ಭಾರತದ ಕಾಲಮಾನ ಶನಿವಾರಾರಂಭದಲ್ಲಿ ನಡೆದ ಫಿಫಾ ವಿಶ್ವ ಕಪ್ ಪಂದ್ಯಾವಳಿಯಲ್ಲಿ ಆತೀಥೇಯ ತಂಡಗಳಾದ ಮೆಕ್ಸಿಕೋ ನಾಕೌಟ್‌ಗೆ ನುಗ್ಗಿದ ಮೊದಲ ತಂಡವಾದರೆ, ಕೆನಡಾಕ್ಕೆ ಮೊದಲ ಜಯ ಕಾಣವ ಭಾಗ್ಯ ಬಂತು.

೨೦೨೬ರ ಫಿಫಾ ವಿಶ್ವ ಕಪ್ ಕಾಲ್ಚೆಂಡು ಪಂದ್ಯಾವಳಿಯಲ್ಲಿ ನಾಕೌಟಿಗೆ ಅಂದರೆ 32ರ ಹಂತ ಪ್ರವೇಶಿಸಿದ ಮೊದಲ ತಂಡವಾಯಿತು ಆತಿಥೇಯ ಮೆಕ್ಸಿಕೋ. ಗ್ವಾಡಾಲಜಾರದಲ್ಲಿ ನಡೆದ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಅಧಿಕಾರಯುತ 1-0 ಗೋಲಿನ ಗೆಲುವನ್ನು ಕಂಡಿತು ಮೆಕ್ಸಿಕೋ. ಎ ವಿಭಾಗದಲ್ಲಿ ಎರಡೂ ಪಂದ್ಯ ಗೆದ್ದ ಮೆಕ್ಸಿಕೋ ನಾಕೌಟ್ ತಲುಪಿದ ಮೊದಲ ತಂಡವಾಯಿತು.

ಇಪ್ಪತ್ತು ವರುಷಗಳಲ್ಲಿ ಮೆಕ್ಸಿಕೋದಲ್ಲಿ 1,30,000 ಜನರು ನಾಪತ್ತೆಯಾಗಿದ್ದಾರಂತೆ. ಅವರ ಕುಟುಂಬಗಳವರು ಕ್ರೀಡಾಂಗಣದ ಹೊರಗೆ ಶಾಂತಿಯುತ ಪ್ರತಿಭಟನೆ ನಡೆಸಿದರು. 1986 ಮತ್ತು 2022ರಲ್ಲಿ ವಿಶ್ವ ಕಪ್ ಅರ್ಹತೆ ಪಡೆದ ಆಡಿದ್ದ ಕೆನಡಾ ಆಗಿನ ಆರೂ ಪಂದ್ಯಗಳಲ್ಲಿ ಸೋತಿತ್ತು.

ಮತ್ತೊಂದು ಆತಿಥೇಯ ತಂಡವಾದ ಕೆನಡಾ ಈ ಬಾರಿ ಫಿಫಾ ವಿಶ್ವ ಕಪ್‌ನ ಮೊದಲ ಗೆಲುವನ್ನು ದಾಖಲಿಸಿತು. ಅದೂ ಭರ್ಜರಿ ಗೆಲುವು. ಫುಟ್ಬಾಲ್‌ನಲ್ಲಿ ಹಿಂದುಳಿದಿರುವ ಕತಾರ್ ತಂಡದ ವಿರುದ್ಧ ಕೆನಡಾ 6-0 ಗೋಲುಗಳ ಭಾರೀ ಜಯ ದಾಖಲಿಸಿತು. ಜೋನಾಥನ್ ಡೇವಿಡ್ ಅವರು ಹ್ಯಾಟ್ರಿಕ್ ಗೋಲು ಗಳಿಸಿದರು; ಸರ್ವತ್ರ ಪ್ರಶಂಸೆ ಗಳಿಸಿದರು.

ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಇಡೀ ಪಂದ್ಯ ಕಂಡು ಕೊಂಡಾಡಿದರು. ಯುಎಸ್‌ಎಯ ಇಂಗ್ಲೆವುಡ್‌ನಲ್ಲಿ ನಡೆದ ಇನ್ನೊಂದು ಪೈಪೋಟಿಯಲ್ಲಿ ಸ್ವಿಜರ್‌ಲ್ಯಾಂಡ್ ತಂಡವು ಬೋಸ್ನಿಯಾ ಮತ್ತು ಹರ್ಜ್‌ಗೊವಿನಾ ತಂಡದ ವಿರುದ್ಧ ಹೋರಾಡಿ 4-1 ಗೋಲುಗಳ ಅದ್ಭುತ ಗೆಲುವನ್ನು ಕಂಡಿತು.

ಯುಎಸ್‌ಎಯ ಅಟ್ಲಾಂಟಾದಲ್ಲಿ ನಡೆದ ಜೆಕ್ ಗಣರಾಜ್ಯ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಣ ಪಂದ್ಯ 1-1 ಗೋಲುಗಳಿಂದ ಡ್ರಾ ಆಯಿತು. ತೆಂಕಣ ಆಫ್ರಿಕಾಕ್ಕೆ ಇನ್ನೂ ಅವಕಾಶವಿದೆ.


