ಖ್ಯಾತ ಕಾಲ್ಚೆಂಡು ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಹೊಡೆದ ಚೆಂಡು ತಪ್ಪಾಗಿ ಹೋದುದು ಎಲ್ಲರನ್ನೂ ದಿಗ್ಭ್ರಮೆಗೊಳಿಸಿತು; ಪೋರ್ಚುಗಲ್‍ಗೆ ಸಮ ಸಮ ಮಾತ್ರ ಸಾಧ್ಯವಾಯಿತು.
ಡೆಮಾಕ್ರೆಟಿಕ್ ರಿಪಬ್ಲಿಕ್ ಆಫ್ ಕಾಂಗೋ ತಂಡವು ಫುಟ್ಬಾಲಿನಲ್ಲಿ ಪೋರ್ಚುಗಲ್‍ಗೆ ಕೆಳ ರ್ಯಾಂಕಿನ ತಂಡ. ಆದರೆ ಖ್ಯಾತನಮರು ಕೂಡ ಕೆಲವೊಮ್ಮೆ ತಪ್ಪುತ್ತಾರೆ. ಪೋರ್ಚುಗಲ್‍ನ ಕ್ರಿಸ್ಟಿಯಾನೊ ರೊನಾಲ್ಡೊ ಹೊಡೆದ ಗೋಲು ತಪ್ಪಿ ಹೋಯಿತು. ಪೋರ್ಚುಗಲ್ ತಂಡದವರು ಮಾತ್ರವಲ್ಲ, ಕ್ರೀಡಾಂಗಣದಲ್ಲಿದ್ದ ಅಭಿಮಾನಿಗಳೆಲ್ಲ ಮೌನವಾದರು. ಅಂತಿಮವಾಗಿ ಪೋರ್ಚುಗಲ್ ತಂಡವು 1-1 ಗೋಲು ಡ್ರಾ ಮಾಡಿಕೊಳ್ಳುವುದು ಮಾತ್ರ ಸಾಧ್ಯವಾಯಿತು. ಈ ಬಾರಿಯ ಫೇವರಿಟ್‍ಗಳಲ್ಲಿ ಒಂದು ತಂಡವಾದ ಪೋರ್ಚುಗಲ್‍ನ ಡ್ರಾ ಹಲವರನ್ನು ವಿವಂಚನೆಗೆ ದೂಡಿತು.
ಪೋರ್ಚುಗಲ್ ಮೊದಲ ಬಾರಿ ತೀರಾ ಕಳಪೆ ಏಳು ಶಾಟ್‍ಗಳನ್ನು ಮಾತ್ರ ಸಾಧಿಸಿತು. 783 ಪಾಸ್‍ಗಳ ಏಳು ಗೋಲು ಯತ್ನದಲ್ಲಿ ಒಂದು ಮಾತ್ರ ಗೋಲಾಯಿತು. ಬರೇ 249 ಪಾಸ್ ಮಾಡಿದ ಡಿಆರ್ ಕಾಂಗೋ ಎಂಟು ಶಾಟ್ ಪಡೆದು ಒಂದು ಗೋಲು ಸಾಧಿಸಿತು. 41ರ ಪ್ರಾಯದಲ್ಲಿರುವ ರೊನಾಲ್ಡೊ ಈ ಪಂದ್ಯದಲ್ಲಂತೂ ತಮ್ಮ ಚಾಕಚಕ್ಯತೆ ಕಾಲ್ಚಳಕ ಕಳೆದುಕೊಂಡಿದ್ದರು. ಡಿಆರ್ ಕಾಂಗೋದ ಯೋವಾನ್ ವಿಸ್ಸಾ ಅವರು ಫಿಫಾ ವಿಶ್ವ ಕಪ್‍ನಲ್ಲಿ ದೇಶದ ಮೊದಲ ಗೋಲನ್ನು ದಾಖಲಿಸಿದರು.
ಫಿಫಾ ವಿಶ್ವ ಕಪ್ 2026ರ ಶಾಕ್; ತಪ್ಪಿದ ಕ್ರಿಸ್ಟಿಯಾನೊ ರೊನಾಲ್ಡೊ ಹೊಡೆದ ಗೋಲು
RELATED ARTICLES

