ನಾರಾಯಣ ಗುರುಗಳು ದೇವಾಲಯ ಕಟ್ಟಿದ್ದು ನಿಮ್ಮದೇ ಆಲಯ ಇರಲಿ, ದಾಸ್ಯ ಹೇರುವ ಆಲಯಕ್ಕೆ ಹೋಗಬೇಡಿ ಎಂದು.
ಆದರೆ ಅನುಯಾಯಿಗಳು ವೈದಿಕರಾಗತೊಡಗಿದ್ದರಿಂದ ಕೊನೆಗೆ ಬೇಸತ್ತು ನಿನ್ನನ್ನು ನೀನು ನೋಡಿಕೋ ಎಂದು ಗುರುಗಳು ಮೂರ್ತಿಯ ಬದಲು ಗರ್ಭಗುಡಿಯ ಒಳಗೆ ಕನ್ನಡಿ ಇಟ್ಟರು. ಮುಖ್ಯವಾಗಿ ಮುಂಬಯಿಯವರಿಂದ ಉಚ್ಚಿಲ ಮಹಾಲಕ್ಷ್ಮಿ ಮಂದಿರ ಆಗುವಾಗ ಅದನ್ನು ನಾಲ್ಕಾರು ಜನರು ಉಡುಪಿಯ ರಾಮಪ್ಪ ತಿಮ್ಮಪ್ಪ, ಕುಡಲದ ತಿಂಗಳಾಯ ಮತ್ತಿತರರು ವಿರೋಧಿಸಿದರು.
ದೇವಾಲಯಗಳ ಜಾಗದ ಜಗಳ, ದುಡ್ಡಿನ ಜಗಳ, ಜಾತಿ ರಾಜಕೀಯ, ಸರಕಾರೀ ಪಾರುಪತ್ಯ, ಕಾಸಗಿ ಲೂಟಿ, ಜನರ ಶೋಷಣೆ, ಮಹಿಳೆಯರ ಬಗೆಗೆ ತಾರತಮ್ಯ, ಪೂಜೆಯ ಹಕ್ಕಿನ ಒಳಜಗಳ ಇತ್ಯಾದಿ ವಿಷಯದ ಮೇಲೆ ರಾಮಪ್ಪ ತಿಮ್ಮಪ್ಪನವರು ಒಂದು ದೊಡ್ಡ ಲೇಖನ ಬರೆದಿದ್ದರು.
ಅದನ್ನು ಮುಂಬಯಿಯವರು ಪ್ರಕಟಿಸಲಿಲ್ಲ; ಅವರೇ 1949ರಲ್ಲಿ ಪ್ರಕಟಿಸಿದರು. ಆ ಕಿರು ಪುಸ್ತಕವನ್ನು ಈಗಲೂ ಅವರ ಮಗ ಜಯವಂತ್ ಅವರು ರಕ್ಷಿಸಿ ಇಟ್ಟುಕೊಂಡಿದ್ದಾರೆ.
ದದ್ದುಳಿಯಲ್ಪಟ್ಟ ಜನರು ಈಗ ಮತ್ತಷ್ಟು ತಮ್ಮ ಶೋಷಕ ಧರ್ಮದ ಭಟ್ಟಂಗಿಗಳು ಆಗಿದ್ದಾರೆ.
