HomeFresh Newsಜನ ಸಂಘದ ಹಿರಿಯ ಕಾರ್ಯಕರ್ತ ಜಿನದತ್ತ ಹೆಗ್ಡೆ ನಿಧನ

ಜನ ಸಂಘದ ಹಿರಿಯ ಕಾರ್ಯಕರ್ತ ಜಿನದತ್ತ ಹೆಗ್ಡೆ ನಿಧನ

ಮೂಡುಬಿದಿರೆ : ಕಳೆದ ಐದು ದಶಕಗಳ ಹಿಂದೆ, ಕಾಂಗ್ರೆಸ್‌ ನ ಪ್ರಾಬಲ್ಯ ಬಲವಾಗಿದ್ದ ಕಾಲದಲ್ಲಿ ಜನ ಸಂಘದ ಮೂಲಕ ದರೆಗುಡ್ಡೆಯಲ್ಲಿ ಪಕ್ಷದ ಸಿದ್ಧಾಂತವನ್ನು ಜನರಿಗೆ ಪರಿಚಯಿಸುವ ಸಂಕಲ್ಪದೊಂದಿಗೆ ಒಬ್ಬಂಟಿಗನಾಗಿ ಮನೆ ಮನೆಗೆ ತೆರಳಿ ಸಂಘಟನೆಯನ್ನು ಗಟ್ಟಿಗೊಳಿಸಿದ್ದ ಹಿರಿಯ ಕಾರ್ಯಕರ್ತ ಜಿನದತ್ತ ಹೆಗ್ಡೆ (90ವ) ಅವರು ಬುಧವಾರ ನಿಧನರಾಗಿದ್ದಾರೆ. ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

ಜಿನದತ್ತ ಹೆಗ್ಡೆ ಅವರು ಯಾವುದೇ ಅಧಿಕಾರ, ಸ್ಥಾನಮಾನ ಅಥವಾ ಪ್ರತಿಫಲದ ಅಪೇಕ್ಷೆಯಿಲ್ಲದೆ ದರೆಗುಡ್ಡೆ ಹಾಗೂ ಮೂಡುಬಿದಿರೆ ಪರಿಸರದಲ್ಲಿ
ಭುಜದ ಮೇಲೆ ಒಂದು ಚೀಲವನ್ನು ಹಾಕಿಕೊಂಡು ಗ್ರಾಮೀಣ ಪ್ರದೇಶದ ಮನೆ ಮನೆಗೆ ತೆರಳಿ ಜನ ಸಂಘದ ವಿಚಾರಧಾರೆ ಹಾಗೂ ಸಿದ್ಧಾಂತವನ್ನು ಜನರಿಗೆ ಪರಿಚಯಿಸುವ ಮಹತ್ವದ ಕಾರ್ಯವನ್ನು ಜಿನದತ್ತ ಹೆಗ್ಡೆ ಅವರು ಮಾಡಿದ್ದರು.

ನಂತರ 1980ರಲ್ಲಿ ಭಾರತೀಯ ಜನತಾಪಕ್ಷ ಅಸ್ತಿತ್ವಕ್ಕೆ ಬಂದಾಗ ದರೆಗುಡ್ಡೆ ಭಾಗದಲ್ಲಿ ಬಿಜೆಪಿಯ ಸಂಘಟನೆಗೆ ಅಡಿಪಾಯ ಹಾಕುವಲ್ಲಿ ಜಿನದತ್ತ ಪ್ರಮುಖ ಪಾತ್ರ ವಹಿಸಿ ಪಕ್ಷ ಬಲಿಷ್ಠವಾಗಿ ಬೆಳೆಯಲು ಜಿನದತ್ತ ಹೆಗ್ಡೆ ಅವರು ಕಾರಣೀಕತ೯ರಾಗಿದ್ದರು.

“ಇಂದಿನ ಬಿಜೆಪಿಯ ಬೆಳವಣಿಗೆಯ ಕನಸನ್ನು ಅಂದೇ ಕಂಡು, ಆ ಕನಸನ್ನು ನನಸಾಗಿಸಲು ತಮ್ಮ ಜೀವನದ ಅಮೂಲ್ಯ ಸಮಯವನ್ನು ಪಕ್ಷಕ್ಕಾಗಿ ಸಮರ್ಪಿಸಿದ ನಿಷ್ಠಾವಂತ ಕಾರ್ಯಕರ್ತ” ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು.

ದರೆಗುಡ್ಡೆಯ ಪ್ರಪ್ರಥಮ ಬಿಜೆಪಿ ಕಾರ್ಯಕರ್ತರಾಗಿದ್ದ ಜಿನದತ್ತ ಅವರ ಅಗಲಿಕೆ ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯರಿಗೆ ತುಂಬಲಾರದ ನಷ್ಟವಾಗಿದೆ. ಸರಳತೆ, ನಿಷ್ಠೆ ಮತ್ತು ಪಕ್ಷದ ಮೇಲಿನ ಅಚಲ ಬದ್ಧತೆಯಿಂದ ಅವರು ಅನೇಕರಿಗೆ ಮಾದರಿಯಾಗಿದ್ದರು.

ಅವರ ನಿಧನಕ್ಕೆ ಮುಲ್ಕಿ ಮೂಡುಬಿದಿರೆ ಕ್ಷೇತ್ರದ ಶಾಸಕ ಉಮನಾಥ್ ಎ ಕೋಟ್ಯಾನ್, ಮಂಡಲಾಧ್ಯಕ್ಷ ದಿನೇಶ್ ಪುತ್ರನ್, ಮಂಡಲ ಪ್ರಧಾನ ಕಾರ್ಯದರ್ಶಿ ರಂಜಿತ್ ಪೂಜಾರಿ, ಹಿಂದು ಜಾಗರಣ ವೇದಿಕೆಯ ಸಮಿತ್ ರಾಜ್ ಸಂತಾಪ ಸೂಚಿಸಿದ್ದಾರೆ.

Home interiors
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments