HomeFresh Newsತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ವತಿಯಿಂದ 2 ಅಶಕ್ತರ ಚಿಕಿತ್ಸೆಗೆ 90 ಸಾವಿರ ರೂಪಾಯಿ ನೆರವು

ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ವತಿಯಿಂದ 2 ಅಶಕ್ತರ ಚಿಕಿತ್ಸೆಗೆ 90 ಸಾವಿರ ರೂಪಾಯಿ ನೆರವು

ಬಂಟ್ವಾಳ: ತುಳುನಾಡ ಪೊರ್ಲು ಸೇವಾ ಟ್ರಸ್ಟ್ (ರಿ.) ವತಿಯಿಂದ 121ನೇ ಸೇವಾ ಕಾರ್ಯದ ಅಂಗವಾಗಿ ಕ್ಯಾನ್ಸರ್‌ನಿಂದ ಬಳಲುತ್ತಿರುವ ಇಬ್ಬರ ಚಿಕಿತ್ಸೆಗೆ ಒಟ್ಟು 90 ಸಾವಿರ ರೂಪಾಯಿ ಆರ್ಥಿಕ ನೆರವು ನೀಡಲಾಯಿತು.

ಕಾಸರಗೋಡು ಜಿಲ್ಲೆಯ ಬಂದ್ಯೋಡು ಅಡ್ಕ ನಿವಾಸಿಗಳಾದ ಗೌತಮಿ ಮತ್ತು ಗಣೇಶ್ ಪೂಜಾರಿ ದಂಪತಿಯ 11 ವರ್ಷದ ಪುತ್ರಿ ಶಾನ್ವಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಆಕೆಯ ಚಿಕಿತ್ಸೆಗೆ 70 ಸಾವಿರ ರೂಪಾಯಿ ನೆರವು ನೀಡಲಾಯಿತು.

ಅದೇ ರೀತಿ, ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವ ಬಂಟ್ವಾಳ ತಾಲೂಕಿನ ಕಾವಳಪಡೂರು ಮಧ್ವ ನಿವಾಸಿ ಲಕ್ಷ್ಮೀ ಅವರ ವೈದ್ಯಕೀಯ ವೆಚ್ಚಕ್ಕಾಗಿ 20 ಸಾವಿರ ರೂಪಾಯಿ ಆರ್ಥಿಕ ಸಹಾಯ ಒದಗಿಸಲಾಯಿತು.

ಬಿ.ಸಿ.ರೋಡ್‌ನ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿಯಲ್ಲಿ ಒಟ್ಟು 90 ಸಾವಿರ ರೂಪಾಯಿಗಳ ನೆರವನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ತುಳುನಾಡ ಪೊರ್ಲು ಸೇವಾ ಟ್ರಸ್ಟ್‌ನ ಪದಾಧಿಕಾರಿಗಳು ಹಾಗೂ ಸೇವಾ ಮಾಣಿಕ್ಯರು ಉಪಸ್ಥಿತರಿದ್ದರು.

swarna sep
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments