HomeFresh Newsಕಡಬ : ಕೊಲ್ಯದ ಕಟ್ಟದಲ್ಲಿ ಇಬ್ಬರು ಹೆಣ್ಣುಮಕ್ಕಳು ನೀರು ಪಾಲು

ಕಡಬ : ಕೊಲ್ಯದ ಕಟ್ಟದಲ್ಲಿ ಇಬ್ಬರು ಹೆಣ್ಣುಮಕ್ಕಳು ನೀರು ಪಾಲು

ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹರಿಯುತ್ತಿರುವ ಗುಂಡ್ಯಹೊಳೆಯ ಕೊಲ್ಯದಕಟ್ಟ ಡ್ಯಾಮ್ ಬಳಿ ಸ್ನಾನಕ್ಕೆಂದು ನೀರಿಗಳಿದ ಇಬ್ಬರು ಹೆಣ್ಣುಮಕ್ಕಳು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಮೃತಪಟ್ಟವರನ್ನು ಕಡಬ ತಾಲೂಕಿನ ಕುಟ್ರುಪ್ಪಾಡಿ ಗ್ರಾಮದ ಪೂವತಿಂಗಲ್ ನಿವಾಸಿ ಹರೀಶ್‌ಪಿ.ಕೆ. ಎಂಬವರ ಪುತ್ರಿ ಹತ್ತನೇ ತರಗತಿ ವಿದ್ಯಾರ್ಥಿನಿ ಅರ್ಪಿತಾ(೧೫) ಹಾಗೂ ಹರೀಶ್ ಅವರು ಸಹೋದರಿ ನೆರೆಮನೆಯ ಶಕುಂತಲಾ ಎಂಬವರ ಪುತ್ರಿ ಸುನೀತ (೨೧) ಎಂದು ಗುರುತಿಸಾಗಿದೆ.
ಕುಟ್ರುಪ್ಪಾಡಿ ಗ್ರಾಮದ ಪೂವತಿಂಗಲ್ ಮನೆ ನಿವಾಸಿ ಹರೀಶ್ ಪಿ.ಕೆ. ಅವರ ಮಕ್ಕಳಾದ
ಹರಿವಿಷ್ಣು, ಅರ್ಪಿತಾ, ಹರೀಶ್ ಅವರ ಅಕ್ಕ ನೆರೆಮನೆ ನಿವಾಸಿ ಶಕುಂತಾಳ ಅವರ ಮಕ್ಕಳಾದ ಸುರೇಶ, ಸುನೀತಾ, ಸುರೇಶನ ಮಗಳಾದ ಅಕ್ಷತಾ ಮತ್ತು ನೆಟ್ಟಣ ನಿವಾಸಿ ಶ್ರೇಯ ಹೀಗೆ ಒಟ್ಟು ಏಳು ಜನ ಸ್ನಾನಕ್ಕೆಂದು ಗುಂಡ್ಯ ಹೊಳೆಗೆ ತೆರಳಿದ್ದರು.
ಆ ಪೈಕಿ ಅರ್ಪಿತಾ ಹಾಗೂ ಸುನೀತ ನೀರಿನ ಆಳ ತಿಳಿಯದೆ ಮುಳುಗಿದ್ದಾರೆ. ಇದನ್ನು ಗಮನಿಸಿದ ಇತರರು ಅವರನ್ನು ರಕ್ಷಿಸಲು ಯತ್ನಿಸಿದರೂ ಫಲಕಾರಿಯಾಗಲಿಲ್ಲ. ಈ ವಿಚಾರವನ್ನು ಹರಿವಿಷ್ಣು ತನ್ನ ತಂದೆ ಹರೀಶ್ ಅವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಲ್ಲದೆ. ನದಿಯ ಪಕ್ಕದ ಮನೆಯವರಿಗೆ ತಿಳಿಸಿ ನೀರಲ್ಲಿ ಮುಳುಗಿದವರನ್ನು ರಕ್ಷಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾನೆ ಆದರೆ ಅದು ಸಾಧ್ಯವಾಗಲಿಲ್ಲ. ಬಳಿಕ ಕೊಲ್ಯದಕಟ್ಟ ನಿವಾಸಿ ಮುಳುಗುತಜ್ಞ ಜಾರ್ಜ್ ಎಂಬವರು ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತಿದ್ದಾರೆ. ಸ್ಥಳಕ್ಕೆ ಕಡಬ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಕಡಬ ಸರಕಾರಿ ಆಸ್ಪತ್ರೆಗೆ ಸಾಗಿಸಿ ಮರೋಣತ್ತರ ಪರೀಕ್ಷೆ ನಡೆಸಲಾಗಿದೆ. ಹರೀಶ್ ಅವರು ನೀಡಿದ ದೂರಿನಂತೆ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರ ಕುಟುಂಬದವರ ಅಕ್ರಂದನ ಮುಗಿಲು ಮುಟ್ಟಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments