ದಕ್ಷಿಣ ಆಫ್ರಿಕಾದ ಹದಿನಾರು ವರುಷದ ಹುಡುಗಿಯ ಪ್ರಯೋಗವೊಂದು ಈಗ ಬಿಬಿಸಿ ಮೂಲಕ ಜಗಜ್ಜಾಹೀರು ಆಗಿದೆ.
ತೆಂಕಣ ಆಫ್ರಿಕಾದ ಕಿಯಾರಾ ನಿರ್ಗಿನ್ ತಮ್ಮ ಪ್ರದೇಶದಲ್ಲಿ ನೀರಿನ ಕೊರತೆಯಿಂದ ನಿರೀಕ್ಷಿತ ಬೆಳೆ ಬಾರದ್ದನ್ನು ಗಮನಿಸಿದ್ದಳು. ಕೆಲವು ಪ್ರಯೋಗಗಳ ಬಳಿಕ ಎಸೆಯುವ ಕಿತ್ತಳೆ ಸಿಪ್ಪೆ ಇದಕ್ಕೆ ಪರಿಹಾರ ಎಂದು ಕಂಡುಕೊಂಡಿದ್ದಾಳೆ.
ಕಿತ್ತಳೆ ಸಿಪ್ಪೆಯು ನೀರು ಹೀರಿಕೊಂಡು ಅದನ್ನು ಸಾಕಷ್ಟು ಸಮಯ ಉಳಿಸಿಕೊಳ್ಳುವ ಗುಣ ಹೊಂದಿದೆ. ಆದ್ದರಿಂದ ನೀರಿನ ಕೊರತೆ ನೀಗಲು, ಅದೂ ತೋಟಗಾರಿಕೆ ಬೆಳೆಗೆ ಇದು ಸೂಕ್ತ ಎಂದು ಕಂಡುಕೊಳ್ಳಲಾಗಿದೆ. ವಿಜ್ಞಾನಿಗಳು ಭಪ್ಪರೆ ಭಳಿರೆ ಮಗಳೇ ಎಂದಿದ್ದಾರೆ. ಬಿಬಿಸಿ ಇದನ್ನು ಇಡೀ ಭೂಮಂಡಲಕ್ಕೆ ಮುಟ್ಟಿಸಿದೆ.
