Homeಕರಾವಳಿಉಡುಪಿನಾನಿಲ್ತಾರ್ ಅಭಿಮಾನಿ ಬಳಗ, ಮುಂಡ್ಕೂರು ಮುಂಬಯಿ ಸ್ನೇಹ ಸಮ್ಮಿಲನ

ನಾನಿಲ್ತಾರ್ ಅಭಿಮಾನಿ ಬಳಗ, ಮುಂಡ್ಕೂರು ಮುಂಬಯಿ ಸ್ನೇಹ ಸಮ್ಮಿಲನ

ಮುಂಡ್ಕೂರು ; ನಾನಿಲ್ತಾರ್ ಅಭಿಮಾನಿ ಬಳಗ, ಮುಂಡ್ಕೂರು ಮುಂಬೈ ಇವರ ಸಂಯೋಜನೆಯಲ್ಲಿ ಕುಲಾಲ ಸಂಘ ನಾನಿಲ್ತಾರ್ ಇವರ ಸಂಪೂರ್ಣ ಸಹಕಾರದೊಂದಿಗೆ ಕುಲಾಲ ಭವನ ನಾನಿಲ್ತಾರ್, ಮುಲ್ಲಡ್ಕ, ಮುಂಡ್ಕೂರು ಇಲ್ಲಿ ಶ್ರೀಮತಿ ರುಕ್ಮಿಣಿ ಯಶೋಧರ ಸಾಲ್ಯಾನ್ ಮುಂಬಯಿ ಇವರು ವೇದಿಕೆಯಲ್ಲಿ ಸ್ನೇಹ ಸಮ್ಮಿಲನ ಕಾರ್ಯಕ್ರಮ ಮೇ 5 ರಂದು ವಿಜೃಂಭಣೆಯಿಂದ ನಡೆಯಿತು.
.
ಮುಂಡ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನ ಅರ್ಚಕರು ಶ್ರೀ ರಾಮದಾಸ್ ಆಚಾರ್ಯ ಅವರು ನಾನಿಲ್ತಾರ್ ಅಭಿಮಾನಿ ಬಳಗ ನೀಡಿದ ಜನ್ ರೇಟರ್ ವನ್ನ ದಿವ್ಯ ಹಸ್ತದಲ್ಲಿ ಹಸ್ತಾಂತರಿಸಲ್ಪಟ್ಟು. ಬಳಿಕ ಸಮಾಜದಲ್ಲಿ ಒಗ್ಗಟ್ಟಿನಿಂದ ಈ ಭವನ ದಲ್ಲಿ ಉತ್ತಮ ಕಾರ್ಯಗಳು ನಡೆಯಲಿ ಅದರಿಂದ ಪಡೆದ ಹಾರ್ದಿಕ ಸಹಕಾರ ಸಮಾಜದ ಜನರಿಗೆ ಉಪಯೋಗವಾಗಲಿ ಮುಂಬೈ ನಗರದಲ್ಲಿ ಧಾರ್ಮಿಕ ಸೇವೆ ಮಾಡುವ ಅಭಿಮಾನಿ ಬಳಗದ ಎಲ್ಲರಿಗೂ ದೇವರು ಅನುಗ್ರಹಿಸಲಿ ಎಂದರು
ನಾನಿಲ್ತಾರ್ ಕುಲಾಲ ಸಂಘ ಅಧ್ಯಕ್ಷ ಜಯರಾಮ ಕುಲಾಲ್ ಅವರು ಸಮಾರಂಭದಅಧ್ಯಕ್ಷತೆಯನ್ನು ವಹಿಸಿ‌ ಮಾತನಾಡಿದ ನಾನಿಲ್ತಾರ್ ಕುಲಾಲ ಸಂಘ ಅಧ್ಯಕ್ಷ ಜಯರಾಮ ಕುಲಾಲ್ ಮಾತನಾಡುತ್ತಾ ನಾನಿಲ್ತಾರ್ ಕುಲಾಲ ಸಂಘಕ್ಕೆ ನಾನಿಲ್ತಾರ್ ಅಭಿಮಾನಿ ಬಳಗ ಮುಂಬೈ ಈಗಾಗಲೇ ಸಂಘದ ಅನೇಕ ಅಭಿವೃದ್ಧಿ ಕಾರ್ಯದಲ್ಲಿ ಕೈಜೋಡಿಸಿದ್ದು ಈ ವರ್ಷ ಜನರೇಟರ್ ನೀಡುವುದರ ಮೂಲಕ ಬಹು ದೊಡ್ಡ ಕೊಡುಗೆಯನ್ನು ನೀಡಿದ್ದೀರಿ ಇದು ಎಂದೆಂದಿಗೂ ಶಾಶ್ವತ ನೆನಪು. ನಿಮ್ಮ ಪ್ರೀತಿ ಅಭಿಮಾನಕ್ಕೆ ಮನ ತುಂಬಿದೆ ಎಂದು ನುಡಿದರು..
ಕಾರ್ಯಕ್ರಮದ ದೀಪ ಬೆಳಗಿಸಿ ಉದ್ಘಾಟಿಸಿದ ಬೋಳ, ಡಾನ್ ಬೋಸ್ಕೋ ಚರ್ಚ್ ನ ಧರ್ಮಗುರುಗಳಾದ ಫಾ. ಮಿಲ್ಟನ್ ಫೆರ್ನಾಂಡಿಸ್ ಶುಭ ಹಾರೈಸಿದರು.
ವೇದಿಕೆಯಲ್ಲಿ, ಮಯೂರ್ ಉಳ್ಳಾಲ್,ಅಧ್ಯಕ್ಷರು ದಕ್ಷಿಣ ಕನ್ನಡ ಜಿಲ್ಲಾ ಯಾನೆ ಮೂಲ್ಯರ ಕುಲಾಲರ ಸಂಘ, ಮಂಗಳೂರು, ಪದ್ಮನಾಭ ಬಂಗೇರ, ಹೋಟೆಲ್ ಉದ್ಯಮಿ, ಮುಂಬೈ, ಪ್ರೇಮಾನಂದ ಕುಲಾಲ್, ಕೋಡಿಕಲ್, ಅಧ್ಯಕ್ಷರು, ಶ್ರೀ ವೀರನಾರಾಯಣ ಸೇವಾ ಟ್ರಸ್ಟ್ (ರಿ.), ಕುಲಶೇಖರ, ಸತೀಶ್ ಪೂಜಾರಿ, ಮಾಜಿ ಅಧ್ಯಕ್ಷರು, ಬೋಳ ಗ್ರಾಮ ಪಂಚಾಯಿತಿ,ಕುಶ ಆರ್ ಮೂಲ್ಯ, ಇನ್ನ ಕಾರ್ಯಾಧ್ಯಕ್ಷರು, ಕುಂಭ ನಿಧಿ ಕೋ- ಆಪರೇಟಿವ್ ಸೊಸೈಟಿ, ಬೆಳ್ಮಣ್, ದಿವ್ಯರಾಜ್ ಕುಲಾಲ್, ಬಿ. ಸಿ ರೋಡ್, ಸ್ಥಾಪಕರು ಮತ್ತು ವ್ಯವಸ್ಥಾಪಕ ಪಾಲುದಾರರು, ವಿಜ್ಞಾನ ವಲಯ ಲ್ಯಾಬೋರಿಟೀಸ್ ಮಂಗಳೂರು- ಬೆಂಗಳೂರು- ಮಸ್ಕತ್, ಜಗದೀಶ್ ಕುಲಾಲ್, ಪಾಲುದಾರರು, ಸಮ್ಯಮ ಟೆಕ್ನೋಲಜಿ ಮಂಗಳೂರು, ಬಿ. ದಿನೇಶ್ ಕುಲಾಲ್, ಮುಂಬೈ, ಟ್ರಸ್ಟೀ, ಕುಲಾಲ ಪ್ರತಿಷ್ಠಾನ, ಮಂಗಳೂರು, ರುಕ್ಮಿಣಿ ಯಶೋಧರ ಸಾಲ್ಯಾನ್, ಸಮಾಜ ಸೇವಕಿ, ಮುಂಬೈ,, ಸುಕುಮಾರ ಸಾಲ್ಯಾನ್, ಕಾರ್ಯಾಧ್ಯಕ್ಷರು, ಕುಲಾಲ ಸಂಘ ಮುಂಬೈ, ಸದಸ್ಯತನ ನೋಂದಣಿ ಸಮಿತಿ. ಉಪಸ್ಥರಿದ್ದರು.
ಅಭಿಮಾನಿ ಬಳಗದ ಸಂಚಾಲ ಕೃಷ್ಣ ಮೂಲ್ಯ ನಾಲಾಸೋಪರ್ ಪ್ರಾಸ್ತಾವಿಕ ಮಾತುಗಳಾಡಿದರು.
ಈ ಸಂದರ್ಭದಲ್ಲಿ ಕುಲಾಲ ಸಮಾಜ ಹಿರಿಯರಾದ ಮೀನಾ ಮೂಲ್ಯ ಮಡಿಕೆ ಮನೆ, ವಾರಿಜ ಮೂಲ್ಯ, ಹೊಸ ಹಿತ್ಲು, ಶ್ರೀನಾಥ್ ಸಾಲ್ಯಾನ್ , ಹರೀಶ್ ಮೂಲ್ಯ ಸರೋಜಾ ಮೂಲ್ಯ ಮುಂಬೈ, ಮಂಜಪ್ಪ ಮೂಲ್ಯ, ಏಳಿಂಜೆ( ನಿವೃತ್ತ ಉಪಾಧ್ಯಯರು) ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು
ಅರುಣಾ ಕುಲಾಲ್ ಉಳೆಪಾಡಿ ನಿರೂಪಿಸಿದರು.ಸಾಂಸ್ಕೃತಿಕ ಕಾರ್ಯಕ್ರಮವನ್ನು ಹರ್ಷಿತಾ ಕುಲಾಲ್.ಸುಧಾಕರ್ ವೈ ಮುಲ್ಯ ವಂದಿಸಿದರು ಅತಿಥಿ ಗಣ್ಯರನ್ನು ದಿನೇಶ್ ಕುಲಾಲ್ ಬೆಲ್ಮಣ್ಣು. ದಿನೇಶ್ ಮೂಲ್ಯ ಅಂಧೇರಿ. ದಿನೇಶ್ ಬಂಗೇರ. ಕೇಶವ ಬಂಜನ್. ರೋಹಿದಾಸ್ ಬಂಜನ್. ಲೋಕೇಶ್ ಸಾಲಿಯಾನ್. ನಾರಾಯಣ ಬಂಜನ್. ದೇವೇಂದ್ರ ಸಾಲಿಯಾನ್. ಸರೋಜಾ ಎ ಮೂಲ್ಯ. ನಲಿನಿ ಬಂಜನ್. ಜ್ಯೋತಿ ಸಾಲಿಯಾನ್. ದಿವ್ಯ ಸಾಲ್ಯಾನ್. ಶೋಭಾ ಬಂಜನ್. ಕವಿತಾ ಸಾಲ್ಯಾನ್. ಇವರು ಗೌರವಿಸಿದರು.
ಸನ್ಮಾನಿತರ ಪರಿಚಯವನ್ನು ಪುಷ್ಪ ಕುಮಾರಿ ಟೀಚರ್. ರಕ್ಷಿತ ಕುಲಾಲ್ ಮಡಿಕೆ ಮನೆ. ಸರೋಜಾ ಮೂಲ್ಯ. ನಲಿನಿ ಬಂಜನ್. ಅನಿಷ್ಕ ಮೂಲ್ಯ
ಪರಿಚಯಿಸಿದರು

ಪ್ರಾರಂಭದಲ್ಲಿ ದುರ್ಗಾ ಭಜನಾ ಮಂಡಳಿ, ನಾನಿಲ್ತಾರ್ ,ವಿಠೋಬಾ ಭಜನಾ ಮಂಡಳಿ, ಶಂಕರಪುರ ಇವರಿಂದ ಭಜನೆ ನಡೆಯಿತು , ಬಳಿಕ, ಕುಲಾಲ ಸಂಘ ನಾನಿಲ್ತಾರ್ ಮಹಿಳಾ ಸದಸ್ಯರಿಂದ ಹಾಗೂ ಯುವ ವೇದಿಕೆಯ ಸದಸ್ಯರು, ಅಭಿಮಾನಿ ಬಳಗ, ಸದಸ್ಯರ ನೃತ್ಯ ವೈಭವ ನಡೆಯಿತು. ರಾತ್ರಿ ಶರತ್ ಶೆಟ್ಟಿ ಮುಂಡ್ಕೂರು ಸಾರಥ್ಯದ ‘ ‘ವಿಜಯ ಕಲಾವಿದರು’ ಕಿನ್ನಿಗೋಳಿ ಇವರು ಅ ಸೂಪರ್ ಹಿಟ್ ತುಳು ನಾಟಕ “ಬೈರಾಸ್ ಭಾಸ್ಕರೆ? ಪ್ರದರ್ಶನಗೊಂಡಿತು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments