HomeFresh Newsಸಿದ್ದರಾಮಯ್ಯ ಸರಕಾರದ ರಾಜ್ಯ ದಾಖಲೆ | ಸಾಧನಾ ಸಮಾವೇಶದಲ್ಲಿ ಗಿನ್ನೆಸ್ ದಾಖಲೆ | ದೇಶಕ್ಕೆ ಒದಗಿದೆ...

ಸಿದ್ದರಾಮಯ್ಯ ಸರಕಾರದ ರಾಜ್ಯ ದಾಖಲೆ | ಸಾಧನಾ ಸಮಾವೇಶದಲ್ಲಿ ಗಿನ್ನೆಸ್ ದಾಖಲೆ | ದೇಶಕ್ಕೆ ಒದಗಿದೆ ಈಗ ಕರ್ನಾಟಕ ಮಾದರಿ

ಈ ಅವಧಿಯ ಸರಕಾರವು ಮೂರು ವರುಷ ಮುಗಿಸಿದ್ದರ ಸಂಬಂಧ ತುಮಕೂರಿನಲ್ಲಿ ನಡೆದ ಸಮಾವೇಶದಲ್ಲಿ ಗಿನ್ನೆಸ್ ದಾಖಲೆ ಮತ್ತು ರಾಜ್ಯ ದಾಖಲೆಗಳು ದಾಖಲಾದವು.
1.52ಲಕ್ಷ ಫಲಾನುಭವಿಗಳಿಗೆ ಒಂದೇ ದಿನ ಹಕ್ಕುಪತ್ರ ವಿತರಿಸಲಾಯಿತು.

ಗಿನ್ನೆಸ್ ದಾಖಲೆ ಸಂಸ್ಥೆಯ ಪ್ರತಿನಿಧಿ ಸ್ಟಪ್ನಿಲ್ ಡಂಗರಿಕರ್ ಹಾಜರಿದ್ದು ಅದನ್ನು ದಾಖಲಿಸಿಕೊಂಡರು. ಗಿನ್ನೆಸ್ ದಾಖಲೆಯ ಪ್ರಮಾಣಪತ್ರವನ್ನು ಸರಕಾರಕ್ಕೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೃಷ್ಣ ಭೈರೇಗೌಡರು ನೂರು ಪೌತಿ ಖಾತೆ ಮಾಡಲಾಗದವರು ಇದನ್ನು ವಿರೋಧಿಸುವುದು ಹಾಸ್ಯಾಸ್ಪದ ಎಂದರು.
ಬಿಜೆಪಿಯವರಿಗೆ ಕರ್ನಾಟಕವೇ ಮಾದರಿ.

ಅವರು ಪಶ್ಚಿಮ ಬಂಗಾಳ, ಅಸ್ಸಾಂ, ದಿಲ್ಲಿ, ಹರಿಯಾಣ ಎಂದು ಹತ್ತಾರು ರಾಜ್ಯಗಳಲ್ಲಿ ಅನುಸರಿಸುತ್ತಿರುವುದು ಕರ್ನಾಟಕದ ಪಂಚ ಗ್ಯಾರಂಟಿ ಮಾದರಿಯನ್ನು, ಗುಜರಾತ್ ಮಾದರಿ ಗುಡ್ಡ ಹತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲಾದ ಕಾಂಗ್ರೆಸ್ ನಾಯಕರು ಚುಚ್ಚಿದರು.

ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದವರು ನಡೆಸಿದ ಅಧ್ಯಯನದ ಪ್ರಕಾರ ಕರ್ನಾಟಕದ ಐದು ಗ್ಯಾರಂಟಿಗಳು ಬಡವರ ಬದುಕಿನಲ್ಲಿ ಸಾಮಾಜಿಕ ಬದಲಾವಣೆ ತಂದ ಕಾರ್ಯಕ್ರಮಗಳಾಗಿವೆ ಎಂದು ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಹೇಳಿದರು.


ಸಿದ್ದರಾಮಯ್ಯನವರು ಎಂಟು ವರುಷ ಮುಖ್ಯಮಂತ್ರಿ ಆಗಿದ್ದರು. ಕರ್ನಾಟಕದಲ್ಲಿ ಇದು ದೀರ್ಘಾವಧಿಯ ದಾಖಲೆ. ಹಿಂದೆ ದೇವರಾಜ ಅರಸರು ಎಳೂವರೆ ವರುಷಕ್ಕೂ ಹೆಚ್ಚು ಕಾಲ ಮುಖ್ಯಮಂತ್ರಿ ಆಗಿದ್ದರು.

600 ಅಂಗನವಾಡಿ ಕಾರ್ಯಕರ್ತೆಯರ ನೇರ ನೇಮಕಾತಿ, 682 ಕೋಟಿ ರೂಪಾಯಿಗಳ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ, ಸರಕಾರದ ಯೋಜನೆಗಳ ಫಲಾನುಭವಿಗಳು 3,000ಕ್ಕೂ ಹೆಚ್ಚು ಬಸ್ಸುಗಳಲ್ಲಿ ಬಂದಿದ್ದರು ಎಂದು ಈ ಸಮಾವಾಶವು ಕೆಲವು ಸಾಧನೆಗಳನ್ನು ಕಂಡಿತು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments