ಡೆನ್ನಾನ, ಬ್ಯಾಂಡ್ ವಾದ್ಯ, ನಾಟಕ ಎಡ್ಡೆoಡು ಹೀಗೆ ನಿರಂತರ ಸಮಾಜಮುಖಿ ಉತ್ತಮ ಸಂದೇಶ ಹೊಂದಿರುವ ನಾಟಕಗಳನ್ನು ನೀಡುತ್ತಾ ಬಂದಿರುವ ಸುಭಾಸ್ ಜೈನ್ ನಲ್ಲೂರು ಸಾರಥ್ಯದ ಡೆನ್ನಾನ ಕಲಾವಿದರು ಕಾರ್ಕಳ ತಂಡದ ಹೊಸ ನಾಟಕದ ಶೀರ್ಷಿಕೆ ಅನಾವರಣ ಕಾರ್ಯಕ್ರಮ ಕಾರ್ಕಳದ ಶ್ರೀ ಬಾಲಾಜಿ ಮೊಬೈಲ್ಸ್ ನ ಮಾಲಕರಾದ ಪ್ರಶಾಂತ್ ಶೆಣೈ ಮತ್ತು ಅವರ ಪತ್ನಿ ವೈಷ್ಣವಿ ಶೆಣೈ ಯವರ ಹಸ್ತದಲ್ಲಿ ಬಿಡುಗಡೆಗೊಳಿಸಲಾಯಿತು . ಈ ಸಂದರ್ಭದಲ್ಲಿ ತಂಡದ ಸದಸ್ಯರಾದ ಜಗನ್ನಾಥ ಶೆಟ್ಟಿ ಕುಡ್ಲ, ಶರತ್ ಶೆಟ್ಟಿ ಬೋಳ, ಅಭಿಲಾಶ್ , ರಕ್ಷಿತ್, ರಾಜೇಶ್ ಪೈ, ಮಂಜು, ಹಾಗೂ ಬಾಲಾಜಿ ಮೊಬೈಲ್ಸ್ ನ ಸಿಬ್ಬಂದಿಗಳು ಉಪಸ್ಥಿತರಿದ್ದರು, ಬಾಲಾಜಿ ಮೊಬೈಲ್ಸ್ ನ ಮಾಲಕರಾದ ಪ್ರಶಾಂತ್ ಶೆಣೈ ಇವರು ಕಾರ್ಕಳದಲ್ಲಿ ಸದಾ ಉತ್ತಮ ಸಂದೇಶ ಭರಿತ ನಾಟಕಗಳನ್ನೇ ನೀಡುತ್ತಾ ಬರುತ್ತಿರುವ ಡೆನ್ನಾನ ಕಲಾವಿದರು ಕಾರ್ಕಳ ತಂಡಕ್ಕೆ ಶುಭ ಹಾರೈಸಿದರು, ಪರಪ್ಪಾಡಿ ಪ್ರಶಾಂತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು
ಡೆನ್ನಾನ ಕಲಾವಿದರು ಕಾರ್ಕಳ ತಂಡದ ಹೊಸ ನಾಟಕ ಗೆಜ್ಜೆ ಯ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ
RELATED ARTICLES

