡಲಾಗುತ್ತಿದೆ.

ನೂತನ ಇ-ವಿಟಾರಾ ಎಲೆಕ್ಟ್ರಿಕ್ ಎಸ್‌ಯುವಿ 49 ಕಿಲೋವ್ಯಾಟ್ ಅವರ್ ಹಾಗೂ ೬೧ ಕಿಲೋವ್ಯಾಟ್ ಅವರ್ ಬ್ಯಾಟರಿ ಆಯ್ಕೆಗಳಲ್ಲಿ ಲಭ್ಯವಿದೆ. ಕಡಿಮೆ ನಿರ್ವಹಣಾ ವೆಚ್ಚ, ಆಧುನಿಕ ತಂತ್ರಜ್ಞಾನ ಹಾಗೂ ಹೊಗೆರಹಿತ ಚಾಲನೆಯ ವಿಶೇಷತೆಗಳನ್ನು ಈ ವಾಹನ ಹೊಂದಿದೆ.

ವಿಜಯದಶಮಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ವಿಶೇಷವಾಗಿಸಲು ಮಾರುತಿ ಸುಜುಕಿ ಇ-ವಿಟಾರಾ ಖರೀದಿಗೆ ಈ ಆಕರ್ಷಕ ಕೊಡುಗೆಗಳನ್ನು ಪರಿಚಯಿಸಲಾಗಿದೆ.

ಆಸಕ್ತ ಗ್ರಾಹಕರು ಮಂಗಳೂರಿನ ಏರ್‌ಪೋರ್ಟ್ ರಸ್ತೆಯಲ್ಲಿರುವ ಮಂಡೋವಿ ಮೋಟಾರ್ಸ್ ನೆಕ್ಸಾ ಶೋರೂಮ್‌ಗೆ ಭೇಟಿ ನೀಡಿ, ವಾಹನದ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದು. ಅಲ್ಲದೆ, ಟೆಸ್ಟ್ ಡ್ರೈವ್‌ಗೂ ಮುಂಗಡ ಕಾಯ್ದಿರಿಸಬಹುದಾಗಿದೆ.

ಹಬ್ಬದ ಸಂಭ್ರಮದೊಂದಿಗೆ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನ ಚಾಲನೆಯ ಹೊಸ ಅನುಭವವನ್ನು ಪಡೆಯಲು ಮಂಡೋವಿ ಮೋಟಾರ್ಸ್ ನೆಕ್ಸಾ ಗ್ರಾಹಕರನ್ನು ಆಹ್ವಾನಿಸಿದೆ.

ವಿಶೇಷ ಕೊಡುಗೆಗಳು ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತವೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments