HomeFresh Newsಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಸಿಗರೇಟ್ ಮಾರಾಟ: ತೀವ್ರ ಕಾರ್ಯಾಚರಣೆಗೆ ಎಡಿಸಿ ಸೂಚನೆ

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಸಿಗರೇಟ್ ಮಾರಾಟ: ತೀವ್ರ ಕಾರ್ಯಾಚರಣೆಗೆ ಎಡಿಸಿ ಸೂಚನೆ

ಮಂಗಳೂರು: ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೆ ಅವಕಾಶ ನೀಡುವ ಹಾಗೂ ಕಾನೂನುಬಾಹಿರವಾಗಿ ಬಿಡಿಬಿಡಿಯಾಗಿ (ಚಿಲ್ಲರೆಯಾಗಿ) ಸಿಗರೇಟ್ ಮತ್ತು ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿ, ಹೋಟೆಲ್, ಕೆಫೆ ಹಾಗೂ ಗೂಡಂಗಡಿಗಳ ವಿರುದ್ಧ ಜಂಟಿ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸುವಂತೆ ಅಪರ ಜಿಲ್ಲಾಧಿಕಾರಿ ಕೆ. ರಾಜು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಅವರು ಶುಕ್ರವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ (ಓಖಿಅP) ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣಕ್ಕಾಗಿ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದರೂ ಸಹ, ಸಾರ್ವಜನಿಕ ಸ್ಥಳಗಳಲ್ಲಿ ಚಿಲ್ಲರೆಯಾಗಿ ಸಿಗರೇಟ್ ಮಾರಾಟ ಮಾಡುತ್ತಿರುವ ಹಾಗೂ ಹೋಟೆಲ್, ಕೆಫೆಗಳಲ್ಲಿ ಗ್ರಾಹಕರಿಗೆ ಧೂಮಪಾನ ಮಾಡಲು ಅವಕಾಶ ನೀಡುತ್ತಿರುವ ಕುರಿತು ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬರುತ್ತಿವೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ, ಪೆÇಲೀಸ್ ಇಲಾಖೆ ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳು ಜಂಟಿಯಾಗಿ ದಿಢೀರ್ ದಾಳಿಗಳನ್ನು ನಡೆಸಬೇಕು. ಕೋಟ್ಪಾ (ಅಔಖಿPಂ – ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ ಕಾಯ್ದೆ) ನಿಯಮಗಳನ್ನು ಉಲ್ಲಂಘಿಸುವವರ ಲೈಸನ್ಸ್ ರದ್ದುಗೊಳಿಸುವುದು ಸೇರಿದಂತೆ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಶರತ್ತು ವಿಧಿಸಿ ಅಂಗಡಿ, ಹೋಟೆಲ್‍ಗಳಿಗೆ ಲೈಸೆನ್ಸ್
ಗ್ರಾಮ ಪಂಚಾಯಿತಿಗಳು ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಇನ್ನು ಮುಂದೆ ಹೊಸದಾಗಿ ಅಂಗಡಿ ಮತ್ತು ಹೋಟೆಲ್‍ಗಳಿಗೆ ವ್ಯಾಪಾರ ಪರವಾನಗಿ (ಲೈಸೆನ್ಸ್) ನೀಡುವಾಗ ಹಾಗೂ ನವೀಕರಿಸುವಾಗ, ‘ಸಿಗರೇಟ್ ಹಾಗೂ ತಂಬಾಕು ಉತ್ಪನ್ನಗಳನ್ನು ಚಿಲ್ಲರೆಯಾಗಿ (ಬಿಡಿಬಿಡಿಯಾಗಿ) ಮಾರಾಟ ಮಾಡುವಂತಿಲ್ಲ’ ಎಂಬ ಕಡ್ಡಾಯ ಶರತ್ತನ್ನು ವಿಧಿಸಿ ಪರವಾನಗಿ ನೀಡುವಂತೆ ಅಪರ ಜಿಲ್ಲಾಧಿಕಾರಿಗಳು ಸೂಚಿಸಿದರು.


ಸಭೆಯಲ್ಲಿ ಉಪಸ್ಥಿತರಿದ್ದ ಸಹಾಯಕ ಪೆÇಲೀಸ್ ಆಯುಕ್ತೆ ನಜ್ಮಾ ಫಾರೂಕಿ ಅವರು ಧೂಮಪಾನದಿಂದ ಯುವಜನತೆ ಮತ್ತು ವಿದ್ಯಾರ್ಥಿಗಳ ಮೇಲಾಗುತ್ತಿರುವ ದುಷ್ಪರಿಣಾಮಗಳ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದರು. ಶಾಲಾ-ಕಾಲೇಜು ವಿದ್ಯಾರ್ಥಿಗಳು ಮತ್ತು ಅಪ್ರಾಪ್ತ ವಯಸ್ಕರಿಗೆ ತಂಬಾಕು ಉತ್ಪನ್ನಗಳು ಮತ್ತು ಸಿಗರೆಟ್‍ಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಹಲವಾರು ದೂರುಗಳು ಕೇಳಿಬರುತ್ತಿವೆ. ಇಂದಿನ ಹದಿಹರೆಯದವರು ಸಾಮಾಜಿಕ ಜಾಲತಾಣಗಳ ಆಕರ್ಷಣೆ ಹಾಗೂ ಪ್ರಭಾವಕ್ಕೆ ಒಳಗಾಗಿ ಇಂತಹ ವ್ಯಸನಗಳಿಗೆ ಬಲಿಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಶಾಲಾ-ಕಾಲೇಜುಗಳ 100 ಯಾರ್ಡ್ ವ್ಯಾಪ್ತಿಯಲ್ಲಿ ತಂಬಾಕು ಮಾರಾಟವನ್ನು ಸಂಪೂರ್ಣವಾಗಿ ನಿμÉೀಧಿಸಲಾಗಿದ್ದು, ಅಪ್ರಾಪ್ತರಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿ ಮಾಲೀಕರ ವಿರುದ್ಧ ಕಾರ್ಯಾಚರಣೆಗೆ ಪೆÇಲೀಸರು ಸಹಕರಿಸಲಿದ್ದಾರೆ ಎಂದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಮಾತನಾಡಿ, ತಂಬಾಕು ಉತ್ಪನ್ನಗಳ ಅಕ್ರಮ ಮಾರಾಟ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನದ ವಿರುದ್ಧ ಜಿಲ್ಲಾ ತಂಬಾಕು ನಿಯಂತ್ರಣ ಸಮಿತಿಯು ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದೆ. ನಿಯಮ ಉಲ್ಲಂಘಿಸಿದ ತಪ್ಪಿತಸ್ಥರಿಗೆ ಸೂಕ್ತ ದಂಡ ವಿಧಿಸುವುದರ ಜೊತೆಗೆ, ಅಂತಹ ಅಂಗಡಿಗಳ ಪರವಾನಗಿಯನ್ನು (ಲೈಸೆನ್ಸ್) ರದ್ದುಗೊಳಿಸಲು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳಿಗೆ ಶಿಫಾರಸು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ವೆನ್‍ಲಾಕ್ ಜಿಲ್ಲಾ ಆಸ್ಪತ್ರೆಯ ಅಧೀಕ್ಷಕ ಡಾ. ಶಿವಪ್ರಕಾಶ್ ಮಾತನಾಡಿ, ವೆನ್‍ಲಾಕ್ ಆಸ್ಪತ್ರೆ ಆವರಣದೊಳಗೆ ಸಿಗರೇಟ್, ಗುಟ್ಕಾ ಸೇರಿದಂತೆ ಯಾವುದೇ ತಂಬಾಕು ಉತ್ಪನ್ನಗಳನ್ನು ತರುವುದು ಹಾಗೂ ಧೂಮಪಾನ ಮಾಡುವುದನ್ನು ಸಂಪೂರ್ಣವಾಗಿ ನಿμÉೀಧಿಸಲಾಗಿದೆ. ಈ ನಿಯಮದ ಕಟ್ಟುನಿಟ್ಟಿನ ಪಾಲನೆಗಾಗಿ ಆಸ್ಪತ್ರೆ ಆವರಣದಲ್ಲಿ ಪ್ರತಿದಿನ ತಪಾಸಣೆ ಮತ್ತು ಕಾರ್ಯಾಚರಣೆ ನಡೆಸಲಾಗುತ್ತಿದ್ದು, ನಿಯಮ ಉಲ್ಲಂಘಿಸಿದವರಿಂದ ದಂಡ ವಸೂಲಿ ಮಾಡಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಂಬಾಕು ಮುಕ್ತ ಯುವ ಅಭಿಯಾನ 4.0 ಕ್ಕೆ ಅಪರ ಜಿಲ್ಲಾಧಿಕಾರಿಗಳು ಚಾಲನೆ ನೀಡಿದರು. ಈ ಅಭಿಯಾನ 60 ದಿನಗಳ ಕಾಲ ಅಭಿಯಾನ ಜಿಲ್ಲೆಯ ಶಾಲೆ – ಕಾಲೇಜುಗಳಲ್ಲಿ ನಡೆಯಲಿದೆ.
ಸಭೆಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕಾರ್ಯಕ್ರಮ ಅಧಿಕಾರಿ ಡಾ. ನವೀನ್ ಚಂದ್ರ ಕುಲಾಲ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಮಂಗಳೂರು ಗ್ರಾಮಾಂತರ: ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮಂಗಳೂರು,ನ.20(ಕ.ವಾ):- ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಮಂಗಳೂರು (ಗ್ರಾಮಾಂತರ) ವ್ಯಾಪ್ತಿಯ ಅಂಗನವಾಡಿ ಕಂ ಕ್ರಷ್ ಕಾರ್ಯಕರ್ತೆ (1) ಬಬ್ಬುಕಟ್ಟೆ, ಉಳ್ಳಾಲ ನಗರಸಭೆ ವಾರ್ಡ್ ನಂ 19 (2) ಮದನಿನಗರ-2, ಮುನ್ನೂರುಗ್ರಾಮ ಉಳ್ಳಾಲ ನಗರಸಭೆ (3) ಒಂಭತ್ತುಕೆರೆ, ಉಳ್ಳಾಲನಗರ ಸಭೆ ವಾರ್ಡ್ ನಂ.12, (4) ಮೊಂಟೆಪದವು, ಮಂಜನಾಡಿ ಗ್ರಾಮ, (5) ಐಕುಕೊಪ್ಪಳ, ಹರೇಕಳ ಗ್ರಾಮ, (6) ಪೆರ್ಮುದೆ, ಪೆರ್ಮುದೆ ಗ್ರಾಮ, (7) ತಾರಿಕಂಬಳ, ವಾರ್ಡ್ ನಂ 07 ಬಜ್ಪೆ ಗ್ರಾಮ (8) ಮೇಲೆಕ್ಕಾರುಪದವು, ತೆಂಕ ಎಕ್ಕಾರು ಗ್ರಾಮ (9) ಲಿಂಗಪ್ಪಯ್ಯಕಾಡು-2, ಕಾರ್ನಾಡು ಗ್ರಾಮ ಮುಲ್ಕಿನಗರ ಪಂಚಾಯತ್ ಒಟ್ಟು 9 ಕಂ ಕ್ರಷ್ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ರಾಜ್ಯದ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಈ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿ ಲಭ್ಯವಿಲ್ಲದೇ ಇದ್ದಲ್ಲಿ ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ 10 ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು.
ಅಂಗನವಾಡಿ ಕಂ ಕ್ರಷ್ ಸಹಾಯಕಿ (1) ನಾಗರಕಟ್ಟೆ, ಮಾರ್ಪಾಡಿ ವಾರ್ಡ್-5 (2) ಮದನಿನಗರ-2, ಮುನ್ನೂರುಗ್ರಾಮ ಉಳ್ಳಾಲನಗರಸಭೆ (3) ಒಂಭತ್ತುಕೆರೆ, ಉಳ್ಳಾಲನಗರ ಸಭೆ ವಾರ್ಡ್ ನಂ.12, (4) ಮೊಂಟೆಪದವು, ಮಂಜನಾಡಿ ಗ್ರಾಮ, (5) ಐಕುಕೊಪ್ಪಳ, ಹರೇಕಳ ಗ್ರಾಮ, (6) ಪೆರ್ಮುದೆ, ಪೆರ್ಮುದೆ ಗ್ರಾಮ, (7) ತಾರಿಕಂಬಳ, ವಾರ್ಡ್ ನಂ 07ಬಜ್ಪೆ ಗ್ರಾಮ (8) ಮೇಲೆಕ್ಕಾರುಪದವು, ತೆಂಕ ಎಕ್ಕಾರು ಗ್ರಾಮ (9) ಲಿಂಗಪ್ಪಯ್ಯಕಾಡು-2, ಕಾರ್ನಾಡು ಗ್ರಾಮ ಮುಲ್ಕಿನಗರ ಪಂಚಾಯತ್ (10) ವiರಿಯಾಡಿ, ವiರಿಯಾಡಿ ಗ್ರಾಮ ವಾರ್ಡ್ ನಂ 01 ಮೂಡಬಿದ್ರೆ (11) ಮಾಡೂರು, ಕೋಟೆಕಾರು ಪಟ್ಟಣಪಂಚಾಯತ್ 03 ಹಾಗೂ ಒಟ್ಟು 11 ಕಂ ಕ್ರಷ್ ಅಂಗನವಾಡಿ ಸಹಾಯಕಿ ಹುದ್ದೆಗೆ ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ 10ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಸದರಿ ವಿದ್ಯಾರ್ಹತೆಯ ಅಭ್ಯರ್ಥಿಯು ಲಭ್ಯವಿಲ್ಲದಿದ್ದಲ್ಲಿ ಕನಿಷ್ಟ 7ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಗರಿಷ್ಠ ವಯೋಮಿತಿ 35 ವರ್ಷ ಆಗಿರುತ್ತದೆ.
ಅರ್ಜಿ ಸಲ್ಲಿಸಲು ಡಿಸೆಂಬರ್ 2 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ ನಗರದ ಉರ್ವ ಮಾರ್ಕೆಟ್ ಕಟ್ಟಡದ 3ನೇ ಮಹಡಿಯಲ್ಲಿರುವ ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಛೇರಿ ಸಂಪರ್ಕಿಸಬಹುದು ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಗಳೂರು ನಗರ: ಅಂಗನವಾಡಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಮಂಗಳೂರು,ನ.20(ಕ.ವಾ):- ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಮಂಗಳೂರು (ನಗರ) ವ್ಯಾಪ್ತಿಯ (1) ಹೊಯಿಗೆ ಬಜಾರ್ ವಾರ್ಡ್ ನಂ. 57 ಮಂಗಳೂರು ತೋಟ ಗ್ರಾಮ, (2) ಪೋಲಿಸ್ ಲೈನ್ 2 ವಾರ್ಡ್ ನಂ 46 ಅತ್ತಾವರ ಗ್ರಾಮ, (3) ಕೆ.ಪಿ.ಟಿ. ವಾರ್ಡ್ ನಂ 22 ಪದವು ಗ್ರಾಮ, (4) ಕೋಡಿಕಲ್ 1 ವಾರ್ಡ್ ನಂ 17 ದೇರೆಬೈಲ್ ಗ್ರಾಮ, (5) ಬೆಂಗ್ರೆ ಮಹಿಳಾ ಸಮಾಜ ವಾರ್ಡ್ ನಂ 60 ತೋಟ ಬೆಂಗ್ರೆ ಗ್ರಾಮ, (6) ಉರ್ವ ಕ್ಯಾಶ್ಯೂ ವಾರ್ಡ್ ನಂ26 ದೇರೆಬೈಲ್ ಗ್ರಾಮ, (7) ಯೂತ್ ಸ್ಪೋಟ್ಸ್ ತಣ್ಣೀರು ಬಾವಿ ವಾರ್ಡ್ ನಂ 12 ಪಣಂಬೂರು ಗ್ರಾಮ, (8) ಕೋಡಿಕಲ್ ಕ್ರಾಸ್ ವಾರ್ಡ್ ನಂ 16 ಬಂಗ್ರಕೂಳೂರು ಗ್ರಾಮ, (9) ಬಂಗ್ರ ಕೂಳೂರು ವಾರ್ಡ್ ನಂ 16 ಬಂಗ್ರಕೂಳೂರು ಗ್ರಾಮ (10) ನ್ಯೂ ಫ್ರೆಂಡ್ಸ್ ಮುಲ್ಲಕಾಡು ವಾರ್ಡ್ ನಂ 18 ಕಾವೂರು ಗ್ರಾಮ, (11) ಬಸವನಗರ -1 ವಾರ್ಡ್ ನಂ 13 ಕುಂಜತ್ತಬೈಲ್ ಗ್ರಾಮ, (12) ಪಣಂಬೂರು ಗ್ರಾಮ ಪಂಚಾಯತ್ ವಾರ್ಡ್ ನಂ 10 ಬೈಕಂಪಾಡಿ ಗ್ರಾಮ, (13) ವ್ಯಾಯಾಮ ಶಾಲೆ ಕೂರಿಕಟ್ಟ ವಾರ್ಡ್ ನಂ 11 ಪಣಂಬೂರು ಗ್ರಾಮ, (14) ಗುಡ್ಡಕೊಪ್ಳ ವಾರ್ಡ್ ನಂ 7 ಇಡ್ಯಾ ಗ್ರಾಮ, (15) 4ನೇ ಬ್ಲಾಕ್ ಕಾಟಿಪಳ್ಳ ವಾರ್ಡ್ ನಂ 4 ಕಾಟಿಪಳ್ಳ ಗ್ರಾಮ, (16) 5ನೇ ಬ್ಲಾಕ್ ಯುವಕ ಮಂಡಲ ವಾರ್ಡ್ ನಂ. 4 ಕಾಟಿಪಳ್ಳ ಗ್ರಾಮ, (17) ಅತ್ತಾವರ ಶಾಲೆ ವಾರ್ಡ್ ನಂ 47 ಮಿಲಾಗ್ರಿಸ್ ಗ್ರಾಮ, (18) ಫೈಸಲ್ ನಗರ ವಾರ್ಡ್ ನಂ 53 ಬಜಾಲ್ ಗ್ರಾಮ, (19) ಕಾರ್ಮಿಕ ಕಾಲೋನಿ ವಾರ್ಡ್ ನಂ 35 ಪದವು ಸೆಂಟ್ರಲ್ ಗ್ರಾಮ ಹಾಗೂ (20) ಮಯುರ ಗೇಮ್ಸ್ ಕ್ಲಬ್ ವಾರ್ಡ್ ನಂ 35 ಪದವು ಸೆಂಟ್ರಲ್ ಒಟ್ಟು 20 ಕಂ ಕ್ರಷ್ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.
ಕರ್ನಾಟಕ ರಾಜ್ಯದ ಪದವಿ ಪೂರ್ವ ಶಿಕ್ಷಣ ಇಲಾಖೆಯ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಈ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿ ಲಭ್ಯವಿಲ್ಲದೇ ಇದ್ದಲ್ಲಿ ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ 10ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಹಾಗೂ ಕಂ ಕ್ರಷ್ ಅಂಗನವಾಡಿ ಸಹಾಯಕಿ ಹುದ್ದೆಗೆ ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ 10ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಸದರಿ ವಿದ್ಯಾರ್ಹತೆಯ ಅಭ್ಯರ್ಥಿಯು ಲಭ್ಯವಿಲ್ಲದಿದ್ದಲ್ಲಿ ಕನಿಷ್ಟ 7ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು. ಗರಿಷ್ಠ ವಯೋಮಿತಿ 35ವರ್ಷ ಆಗಿರುತ್ತದೆ.
ಅರ್ಜಿ ಸಲ್ಲಿಸಲು ಡಿಸೆಂಬರ್ 21 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗೆ ನಗರದ ವೆಲೆನ್ಸಿಯಾ ಸಿಲ್ವಾ ಕ್ರಾಸ್ ರೋಡ್‍ನಲ್ಲಿರುವ ಶಿಶು ಅಭಿವೃದ್ಧಿ ಯೋಜನಾಧಿಕಾರಿ (ಮಂಗಳೂರು ನಗರ) ಕಛೇರಿ ಸಂಪರ್ಕಿಸುವಂತೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉದ್ಯೋಗವಕಾಶ: ಸಂದರ್ಶನ ನವೆಂಬರ್ 23 ರಂದು ಮಂಗಳೂರು,ನ.20(ಕ.ವಾ):- ಸಹಯೋಗ್ ಮಲ್ಟಿಸ್ಟೇಟ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಕಂಪೆನಿಯ ವತಿಯಿಂದ ಮಂಗಳೂರಿನಲ್ಲಿ ಖಾಲಿ ಇರುವ ಬ್ರಾಂಚ್ ಆಪರೇಷನ್ ಮ್ಯಾನೇಜರ್, ಬ್ಲಾಕ್ ಡೆವೆಲಪ್‍ಮೆಂಟ್ ಆಫೀಸರ್ ಹಾಗೂ ಬಿಸಿನೆಸ್ ಡೆವಲಪ್‍ಮೆಂಟ್ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ ನೇರ ಸಂದರ್ಶನವನ್ನು ನವೆಂಬರ್ 23 ರಂದು ಬೆಳಿಗ್ಗೆ 10 ರಿಂದ 1:30 ರವರೆಗೆ ನಗರದ ಜ್ಯೋತಿ ಕೆ.ಎಂ.ಸಿ ಹಾಸ್ಪಿಟಲ್ ಪಕ್ಕದಲ್ಲಿರುವ ಸೌಜಾ ಆರ್ಕೇಡ್‍ನಲ್ಲಿರುವ ಸಹಯೋಗ್ ಮಲ್ಟಿಸ್ಟೇಟ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‍ನಲ್ಲಿ ಆಯೋಜಿಸಲಾಗಿದೆ.
ಸಂದರ್ಶನದಲ್ಲಿ ಪಿ.ಯು.ಸಿ. ಹಾಗೂ ಯಾವುದೇ ಪದವಿ ಹೊಂದಿರುವ ಅಭ್ಯರ್ಥಿಗಳು ಸ್ವ-ವಿವರವುಳ್ಳ ಬಯೋಡೇಟಾದೊಂದಿಗೆ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಮಂಗಳೂರು ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯಂಗ್ ಪೆÇ್ರಫೆಷನಲ್ ಹುದ್ದೆ: ಡಿಸೆಂಬರ್ 8 ರಂದು ಸಂದರ್ಶನ ಮಂಗಳೂರು,ನ.20(ಕ.ವಾ):- ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆಯ (Iಅಂಖ-ಅಒಈಖI) ಮಂಗಳೂರು ಪ್ರಾದೇಶಿಕ ಕೇಂದ್ರದಲ್ಲಿ “ಪರಿಶಿಷ್ಟ ಜಾತಿ ಉಪ ಯೋಜನೆ” (Sಛಿheಜuಟe ಅಚಿsಣe Sub Pಟಚಿಟಿ – SಅSP) ಎಂಬ ಯೋಜನೆಯಡಿ ‘ಯಂಗ್ ಪೆÇ್ರಫೆಷನಲ್-I'(ಙouಟಿg Pಡಿoಜಿessioಟಿಚಿಟ-I)(ಒಂದು ಹುದ್ದೆ) ಆಯ್ಕೆಗಾಗಿ 2026 ರ ಡಿಸೆಂಬರ್ 8 ರಂದು ಬೆಳಿಗ್ಗೆ 10 ಗಂಟೆಗೆ ನೇರ ಸಂದರ್ಶನ ನಡೆಯಲಿದೆ.
ಹೆಚ್ಚಿನ ವಿವರಗಳಿಗೆ ವೆಬ್‍ಸೈಟ್ ತಿತಿತಿ.ಛಿmಜಿಡಿi.oಡಿg.iಟಿ ಪರಿಶೀಲಿಸಬಹುದು ಎಂದು ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆಯ ಮಂಗಳೂರು ಪ್ರಾದೇಶಿಕ ಕೇಂದ್ರದ ಪ್ರಕಟಣೆ ತಿಳಿಸಿದೆ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಪ್ರವಾಸ ಮಂಗಳೂರು,ನ.20(ಕ.ವಾ):- ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ ಪುರುμÉೂೀತ್ತಮ ಬಿಳಿಮಲೆ ಅವರು ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ನವೆಂಬರ್ 23 ಮಧ್ಯಾಹ್ನ 2- ಮಂಗಳೂರು ಆಗಮನ, 24 ಮತ್ತು 25 ರಂದು ಬೆಳಿಗ್ಗೆ 11:30 – ಸುಳ್ಯ ತಾಲೂಕಿನ ಪಂಜ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಂಸ್ಥೆಯ ಮುಂದಿನ ಬೆಳವಣಿಗೆ ಕುರಿತು ಪೆÇೀಷಕರ ಹಾಗೂ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯರು ಹಿರಿಯ ವಿದ್ಯಾರ್ಥಿಗಳೊಂದಿಗೆ ವಿಚಾರ ವಿಮರ್ಶೆ, ನಂತರ ವಾಸ್ತವ್ಯ, 26 ರಂದು ಬೆಳಿಗ್ಗೆ 11:30- ಮುಂದುವರೆದ ಕಾರ್ಯಕ್ರಮ, 28 ರಂದು ಬೆಳಿಗ್ಗೆ 11- ಮಂಗಳೂರು ಸ್ಥಳೀಯ ಕಾರ್ಯಕ್ರಮ, ವಾಸ್ತವ್ಯ. 29 ರಂದು ಬೆಳಿಗ್ಗೆ 8:30- ಅಧ್ಯಕ್ಷರು ಸುಳ್ಯದಿಂದ ಕೊಡಗು ಜಿಲ್ಲೆಗೆ ತೆರಳಲಿದ್ದಾರೆ.

ರಾಷ್ಟ್ರೀಯ ಲೋಕ ಅದಾಲತ್ ಡಿಸೆಂಬರ್ 12 ರಂದು ಮಂಗಳೂರು,ನ.20(ಕ.ವಾ):- ನ್ಯಾಯ ಎನ್ನುವುದು ಪ್ರತಿಯೊಬ್ಬ ನಾಗರಿಕನ ಹಕ್ಕು. ಆ ನ್ಯಾಯವನ್ನು ಸುಲಭವಾಗಿ, ಕಡಿಮೆ ವೆಚ್ಚದಲ್ಲಿ ಮತ್ತು ತ್ವರಿತವಾಗಿ ಜನಸಾಮಾನ್ಯರಿಗೆ ತಲುಪಿಸುವುದೇ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಮುಖ ಉದ್ದೇಶ.
ರಾಷ್ಟ್ರೀಯ ಹಾಗೂ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಗಳ ನಿರ್ದೇಶನದಂತೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮಂಗಳೂರು, ಬೆಳ್ತಂಗಡಿ, ಬಂಟ್ವಾಳ, ಪುತ್ತೂರು, ಸುಳ್ಯ ಮತ್ತು ಮೂಡಬಿದಿರೆ ತಾಲ್ಲೂಕು ಕಾನೂನು ಸೇವಾ ಸಮಿತಿಗಳ ವತಿಯಿಂದ ಡಿಸೆಂಬರ್ 12 ರಂದು ರಾಷ್ಟ್ರೀಯ ಲೋಕ ಅದಾಲತ್ ಆಯೋಜಿಸಲಾಗಿದೆ.
ಈ ಲೋಕ ಅದಾಲತ್‍ನ ಅಂಗವಾಗಿ ಸಾರ್ವಜನಿಕರಲ್ಲಿ ಕಾನೂನು ಅರಿವು ಮೂಡಿಸಲು ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳು ಹಾಗೂ ಇನ್ನೂ ನ್ಯಾಯಾಲಯದ ಮೆಟ್ಟಿಲೇರದ ರಾಜಿ ಮಾಡಿಕೊಳ್ಳಬಹುದಾದ ವಿವಾದಗಳನ್ನು ಪರಸ್ಪರ ಮಾತುಕತೆ ಮತ್ತು ಸೌಹಾರ್ದಯುತ ಸಂಧಾನದ ಮೂಲಕ ಬಗೆಹರಿಸಿಕೊಳ್ಳಲು ಲೋಕ ಅದಾಲತ್ ಅತ್ಯುತ್ತಮ ವೇದಿಕೆಯಾಗಿದೆ. ವಿಶೇಷವಾಗಿ ಹಣಕಾಸಿನ ವ್ಯವಹಾರಗಳು, ಚೆಕ್ ಬೌನ್ಸ್ ಪ್ರಕರಣಗಳು, ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳು, ಆಸ್ತಿವಿಭಾಗದ ವ್ಯಾಜ್ಯಗಳು, ವೈವಾಹಿಕ ವಿವಾದಗಳು, ಬ್ಯಾಂಕ್ ಸಾಲದ ಪ್ರಕರಣಗಳು ಹಾಗೂ ಇತರೆ ರಾಜಿಯಾಗಬಹುದಾದ ಪ್ರಕರಣಗಳನ್ನು ಲೋಕ ಅದಾಲತ್‍ನಲ್ಲಿ ಇತ್ಯರ್ಥಪಡಿಸಿಕೊಳ್ಳಬಹುದು.
ಲೋಕ ಅದಾಲತ್‍ನ ವಿಶೇಷತೆ: ತ್ವರಿತ ನ್ಯಾಯ – ಅನಗತ್ಯ ವಿಳಂಬಕ್ಕೆ ಮುಕ್ತಿ, ಉಚಿತ ನ್ಯಾಯ – ಯಾವುದೇ ನ್ಯಾಯಾಲಯದ ಶುಲ್ಕವಿಲ್ಲ, ಸೌಹಾರ್ದಯುತ ಪರಿಹಾರ – ವಿವಾದಕ್ಕೆ ಮಾತುಕತೆಯ ಮೂಲಕ ಅಂತ್ಯ, ಶಾಶ್ವತ ಪರಿಹಾರ – ಲೋಕ ಅದಾಲತ್‍ನ ತೀರ್ಪು ಅಂತಿಮ ಹಾಗೂ ಉಭಯ ಪಕ್ಷಗಳಿಗೂ ಬದ್ಧವಾಗಿರುತ್ತದೆ. ಈಗಾಗಲೇ ಪಾವತಿಸಿರುವ ನ್ಯಾಯಾಲಯದ ಶುಲ್ಕವನ್ನು ನಿಯಮಾನುಸಾರ ಹಿಂದಿರುಗಿಸಲಾಗುತ್ತದೆ.
ಕಾನೂನು ನೆರವು ಅಥವಾ ಹೆಚ್ಚಿನ ಮಾಹಿತಿಗೆ ಉಚಿತ ಕಾನೂನು ಸೇವಾ ಸಹಾಯವಾಣಿ ಓಂಐSಂ – 15100 ಅನ್ನು ಸಂಪರ್ಕಿಸಬಹುದು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಹಾಗೂ ತಾಲ್ಲೂಕು ಕಾನೂನು ಸೇವಾ ಸಮಿತಿಗಳ ಕಾರ್ಯದರ್ಶಿಗಳು ಸಾರ್ವಜನಿಕರಿಗೆ ಅಗತ್ಯ ಮಾರ್ಗದರ್ಶನ ಮತ್ತು ನೆರವು ನೀಡಲು ಲಭ್ಯವಿರುತ್ತಾರೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಟ್ರಾಫಿಕ್ ಕೇಸು: ದಂಡದಲ್ಲಿ ಶೇ. 50 ರಿಯಾಯಿತಿ ಮಂಗಳೂರು,ನ.20(ಕ.ವಾ):- 2026 ರ ಅಕ್ಟೋಬರ್ 29 ರ ಸರ್ಕಾರದ ಆದೇಶದಂತೆ, ಸಾರಿಗೆ ಇಲಾಖೆಯಲ್ಲಿ 1991 ರಿಂದ 2025 ರವರೆಗಿನ ಅವಧಿಯಲ್ಲಿ ದಾಖಲಾಗಿರುವ ಹಾಗೂ ಪೆÇಲೀಸ್ ಇಲಾಖೆಯ ಸಂಚಾರಿ ಇ-ಚಲನ್ ವ್ಯವಸ್ಥೆಯಲ್ಲಿ ದಾಖಲಾದ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ. 50ರಷ್ಟು ರಿಯಾಯಿತಿ ನೀಡಲಾಗಿದೆ.
ಈ ವಿಶೇಷ ರಿಯಾಯಿತಿಯನ್ನು ಮುಂಬರುವ ರಾಷ್ಟ್ರೀಯ ಲೋಕ ಅದಾಲತ್‍ನ ಅಂಗವಾಗಿ ಸಾರ್ವಜನಿಕರ ಅನುಕೂಲಕ್ಕಾಗಿ ಜಾರಿಗೆ ತರಲಾಗಿದೆ. ಅದರಂತೆ, 2026 ರ ನವೆಂಬರ್ 21 ರಿಂದ ಡಿಸೆಂಬರ್ 11 ರವರೆಗೆ ಬಾಕಿ ಇರುವ ಅರ್ಹ ಪ್ರಕರಣಗಳಿಗೆ ಮಾತ್ರ ಈ ರಿಯಾಯಿತಿ ಅನ್ವಯವಾಗುತ್ತದೆ.
ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ದಂಡದ ಮೊತ್ತವನ್ನು ಪಾವತಿಸಲು ಕಾಯುತ್ತಿರುವ ವಾಹನ ಮಾಲೀಕರು ಹಾಗೂ ಚಾಲಕರಿಗೆ ಇದು ಉತ್ತಮ ಅವಕಾಶವಾಗಿದೆ.
ಆದ್ದರಿಂದ, ಸಾರ್ವಜನಿಕರು ಈ ವಿಶೇಷ ರಿಯಾಯಿತಿಯ ಸದುಪಯೋಗ ಪಡೆದುಕೊಂಡು, ತಮ್ಮ ವಾಹನಗಳಿಗೆ ಸಂಬಂಧಿಸಿದಂತೆ ಬಾಕಿ ಇರುವ ಅರ್ಹ ಇ-ಚಲನ್ ಪ್ರಕರಣಗಳ ದಂಡವನ್ನು ಶೇ. 50ರಷ್ಟು ರಿಯಾಯಿತಿಯಲ್ಲಿ ಪಾವತಿಸುವ ಮೂಲಕ ಪ್ರಕರಣಗಳನ್ನು ಸುಲಭವಾಗಿ ಇತ್ಯರ್ಥಪಡಿಸಿಕೊಳ್ಳಬಹುದು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಧಾನಪರಿಷತ್ ಸಭಾಪತಿ ಸಲೀಂ ಅಹಮದ್ ಜಿಲ್ಲೆಗೆ ಮಂಗಳೂರು,ನ.20(ಕ.ವಾ):- ಕರ್ನಾಟಕ ವಿಧಾನಪರಿಷತ್ ಸಭಾಪತಿ ಸಲೀಂ ಅಹಮದ್ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ನವೆಂಬರ್ 23 ರಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರು ಆಗಮನ, 11:30 – ನಗರದ ಟೌನ್‍ಹಾಲ್‍ನಲ್ಲಿ ನಡೆಯುವ ಅಭಿನಂದನೆ ಸಮಿತಿ ಮಂಗಳೂರು ವತಿಯಿಂದ ಹಮ್ಮಿಕೊಂಡಿರುವ ಸನ್ಮಾನ ಕಾರ್ಯಕ್ರಮ, 4:30- ಮಂಗಳೂರು ತಾಜ್ ವಿವಾಂತ ಹೋಟೆಲ್‍ನಲ್ಲಿ ಜಿಲ್ಲೆಯ ಪ್ರಮುಖ ಆಹ್ವಾನಿತರೊಂದಿಗೆ ಆಯೋಜಿಸಿರುವ ಸ್ನೇಹಕ್ಕೂಟ ಕಾರ್ಯಕ್ರಮ, ನಂತರ ನಗರದಲ್ಲಿ ವಾಸ್ತವ್ಯ.
ನವೆಂಬರ್ 24 ರಂದು ಬೆಳಿಗ್ಗೆ 9.30 ಗಂಟೆಗೆ ಸಕ್ರ್ಯೂಟ್ ಹೌಸ್‍ನಲ್ಲಿ ಪತ್ರಿಕಾಗೋಷ್ಠಿ, 11.40 – ಸಭಾಪತಿಗಳು ಮಂಗಳೂರಿನಿಂದ ಹೈದರಾಬಾದ್‍ಗೆ ತೆರಳಲಿದ್ದಾರೆ.

ರಸ್ತೆ ಕಾಮಗಾರಿ ಪರಿವೀಕ್ಷಣೆಗೆ ಕೇಂದ್ರದ ಅಧಿಕಾರಿ ಆಗಮನ
ಮಂಗಳೂರು,ನ.20(ಕ.ವಾ):-ಯೋಜನಾ ವಿಭಾಗ ಮಂಗಳೂರು ವ್ಯಾಪ್ತಿಯಲ್ಲಿ ಅನುಷ್ಟಾನಗೊಳಿಸಲಾಗಿ ನಿರ್ವಹಣೆ ಹಂತದಲ್ಲಿರುವ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ -3 ಕಾಮಗಾರಿಗಳು ಹಾಗೂ ಅನುಷ್ಟಾನ ಹಂತದಲ್ಲಿರುವ ಪಿಎಂ-ಜನ್‍ಮನ್ ರಸ್ತೆ ಕಾಮಗಾರಿಗಳ ಪರಿವೀಕ್ಷಣೆ ಕೈಗೊಳ್ಳುವುದಕ್ಕಾಗಿ ರಾಷ್ಟ್ರೀಯ ಗುಣನಿಯಂತ್ರಣ ಮಾನಿಟರ್(ಎನ್‍ಕ್ಯುಎಂ) ರಾಜುವಂಶಿ ರಾಕೇಶ್ ಅವರು ನವೆಂಬರ್ 21 ರಿಂದ 25 ರವರೆಗೆ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಲಿರುವ ಪ್ರಯುಕ್ತ ಸಾರ್ವಜನಿಕರು ರಾಷ್ಟ್ರೀಯ ಗುಣಮಟ್ಟ ಮೇಲ್ವಿಚಾರಕರು ಇವರನ್ನು ಈ ಕೆಳಕಂಡ ವಿಳಾಸದಲ್ಲಿ ಸಂಪರ್ಕಿಸಬಹುದು ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಳಾಸ : ಕಾರ್ಯನಿರ್ವಾಹಕ ಇಂಜಿನಿಯರ್‍ರವರ ಕಛೇರಿ, ಯೋಜನಾ ವಿಭಾಗ, ಪಿ.ಡಬ್ಲ್ಯು.ಡಿ. ಮಿನಿ ಸೌಧ, 3 ನೇ ಮಹಡಿ, ಮೈದಾನ ರಸ್ತೆ, ಮಂಗಳೂರು-575001 ಮೊ. ಸಂ. 9793552368.

ಮಂಗಳೂರು ಗ್ಯಾರಂಟಿ ಸಮಿತಿ ನೂತನ ಅಧ್ಯಕ್ಷರ ಪದಗ್ರಹಣ
ಮಂಗಳೂರು,ನ.20(ಕ.ವಾ):- ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಮಂಗಳೂರು ತಾಲೂಕು ಅನುμÁ್ಠನ ಸಮಿತಿಗೆ ಅಧ್ಯಕ್ಷರಾಗಿ ಅಲೆಸ್ಟೈನ್ ಕ್ಲೈವ್ ಡಿಕುನ್ಹಾ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ, ಮಾಜಿ ಅಧ್ಯಕ್ಷÀ ಸುರೇಂದ್ರ ಬಿ ಕಂಬಳಿ, ಸ್ಟ್ಯಾನಿ ಅಲ್ವಟ್ಸ್, ಶ್ಯಾಲೆಟ್ ಪಿಂಟೊ, ಪದ್ಮರಾಜ್ ಆರ್ ಪೂಜಾರಿ, ನಾಗೇಂದ್ರ ಕುಮಾರ್ ಜಪ್ಪಿನಮೊಗರು, ಕುಮಾರಿ ಅಪ್ಪಿ, ಮೀನಾ ಟೆಲ್ಲೀಸ್, ಲಿವಿಟ ನೊರೆನ್ಹಾ, ಅನಿತಾ ಡಿ ಸೋಜಾ, ಕವಿತ ವಾಸು, ಶಶಿಕಲಾ ಪದ್ಮನಾಭ, ಯುಪಿ ಇಬ್ರಾಹಿಂ, ರಚನಾ ಅಧ್ಯಕ್ಷರಾದ ಜಾನ್ ಮೊಂತೆರೋ, ಎಮ್‍ಸಿಸಿ ಬ್ಯಾಂಕ್ ಮುಖ್ಯಸ್ಥ ಅನಿಲ್ ಲೋಬೋ, ಮಾಜಿ ಮೇಯರ್ ಶಶಿಧರ್ ಹೆಗಡೆ ಹಾಗೂ ಗ್ಯಾರಂಟಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments