HomeFresh Newsಬೆಟ್ಟ ಹತ್ತುವುದರಲ್ಲಿ ಚಾಂಪಿಯನ್ ಆಡುಗಳು

ಬೆಟ್ಟ ಹತ್ತುವುದರಲ್ಲಿ ಚಾಂಪಿಯನ್ ಆಡುಗಳು

ಮಾನವರಿಗೆ ಕುರಿಯಷ್ಟೆ ಉಪಯುಕ್ತ ಮತ್ತು ಕುರಿಯ ಸಂಗಾತಿಯಾದರೂ ಆಡುಗಳು ಬೇರೆಯೇ ಪ್ರಾಣಿಗಳಾಗಿವೆ.

ಕುರಿಯಲ್ಲಿ ಉಣ್ಣೆ ಹೆಚ್ಚು, ಆಡುಗಳಲ್ಲಿ ಹಾಲು ಹೆಚ್ಚು. ಉಳಿದಂತೆ ಎರಡೂ ಸಮಾನ ಬಳಕೆಯವು. ಕುರಿ ಅಡಿ ತಲೆ ಹಾಕಿದರೆ, ಆಡು ತಲೆಯೆತ್ತಿ ಬೆಟ್ಟ, ಮರ ಎಲ್ಲ ಹತ್ತುತ್ತದೆ. ಸಿಟ್ಟು ಬಂದರೆ ತಲೆಯಿಂದ ಘಟ್ಟಿಸುತ್ತದೆ. ಇವು ಹಸುವಿನಂತೆಯೇ ನಾಲ್ಕು ಕೋಣೆಯ ಜಠರ ಹೊಂದಿವೆ. ಹುಲ್ಲು ಜೊತೆಗೆ, ನಾನಾ ಬಗೆಯ ಎಲೆ ತಿನ್ನುತ್ತದೆ.

ಹತ್ತು ಸಾವಿರ ವರುಷಗಳ ಹಿಂದೆ ಇಂದಿನ ಇರಾನ್ ಸುತ್ತಿನಲ್ಲಿ ಕಾಡು ಆಡನ್ನು ಜನರು ಪಳಗಿಸಿ ಸಾಕತೊಡಗಿದರು. ಯೂರೇಶಿಯಾದ ಬೆಜೋರೆ ಐಬೆಕ್ಸ್ ಬೆಟ್ಟದ ಆಡು ಇವುಗಳಿಗೆಲ್ಲ ಮೂಲ. ಪುರಾಣ, ಇತಿಹಾಸಗಳಲ್ಲೂ ಆಡು ದಾಖಲಾಗಿದೆ. ದನದ ಬಳಿಕ ಹೆಚ್ಚು ಬಳಕೆಯಾಗುವ ಹಾಲು ಆಡಿನದು. ಲೋಕದಲ್ಲಿ 110 ಕೋಟಿ ಹಾಗೂ ಭಾರತದಲ್ಲಿ 15 ಕೋಟಿ ಆಡುಗಳು ಇವೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments