HomeFresh Newsಪುತ್ತೂರು : ಜೂ.11ರಂದು ಮೆಡ್‌ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯಾಭಿವೃದ್ಧಿ ಕಾರ್ಯಕ್ರಮಗಳು

ಪುತ್ತೂರು : ಜೂ.11ರಂದು ಮೆಡ್‌ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯಾಭಿವೃದ್ಧಿ ಕಾರ್ಯಕ್ರಮಗಳು

ಮೆಡ್‌ಲ್ಯಾಂಡ್ ಫೌಂಡೇಶನ್ ಪ್ರಾಯೋಜಕತ್ವದಲ್ಲಿ ಹಲವು ಉಚಿತ ಆರೋಗ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಜೂ.11ರಂದು ಪುತ್ತೂರಿನ ಸಂಪ್ಯಾದ ಮೆಡ್‌ಲ್ಯಾಂಡ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದೆ.


ಜೂ.11ರ ಬೆಳಿಗ್ಗೆ 9 ಗಂಟೆಯಿಂದ ಆಸ್ಪತ್ರೆಯಲ್ಲಿ ಬೃಹತ್ ರಕ್ತದಾನ ಶಿಬಿರ, ಫ್ಯಾಟಿ ಲಿವರ್ ಪತ್ತೆ ಹಾಗೂ ಯಕೃತ್ತಿನ ಆರೋಗ್ಯ ಮೌಲ್ಯ ಮಾಪನಕ್ಕಾಗಿ ಉಚಿತ ಫೈಬ್ರೋಸ್ಕ್ಯಾನ್ ತಪಾಸಣೆ, ಸಂತಾನೋತ್ಪತ್ತಿ ಸಮಸ್ಯೆಗಳ ತಪಾಸಣೆ , ಸಲಹೆ ಹಾಗೂ ತಜ್ಞರ ಮಾಗದರ್ಶನಕ್ಕಾಗಿ ಉಚಿತ ಬಂಜೆತನ ತಪಾಸಣಾ ಶಿಬಿರ, ಕಣ್ಣಿನ ಆರೋಗ್ಯಕ್ಕಾಗಿ ತಜ್ಞರ ಉಚಿತ ಸಲಹೆ ಮತ್ತು ಪರೀಕ್ಷೆಯನ್ನು ಒಳಗೊಂಡ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಮೆಡ್‌ಲ್ಯಾಂಡ್ ಫೌಂಡೇಶನ್ ಆರೋಗ್ಯಕರ ಸಮಾಜ ನಿರ್ಮಾಣದ ಉದ್ದೇಶದಿಂದ ಪರಿಣಾಮಕಾರಿ ಆರೋಗ್ಯ ಸೇವಾ ಕಾರ್ಯಕ್ರಮಗಳು ಹಾಗೂ ಆರೋಗ್ಯ ಜಾಗೃತಿ ಅಭಿಯಾನಗಳನ್ನು ನಿರಂತರವಾಗಿ ನಡೆಸುತ್ತಿದೆ. ಈ ಮಹತ್ವದ ಕಾರ್ಯದ ಭಾಗವಾಗಿ ಬೃಹತ್ ರಕ್ತದಾನ ಶಿಬಿರ, ಫ್ಯಾಟಿ ಲಿವರ್‌ಗಾಗಿ ಉಚಿತ ಫೈಬ್ರೋಸ್ಕ್ಯಾನ್ ತಪಾಸಣೆ, ಉಚಿತ ಫರ್ಟಿಲಿಟಿ ಕ್ಯಾಂಪ್, ಹಾಗೂ ಉಚಿತ ನೇತ್ರತಪಾಸಣಾ ಶಿಬಿರಗಳನ್ನು ಆಯೋಜಿಸಲಾಗಿದೆ. ಈ ಕಆರ್ಯಕ್ರಮಗಳ ಮುಖ್ಯ ಉದ್ದೇಶವು ರೋಗಗಳ ಆರಂಭಿಕ ಹಂತದಲ್ಲೇ ಪತ್ತೆಹಚ್ಚುವುದು, ಆರೋಗ್ಯದ ನಗ್ಗೆ ಜಾಗೃತಿ ಮೂಡಿಸುವುದು ಹಾಗೂ ಎಲ್ಲರಿಗೂ ಸುಲಭವಾಗಿ ವೈದ್ಯಕೀಯ ಸೇವೆಗಳನ್ನು ತಲುಪಿಸುವುದಾಗಿದೆ. ಆರೋಗ್ಯಕರ ಮತ್ತು ಉತ್ತಮ ಜೀವನಕ್ಕಾಗಿ ಜನರು ಮುಂಚಿತ ಕ್ರಮಗಳನ್ನು ಕೈಗೊಳ್ಳಲು ಪ್ರೋತ್ಸಾಹಿಸುವುದು ಮೆಡ್‌ಲ್ಯಾಂಡ್ ಫೌಂಡೇಶನ್‌ನ ಬದ್ಧತೆಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments