HomeFresh Newsಅತಿ ಹೆಚ್ಚು ಹಾಲು ಉತ್ಪಾದಿಸುವ ದೇಶ

ಅತಿ ಹೆಚ್ಚು ಹಾಲು ಉತ್ಪಾದಿಸುವ ದೇಶ

ಜಾನುವಾರು ಎಂದರೆ ದನ, ಎಮ್ಮೆಗಳ ಹಾಲಿನ ಒಟ್ಟು ಉತ್ಪಾದನೆಯಲ್ಲಿ ಭಾರತವು ಜಗತ್ತಿನಲ್ಲಿ ಮೊದಲ ಸ್ಥಾನವನ್ನು ಪಡೆದಿದೆ.

ಅತಿ ಜನಸಂಖ್ಯೆಯ ಭಾರತದಲ್ಲಿ ಸರಾಸರಿ ಹಾಲು ಸೇವನೆ ಇನ್ನೂರು ಮಿಲಿಗೂ ಕಡಿಮೆ ಇದೆ. ಹಾಲುತ್ಪಾದನೆ ಮುಂದಿನಂತಿದೆ.

ಭಾರತ 24.9 ಕೋಟಿ ಟನ್, ಯೂರೋಪು ಒಕ್ಕೂಟ 16 ಕೋಟಿ ಟನ್, ಯುಎಸ್‍ಎ 10.6 ಕೋಟಿ ಟನ್, ಪಾಕಿಸ್ತಾನ 6.6 ಕೋಟಿ ಟನ್, ಚೀನಾ 4.3 ಕೋಟಿ ಟನ್, ಬ್ರೆಜಿಲ್ 3.8 ಕೋಟಿ ಟನ್, ರಶಿಯಾ 3.4 ಕೋಟಿ ಟನ್, ಟರ್ಕಿ 2.2 ಕೋಟಿ ಟನ್, ನ್ಯೂಜಿಲ್ಯಾಂಡ್ 2.1 ಕೋಟಿ ಟನ್, ಬ್ರಿಟನ್ 1.6 ಕೋಟಿ ಟನ್ ಹಾಲು ಉತ್ಪಾದಿಸುವ ಪ್ರಮುಖ ದೇಶಗಳಾಗಿವೆ.

ಇದು ಜಾನುವಾರು ಹಾಲಿಗೆ ಮಾತ್ರ ಸೀಮಿತ. ತೆಂಕಣ ಅಮೆರಿಕ ಖಂಡದ ಹೆಚ್ಚಿನವರು ಲಾಮಾ ಹಾಲು, ಅರಬ್ ದೇಶಗಳ ಹೆಚ್ಚಿನವರು ಒಂಟೆ, ಆಡಿನ ಹಾಲು ಸೇವಿಸುತ್ತಾರೆ. ಭಾರತದಲ್ಲಿ ದನಗಳ ಸಂಖ್ಯೆ ಹೆಚ್ಚು ಆದರೂ ಒಟ್ಟು ಹಾಲು ಕರೆಯುವುದರಲ್ಲಿ ಎಮ್ಮೆಗಳ ಪಾತ್ರ ಹಿರಿದು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments