ಪುತ್ತೂರು ತಾಲ್ಲೂಕು ಕಚೇರಿ ಸಭಾಂಗಣ ದಲ್ಲಿ ಪುತ್ತೂರು ತಹಸೀಲ್ದಾರ್ ಎಸ್. ಬಿ. ಕೊಡಲಗಿ ಯವರ ಅಧ್ಯಕ್ಷ ತೆ ಯಲ್ಲಿ ಹಾಗೂ ಪುತ್ತೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಗಳಾದ ಹರೀಶ್. ಕೆ ಪುತ್ತೂರು ನಗರ ಸಭೆಯ ಪೌರಾಯುಕ್ತ ರಾದ ಶ್ರೀ ಮತಿ ವಿದ್ಯಾ ಕಾಳೆ ತಾಲ್ಲೂಕು ಅರೋಗ್ಯ ಅಧಿಕಾರಿಗಳಾದ ಡಾಕ್ಟರ್ ದೀಪಕ್. ರೈ ಹಾಗೂ ಪುತ್ತೂರು ತಾಲ್ಲೂಕು ಪಂಚಾಯತ್ ವ್ಯವಸ್ಥಾಪಕರಾದ ಶ್ರೀಮತಿ ತುಳಸಿ ಯವರ ಉಪಸ್ಥಿತಿ ಯಲ್ಲಿ ಪುತ್ತೂರು ತಾಲ್ಲೂಕು ಮಟ್ಟದ ಸಮನ್ವಯ ಸಮಿತಿ ಸಭೆಯಲ್ಲಿ ವಿಕಲ ಚೇತನರ ಸಮತಿ ಕುಂದು ಕೊರತೆ ಸಭೆ ನಡೆಯಿತು.
ಸಭೆಯಲ್ಲಿ ಚರ್ಚೆ ಮಾಡಲಾದ ನಿರ್ಣಯ ಗಳು 1)ವಿಕಲ ಚೇತನರ ಪಿಂಚಣಿ ಯ ಆದಾಯ ಮಿತಿ ಯನ್ನು 32,000ಸಾವಿರ ಆದಾಯ ಮಿತಿ ಹೆಚ್ಚು ಮಾಡುವ ಬಗ್ಗೆ 2)ಅರ್ಜಿ ಹಾಕಿದ ಎಲ್ಲಾ ವಿಕಲ ಚೇತನರ ಆರೈಕೆದಾರರಿಗೆ ಆರೈಕೆ ದಾರ ಭತ್ಯೆ ಪಡೆಯುವ ಬಗ್ಗೆ ಸರಕಾರ ಕ್ಕೆ ನಿರ್ಣಯ ಮಾಡಲಾಯಿತು 3)ನಶ ಮುಕ್ತ ಭಾರತ ಅಭಿಯಾನ ಶಾಲೆ ಮಟ್ಟದಲ್ಲಿ, ಪ್ರೌಢ ಶಾಲೆ ಕಾಲೇಜು ಗಳಲ್ಲಿ ಗ್ರಾಮ ಪಂಚಾಯತ್ ಕಚೇರಿ ಸರಕಾರಿ ಕಚೇರಿ ಗಳಲ್ಲಿ ನಶ ಮುಕ್ತ ಭರತ ಅಭಿಯಾನ ಪ್ರತಿಜ್ಞಾವಿದಿ ಮಾಡುವ ಬಗ್ಗೆ ಅರಿವು ಮೂಡಿಸಲಾಯಿತ್ತು.4)ವಿಕಲ ಚೇತನರ ಇಲಾಖೆ ಯಿಂದ ಅರ್ಜಿ ಹಾಕಿದ ಪಲಾನುಭವಿ ಗಳಿಗೆ ಸಾಧನ ಸಲಕರಣೆ ವಿತರಣೆ ಬಗ್ಗೆ ಚರ್ಚೆ ಮಾಡಲಾಯಿತ್ತು. 5)ವಿಕಲ ಚೇತನ ವಿಶೇಷ ಅಗತ್ಯ ವುಳ್ಳ ಮಕ್ಕಳಲ್ಲಿಗೆ ಗ್ರಾಮೀಣ ಹಾಗೂ ನಗರ ಪುನರ್ ವಸತಿ ಕಾರ್ಯ ಕರ್ತರು ಅರ್ಜಿ ಶಾಲೆ ಯಲ್ಲಿ ಪ್ರಚಾರ ಪಡಿಸಿ ವಿದ್ಯಾರ್ಥಿವೇತನ ಕ್ಕೆ ಅರ್ಜಿ ಹಾಕಿಸುವ ಬಗ್ಗೆ ಸೂಚನೆ ನೀಡಲಾಯಿತು. 5)ವಿಕಲ ಚೇತನರ ಪಿಂಚಣಿ ಎಂಡೊ ಪಿಂಚಣಿ ಹಿರಿಯ ನಾಗರಿಕರ ಪಿಂಚಣಿ ಪ್ರತಿ ತಿಂಗಳು ಬರುವಂತೆ ಸರಕಾರ ಮನವಿ ಸಲ್ಲಿಸಲು ವಿಕಲ ಚೇತನರ ಸಮಿತಿ ಸಭೆಯಲ್ಲಿ ಪುತ್ತೂರು ತಾಲ್ಲೂಕು ಪಂಚಾಯತ್ ವಿಕಲ ಚೇತನರ ವಿವಿದೋದ್ದೇಶ ಪುನರ್ ವಸತಿ ಕಾರ್ಯ ಕರ್ತರಾದ ನವೀನ್ ಕುಮಾರ್ ಪುತ್ತೂರು ತಹಸೀಲ್ದಾರ್ ರವರಿಗೆ ಮನವಿ ಮಾಡಿದರು.

ಸಭೆಯಲ್ಲಿ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಪುತ್ತೂರು ನಗರ ಠಾಣೆಯ ಪೊಲೀಸ್ ನಿರೀಕ್ಷಕರು ಮಹಿಳಾ ಸಾಂತ್ವನ ದ ಮೇಲ್ವಿಚಾರಕರು ಪುತ್ತೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರು ಪುತ್ತೂರು ತಾಲ್ಲೂಕು ಪಂಚಾಯತ್ ವಿಕಲ ಚೇತನರ ವಿವಿದೋದ್ದೇಶ ಪುನರ್ ವಸತಿ ಕಾರ್ಯ ಕರ್ತರಾದ ನವೀನ್ ಕುಮಾರ್ ಪುತ್ತೂರು ಶಿಶು ಅಭಿವೃದ್ಧಿ ಯೋಜನಾ ಧಿಕಾರಿ ಗಳಾದ ಹರೀಶ್.ಕೆಯ ವರು ಸ್ವಾಗತಿಸಿದರು.ಪುತ್ತೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕರಾದ ಶ್ರೀಮತಿ ವನಿತಾರವರು ಧನ್ಯವಾದ ಸಮರ್ಪಣೆ ಮಾಡಿದರು. ಸಭೆಯಲ್ಲಿ ಕೊನೆಯಲ್ಲಿ ಪುತ್ತೂರು ತಹಸೀಲ್ದಾರ್ ಅಧ್ಯಕ್ಷತೆ ಯಲ್ಲಿ ಮದ್ಯ ಮತ್ತು ಮಾದಕ ವಸ್ತು ಗಳ ವಿರುದ್ಧ ಅಭಿಯಾನ ನಶ ಮುಕ್ತ ಅಭಿಯಾನದ ಪ್ರತಿಜ್ಞೆ ಮಾಡಲಾಯಿತು 🙏


