HomeFresh Newsಪುತ್ತೂರು: ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯ ಕೆ.ಸಿ. ಪಾಟಾಳಿ ಪಡುಮಲೆ ನಿಧನ

ಪುತ್ತೂರು: ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯ ಕೆ.ಸಿ. ಪಾಟಾಳಿ ಪಡುಮಲೆ ನಿಧನ

ಪುತ್ತೂರು: ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಪುತ್ತೂರು ಇದರ ಆಜೀವ ಸದಸ್ಯರು, ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿವೃತ್ತ ಮುಖ್ಯೋಪಾಧ್ಯಾಯ ಕೆ.ಸಿ. ಪಾಟಾಳಿ ಪಡುಮಲೆ (78 ವ.) ಇಂದು ಮುಂಜಾನೆ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಪ್ರಥಮವಾಗಿ ಸುಳ್ಯ ಪದವು ಅನುದಾನಿತ ಶಾಲೆಯಲ್ಲಿ ಕರ್ತವ್ಯ ಆರಂಭಿಸಿದ ಕೆ.ಸಿ. ಪಾಟಾಳಿ ಪಡುಮಲೆ ಅವರು, ಬಳಿಕ ಈಶ್ವರಮಂಗಲ ಶಾಲೆಗೆ ವರ್ಗಾವಣೆಗೊಂಡು ಸಹ ಶಿಕ್ಷಕರಾಗಿ, ನಂತರ ಮುಖ್ಯೋಪಾಧ್ಯಾಯರಾಗಿ ಅನನ್ಯ ಸೇವೆ ಸಲ್ಲಿಸಿದ್ದರು. ಇತ್ತೀಚೆಗೆ ಆರೋಗ್ಯ ಹದಗೆಟ್ಟಿದ್ದರಿಂದ ಮಗಳ ಮನೆಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದರು.

ಅಂತ್ಯಕ್ರಿಯೆ ಪಡುಮಲೆಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿದ್ದಾರೆ.

Top egg exporting country | Top egg importing country
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments