ಮಂಗಳೂರು: ಮಲಬಾರ್ ಗೋಲ್ಡ್ & ಡೈಮಂಡ್ಸ್‌ನ ಮಂಗಳೂರು ಶೋರೂಮ್‌ನಲ್ಲಿ ವಿಶೇಷ ಆಭರಣ ಪ್ರದರ್ಶನವಾದ ‘ಆರ್ಟಿಸ್ಟ್ರಿ ಶೋಗೆ ನವೆಂಬರ್ 20ರಂದು ಅದ್ಧೂರಿಯಾಗಿ ಚಾಲನೆ ನೀಡಲಾಯಿತು. ಈ ವಿಶೇಷ ಪ್ರದರ್ಶನವು ನವೆಂಬರ್ 20ರಿಂದ ಡಿಸೆಂಬರ್ 7ರವರೆಗೆ ನಡೆಯಲಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕೆಎಂಸಿ ಆಸ್ಪತ್ರೆ, ಮಂಗಳೂರಿನ ಸ್ತ್ರೀರೋಗ ತಜ್ಞರಾದ ಡಾ. ಸಮೀನಾ ಹರೂನ್ ಅವರು ಮಾತನಾಡಿ, ಆರ್ಟಿಸ್ಟ್ರಿ ಪ್ರದರ್ಶನದಲ್ಲಿರುವ ಆಭರಣಗಳ ಸಂಗ್ರಹ ಅತ್ಯಂತ ಆಕರ್ಷಕ ಹಾಗೂ ಉತ್ತಮವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮಂಗಳೂರಿನ ಜನತೆಗೆ ಇಂತಹ ವಿಶೇಷ ಆಭರಣ ಸಂಗ್ರಹವನ್ನು ವೀಕ್ಷಿಸಲು ಮತ್ತು ಖರೀದಿಸಲು ಇದೊಂದು ಉತ್ತಮ ಅವಕಾಶವಾಗಿದ್ದು, ಈ ವಿಶೇಷ ಪ್ರದರ್ಶನಕ್ಕೆ ಎಲ್ಲರೂ ಭೇಟಿ ನೀಡುವಂತೆ ಆಹ್ವಾನಿಸಿದರು.
ಇನ್ನೋರ್ವ ಅತಿಥಿಯಾಗಿ ಭಾಗವಹಿಸಿದ್ದ ಯೆನೆಪೋಯ ಇನ್‌ಸ್ಟಿಟ್ಯೂಟ್ ಆಫ್ ಆರ್ಟ್ಸ್, ಕಾಮರ್ಸ್ ಆ್ಯಂಡ್ ಮ್ಯಾನೇಜ್‌ಮೆಂಟ್‌ನ ಪ್ರಾಧ್ಯಾಪಕರಾದ ಡಾ. ಮಂಜುಶ್ರೀ ಚಂದ್ರಹಾಸ್ ಶೆಟ್ಟಿ ಅವರು ಮಾಲಬಾರ್ ಗೋಲ್ಡ್ & ಡೈಮಂಡ್ಸ್‌ನ ಗ್ರಾಹಕ ಸೇವೆಯನ್ನು ಶ್ಲಾಘಿಸಿದರು. ಆರ್ಟಿಸ್ಟ್ರಿ ಪ್ರದರ್ಶನದಲ್ಲಿನ ವಿಶಿಷ್ಟ ಆಭರಣಗಳ ಸಂಗ್ರಹದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು. ಜೊತೆಗೆ ಸಂಸ್ಥೆಯು ಕೈಗೊಳ್ಳುತ್ತಿರುವ ವಿವಿಧ ಸಾಮಾಜಿಕ ಹೊಣೆಗಾರಿಕೆ (CSR) ಚಟುವಟಿಕೆಗಳನ್ನು ಪ್ರಶಂಸಿಸಿದರು.
ಕಾರ್ಯಕ್ರಮದ ಮತ್ತೋರ್ವ ಅತಿಥಿಯಾದ ಎಂ. ಸಂಜೀವ ಶೆಟ್ಟಿ, ಪುತ್ತೂರು ಸಂಸ್ಥೆಯ ಮಾಲೀಕರಾದ ಶ್ರೀಮತಿ ಇಂದು ಶಿವಶಂಕರ್ ಅವರು ಆರ್ಟಿಸ್ಟ್ರಿ ಪ್ರದರ್ಶನದಲ್ಲಿನ ಆಕರ್ಷಕ ಆಭರಣ ಸಂಗ್ರಹವನ್ನು ಮೆಚ್ಚಿ, ಪ್ರದರ್ಶನದ ಯಶಸ್ಸಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮಾಲಬಾರ್ ಗೋಲ್ಡ್ & ಡೈಮಂಡ್ಸ್‌ನ ಸ್ಟೋರ್ ಹೆಡ್ *ಶ್ರೀ ಹಫೀಜ್ ರೆಹಮಾನ್, ಶೋರೂಮ್ ಮ್ಯಾನೇಜರ್ **ಶ್ರೀ ಗಿರೀಶ್ ರೈ, ಸೇಲ್ಸ್ ಮ್ಯಾನೇಜರ್ *ಶ್ರೀ ಮೊಹಮ್ಮದ್ ಸಮೀರ್ ಹಾಗೂ ಮಾರ್ಕೆಟಿಂಗ್ ಮ್ಯಾನೇಜರ್ ಶೇಖ್ ಫರ್ಹಾನ್ ಉಪಸ್ಥಿತರಿದ್ದರು.
ಮಂಗಳೂರಿನ ಗ್ರಾಹಕರಿಗೆ ವಿಶಿಷ್ಟ ವಿನ್ಯಾಸದ ಆಭರಣಗಳನ್ನು ಪರಿಚಯಿಸುವ ಉದ್ದೇಶದಿಂದ ಆಯೋಜಿಸಿರುವ ಈ ಆರ್ಟಿಸ್ಟ್ರಿ ಪ್ರದರ್ಶನವು ಡಿಸೆಂಬರ್ 7ರವರೆಗೆ ಮಂಗಳೂರು ಶೋರೂಮ್‌ನಲ್ಲಿ ನಡೆಯಲಿದ್ದು, ಆಭರಣ ಪ್ರಿಯರು ಈ ವಿಶೇಷ ಅವಕಾಶದ ಸದುಪಯೋಗ ಪಡೆದುಕೊಳ್ಳುವಂತೆ ಮಾಲಬಾರ್ ಗೋಲ್ಡ್ & ಡೈಮಂಡ್ಸ್ ವತಿಯಿಂದ ಕೋರಲಾಗಿದೆ.

