HomeFresh Newsಮಂಗಳೂರು ದಸರಾ ಮಹೋತ್ಸವ: ಶಾರದಾ ಮಾತೆ,ನವದುರ್ಗೆಯರ ಪ್ರತಿಷ್ಠಾಪನೆ

ಮಂಗಳೂರು ದಸರಾ ಮಹೋತ್ಸವ: ಶಾರದಾ ಮಾತೆ,ನವದುರ್ಗೆಯರ ಪ್ರತಿಷ್ಠಾಪನೆ

ನಗರದ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶ್ರೀ ಶಾರದಾ ಮಾತೆ ಹಾಗೂ ನವದುರ್ಗೆಯರ ಪ್ರತಿಷ್ಠೆಯೊಂದಿಗೆ ನವರಾತ್ರಿ ಉತ್ಸವ ಆರಂಭಗೊಂಡಿತು.

ಶ್ರೀ ಕ್ಷೇತ್ರದ ಸಭಾಮಂಟದಲ್ಲಿ ಸಾಂಪ್ರದಾಯಿಕ ವಿಧಿ ವಿಧಾನಗಳೊಂದಿಗೆ ಪ್ರಧಾನ ಅರ್ಚಕರ ನೇತೃತ್ವದಲ್ಲಿ ಪ್ರತಿಷ್ಠಾ ಕಾರ್ಯ ನಡೆಯಿತು. ಮಂಗಳವಾದ್ಯ, ಹುಲಿವೇಷಗಳ ನರ್ತನ, ಜಯಘೋಷದೊಂದಿಗೆ ಮೆರವಣಿಗೆಯಲ್ಲಿ ಶಾರದೆಯ ವಿಗ್ರಹವನ್ನು ಪ್ರತಿಷ್ಠಾಮಂಟಪಕ್ಕೆ ತರಲಾಯಿತು.

ಗಣಪತಿ, ಶಾರದೆ, ಆದಿ ಶಕ್ತಿಯ ಜತೆ ಶೈಲ ಪುತ್ರಿ, ಸ್ಕಂದ ಮಾತಾ, ಬ್ರಹ್ಮಚಾರಿಣಿ, ಕಾತ್ಯಾಯಿನಿ, ಚಂದ್ರಘಂಟಾ, ಮಹಾಕಾಳಿ, ಕೂಷ್ಮಾಂಡಿನಿ, ಮಹಾಗೌರಿ, ಸಿದ್ಧಿ ದಾತ್ರಿ ವಿಗ್ರಹಗಳು ಪ್ರತಿಷ್ಠಾಪನೆಗೊಂಡವು.

ಶಾರದಾ ಮಂಟಪದಲ್ಲಿ ಗಣ್ಯರು ದೀಪ ಪ್ರಜ್ವಲನ ಮಾಡಿದರು. ನವರಾತ್ರಿ ಅಂಗವಾಗಿ ಬೆಳಗ್ಗೆ ಗುರು ಪ್ರಾರ್ಥನೆ, ಪುಣ್ಯಾಹ ಹೋಮ, ನವಕಲಶಾಭಿಷೇಕ, ಕಲಶ ಸ್ಥಾಪನೆ ನಡೆಯಿತು.

ಈ ಸಂದರ್ಭದಲ್ಲಿ ಕ್ಷೇತ್ರದ ರೂವಾರಿ ಕೇಂದ್ರದ ಮಾಜಿ ಸಚಿವರಾದ ಜನಾರ್ದನ ಪೂಜಾರಿ, ಶಾಸಕ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ. ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ, ಹರಿಕೃಷ್ಣ ಬಂಟ್ವಾಳ್, ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷರಾದ ಜೈರಾಜ್ ಹೆಚ್. ಸೋಮಸುಂದರಂ, ಉಪಾಧ್ಯಕ್ಷೆ ಊರ್ಮಿಳಾ ರಮೇಶ್, ಕಾರ್ಯದರ್ಶಿ ಬಿ. ಮಾಧವ ಸುವರ್ಣ, ಖಜಾಂಚಿ ಪದ್ಮರಾಜ್ ಆರ್. ಪೂಜಾರಿ, ಕ್ಷೇತ್ರಾಡಳಿತ ಮಂಡಳಿ ಟ್ರಸ್ಟಿಗಳು, ಕ್ಷೇತ್ರದ ಅಭಿವೃದ್ಧಿ ಸಮಿತಿ, ಸದಸ್ಯರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments