ಮೈಸೂರು ಜಿಲ್ಲೆಯ ತಿಪ್ಪೂರು ಗ್ರಾಮದಲ್ಲಿ ಸ್ಥಳೀಯನೊಬ್ಬ ಪ್ರಾಯ ಸಂದ ಮಹಿಳೆಯೊಬ್ಬರನ್ನು ಕೊಂದು ಆಕೆಯ ದೇಹವನ್ನು ಶೌಚಾಲಯ ಗುಂಡಿಯಲ್ಲಿ ಮರೆಸಿರುವುದು ಪತ್ತೆಯಾಗಿದೆ.ಕೊಲ್ಲಲ್ಪಟ್ಟ ಮಹಿಳೆ ತೊಂಬತ್ತರ ಪ್ರಾಯದ ವೃದ್ಧೆ ತಿಪ್ಪೂರಿನ ಗೌರಮ್ಮ. ಅದೇ ಗ್ರಾಮದ ವೀರಭದ್ರ ಎನ್ನುವವನು ಈ ಕೊಲೆ ಮಾಡಿರುವುದಾಗಿ ಆರೋಪ ಮಾಡಲಾಗಿದೆ. ತಮ್ಮ ತಾಯಿ ಕಾಣೆಯಾಗಿರುವುದಾಗಿ ಗೌರಮ್ಮರ ಮಗ ಸದಾನಂದನು ಏಪ್ರಿಲ್ 30ರಂದು ಕೆ. ಆರ್. ನಗರ ಠಾಣೆಗೆ ದೂರು ನೀಡಿದ್ದ. ತನಿಖೆಗೆ ಹೋದ ಪೋಲೀಸರಿಗೆ ಊರ ಹಲವರು ವೀರಭದ್ರ ಎಂಬವನ ಮೇಲೆ ಅನುಮಾನ ವ್ಯಕ್ತಪಡಿಸಿದ್ದಾರೆ. ಮೇ 8ರಂದು ಪೋಲೀಸರು ವೀರಭದ್ರನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ತಾನು ಕೊಲೆ ಮಾಡಿ ದೇಹವನ್ನು ಗೋಣಿಯಲ್ಲಿ ತುಂಬಿ ಶೌಚಕ್ಕಾಗಿ ಇರುವ ಗುಂಡಿಯೊಳಕ್ಕೆ ಹಾಕಿರುವುದಾಗಿ ವೀರಭದ್ರ ಬಾಯಿ ಬಿಟ್ಟಿದ್ದಾನೆ. ಅದರಂತೆ ಪೋಲೀಸರು ಬಂದು ಶೌಚ ಗುಂಡಿಯ ಭಾಗವನ್ನು ಅಗೆದು ಶವವನ್ನು ವಶಕ್ಕೆ ಪಡೆದು, ಮೈಸೂರಿನ ಕೆ. ಆರ್. ಆಸ್ಪತ್ರೆಗೆ ಶವಪರೀಕ್ಷೆಗೆ ಕಳುಹಿಸಿದ್ದಾರೆ. ಪೋಲೀಸ್ ಅಧೀಕ್ಷಕ ಮಲ್ಲಿಕರ್ಜುನ ಬಾಲದಂಡಿ, ಹೆಚ್ಚುವರಿ ಪೋಲೀಸ್ ಅಧೀಕ್ಷಕ್ ಮಲ್ಲಿಕ್, ಡಿವೈಎಸ್ಪಿ ರಾಜಣ್ಣ ಮೊದಲಾದವರು ಸ್ಥಳ ಮಹಜರು ಪರಿಶೀಲಿಸಿದರು.
ವೃದ್ಧೆಯನ್ನು ಕೊಂದು ಹಾಕಿದ್ದ ಕದೀಮ |ಶೌಚಾಲಯದ ಗುಂಡಿಯಲ್ಲಿ ಹೂತಿದ್ದ ಮಳ್ಳ | ಮಾಡಬಾರದ ಕೆಲಸ ಮಾಡಿದ್ದ ವೀರಭದ್ರ
RELATED ARTICLES
