HomeFresh Newsವಾಚಾಳಿಯು ಮೂಕನಾಗುವ ಅದ್ಭುತ ಸಾಧನೆ | ಕಚ್ಚಾ ತೈಲ ಬ್ಯಾರಲ್ ಮತ್ತು ಏರುಮುಖ ಪೆಟ್ರೋಲು |...

ವಾಚಾಳಿಯು ಮೂಕನಾಗುವ ಅದ್ಭುತ ಸಾಧನೆ | ಕಚ್ಚಾ ತೈಲ ಬ್ಯಾರಲ್ ಮತ್ತು ಏರುಮುಖ ಪೆಟ್ರೋಲು | ಪ್ರಶ್ನೆಗೆ ಬೆನ್ನು ತೋರಿಸುವ ಮಹಾ ಸಾಧನೆ

ದೇಶವಾದರೇನು ಶಿವ ವಿದೇಶವಾದರೇನು ಶಿವ ವಾಚಾಳಿ ಮೂಕನಾಗುವುದೇ ಪ್ರಧಾನಿ ಮೋದಿಯವರ ವಿಶೇಷ ಶಿವಾ.

ಓಸ್ಲೋದಲ್ಲಿ ನಾರ್ವೆ ಪ್ರಧಾನಿ ಜೋನಾಸ್ ಗಹ್ರ್ ಮತ್ತು ಭಾರತದ ಪ್ರಧಾನಿ ಮೋದಿಯವರು ಜಂಟಿ ಪತ್ರಿಕಾಗೊಟ್ಟಿ ನಡೆಸಿದ್ದರು. ಆದರೆ ಪ್ರಶ್ನೆಗೆ ಎದ್ದು ಹೋಗುವ ಅವರ ಬುದ್ಧಿ ಅಲ್ಲೂ ಕಾಣಿಸಿದ್ದೇ ಈಗ ಪ್ರಶ್ನಾರ್ಥಕ.

ಪಾಟ್ನಾದ ರೋಡ್ ಶೋ, ಮಂತ್ರಿಗಳ ಕೂಟ, ಲೋಕ ಸಭೆ ಉದ್ದಕ್ಕೆ ಭಾಷಣ ಮಾಡುವ ಮೋದಿಯವರು ಪ್ರಶ್ನೆ ಬಂದಾಗ ಮೂಕರಾಗಿ ಹೊರಟು ಬಿಡುತ್ತಾರೆಂಬುದು ಹಳೆಯ ಸಂಗತಿ. ನಾರ್ವೆಯ ಮಹಿಳಾ ಪತ್ರಕರ್ತೆ ಹ್ಯಾಲೆ ಲಿಂಗ್ ಪ್ರಶ್ನೆಗೆ ಮೋದಿಯವರು ಬೆನ್ನು ಹಾಕಿ ಹೊರಟುದನ್ನು ಅವರು ಜಾಲ ತಾಣದಲ್ಲಿ ಹರಿ ಬಿಟ್ಟಿದ್ದಾರೆ. ಅದು ರಾಜತಾಂತ್ರಿಕ ತಪ್ಪು ಎಂಬಂತೆ ಖಂಡನೆ ಕಾಣುತ್ತಿದೆ.


2012 ರಲ್ಲಿ ಪೆಟ್ರೋಲಿಯಂ ಬ್ಯಾರಲಿಗೆ 115 ಡಾಲರ್ ಆದಾಗ ಮನಮೋಹನ್ ಸಿಂಗ್ ಸರಕಾರವು ಲೀಟರಿಗೆ 60 ರೂಪಾಯಿ ಸುತ್ತಿನಲ್ಲಿ ಬೆಲೆ ಇಟ್ಟಿತ್ತು. ಮೋದಿಯವರ ಸರಕಾರವು ಬ್ಯಾರಲಿಗೆ 60 ಡಾಲರ್ ಇದ್ದಾಗಲೂ ಏರಿಸಿತು, ರಶಿಯಾ ಅಗ್ಗದಲ್ಲಿ ಕಚ್ಚಾ ತೈಲ ಒದಗಿಸಿದಾಗಲೂ ಏರಿಸಿತು.

ಮಾನವ ಹಕ್ಕುಗಳ ದಮನ, ಪತ್ರಿಕಾ ಸ್ವಾತಂತ್ರ್ಯ ಹರಣ, ಅಕಾರಣ ಬೆಲೆಯೇರಿಕೆ, ಧರ್ಮದ ರಾಜಕೀಯ ಇಂತಾ ಯಾವ ಪ್ರಶ್ನೆ ಎದುರಾಗುತ್ತದೆ ಎಂದರೂ ಮೋದಿಯವರು ಮೂಕರಾಗುತ್ತಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments