ಕಟಪಾಡಿ ಮೀನು ಮಾರುಕಟ್ಟೆಗೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೀನುಗಾರ ಮಹಿಳೆಯರೊಂದಿಗೆ ಕಟ್ಟಡದಲ್ಲಿನ ಕುಂದು ಕೊರತೆಯ ಬಗ್ಗೆ ಚರ್ಚಿಸಿದರು.
ಮೀನು ಮಾರುಕಟ್ಟೆಯ ಕೊಳೆಚೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡುವ ಬಗ್ಗೆ ಮತ್ತು ಮೀನು ಮಾರುಕಟ್ಟೆಯ ಕಟ್ಟಡ ಮೂಲ ಸೌಕರ್ಯ ದುರಸ್ತಿಗೊಳಿಸುವುದಾಗಿ ಶಾಸಕರು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಲಾಲಾಜಿ ಆರ್ ಮೆಂಡನ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶಿಲ್ಪಾ ಜಿ ಸುವರ್ಣ, ಕಟಪಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಸುಭಾಸ್ ಬಲ್ಲಾಳ್, ಅಶೋಕ್ ರಾವ್, ಕವಿತಾ ಸುವರ್ಣ, ಮೂಡಬೆಟ್ಟು ಶಕ್ತಿ ಕೇಂದ್ರದ ನಿತಿನ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಕಟಪಾಡಿ ಮೀನು ಮಾರುಕಟ್ಟೆ ಭೇಟಿ ನೀಡಿ ಕಟ್ಟಡದಲ್ಲಿನ ಕುಂದು ಕೊರತೆ ಪರಿಶೀಲಿಸಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ
RELATED ARTICLES
