ಮಂಗಳೂರು: ಮೂಡುಜೆಪ್ಪು, ಕೆಲರಾಯಿ ನಿವಾಸಿ ಹಾಗೂ ದಿವಂಗತ ಗಿಲ್ಬರ್ಟ್ ಮೊಂತೆರೊ ಅವರ ಪತ್ನಿ ಪ್ರೆಸಿಲ್ಲಾ ಮೊಂತೆರೊ (81) ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಆಗಸ್ಟ್ 19ರಂದು ನಿಧನರಾದರು.
ಪರೋಪಕಾರಿ ಸ್ವಭಾವದವರಾಗಿದ್ದ ಅವರು ನೆರೆಹೊರೆಯವರು ಹಾಗೂ ಪರಿಚಿತರೊಂದಿಗೆ ಆತ್ಮೀಯ ಬಾಂಧವ್ಯ ಹೊಂದಿದ್ದರು.
ಮೃತರು ರೋಹನ್ ಕಾರ್ಪೊರೇಷನ್ ನ ವ್ಯವಸ್ಥಾಪಕ ನಿರ್ದೇಶಕ ರೋಹನ್ ಮೊಂತೆರೊ ಸೇರಿದಂತೆ ಮೂವರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

