HomeFresh Newsತರುಣಿ ಸಂಗಾತಿಯನ್ನು ತಂತ್ರದಿಂದ ಕೊಂದ ಆರೋಪ;ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಭಾರತೀಯನ ಸೆರೆ

ತರುಣಿ ಸಂಗಾತಿಯನ್ನು ತಂತ್ರದಿಂದ ಕೊಂದ ಆರೋಪ;ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಭಾರತೀಯನ ಸೆರೆ

ಅಮೆರಿಕ ಸಂಯುಕ್ತ ಸಂಸ್ಥಾನದ ಓಹಿಯೋದಲ್ಲಿ ಅಪಘಾತ ನಡೆಸಿ ಜೊತೆಗಾತಿ ಮತ್ತು ಇನ್ನೂ ಹುಟ್ಟದ ಹೊಟ್ಟೆಯಲ್ಲಿನ ಮಗುವನ್ನು ಕೊಂದ ಆರೋಪದ ಮೇಲೆ ಭಾರತೀಯನೊಬ್ಬನನ್ನು ಬಂಧಿಸಲಾಗಿದೆ.


ಅಪಘಾತ ಮಾಡಬೇಕು ಎಂಬ ಉದ್ದೇಶದಿಂದಲೇ ರೇಂಜ್ ರೋವರ್ ವೆಲಾರ್ ವೇಗವನ್ನು ನೂರು ಮೈಲಿಗೆ ಹೆಚ್ಚಿಸಲಾಗಿತ್ತು ಎನ್ನಲಾಗಿದೆ. ಇದರಲ್ಲಿ ಸಣ್ಣ ಪ್ರಾಯದ ಗರ್ಭಿಣಿ ಮಡದಿ ಸಾವು ಕಂಡಿದ್ದಾಳೆ. ಗರ್ಭಿಣಿ ಆಶ್ಲೀ ಆ ವಾಹನದಲ್ಲಿ ಬಾಡಿಗೆದಾರಳಾಗಿ ಹೋಗುತ್ತಿದ್ದಳು. ಫೆಬ್ರವರಿ 16ರಂದು ಈ ಅಪಘಾತ ನಡೆದು ಹೊಟ್ಟೆಯ ಮಗುವಿನ ಸಹಿತ ಅವಳ ಸಾವಾಗಿದೆ. ಅದು ಯೋಜಿತ ಕೊಲೆ ಎಂದು ಈಗ ಪೋಲೀಸರು ಹೇಳಿದ್ದಾರೆ ಹಾಗೂ ಭಾರತೀಯ ಮೂವತ್ತಮೂರರ ತರ್ಸೆಮ್ ಸಿಂಗ್‍ನನ್ನು ಬಂಧಿಸಿದ್ದಾರೆ. ಈತನು ಅಲ್ಲಿಯವಳೇ ಆದ ಆಶ್ಲೀ ಜೊತೆಗೆ ಸಂಬಂಧ ಬೆಳಿಸಿದ್ದ, ದೂರವಾದರೂ ಬ್ಲ್ಯಾಕ್ ಮೆಯಿಲ್ ಮಾಡಿದ್ದ. ಆತ ಅಮೆರಿಕದಲ್ಲಿ ಉಳಿಯಬಾರದು ಎಂದು ಆಶ್ಲೀ ಮನೆಯವರು ತಿಳಿಸಿದ್ದಾರೆ


ಓಹಿಯೋದ ರಾಜ್ಯ ಹೆದ್ದಾರಿಯ ವರದಿಯಂತೆ ಉದ್ದೇಶಪೂರ್ವಕವಾಗಿ ಗರ್ಭಿಣಿ ತರುಣಿ ಸಾಯುವಂತೆ ವಾಹನವನ್ನು ಗುದ್ದಲಾಗಿದೆ. ತೀವ್ರ ಗಾಯಗೊಂಡು, ರಕ್ತಸ್ರಾವವಾಗಿ ಆಕೆಯ ಸಾವಾಗಿದೆ. ಫೆಡರಲ್ ಕಾನೂನಿನಂತೆ ಸಿಂಗ್ ಘೋರ ಪಾತಕ ಮಾಡಿದ್ದು, ಜೈಲು ಶಿಕ್ಷೆ, ದಂಡದ ಬಳಿಕ ಗಡಿಪಾರು ಖಂಡಿತ ಎನ್ನಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments