HomeFresh Newsಕಟ್ ಕನ್ವರ್ಶನ್ ವಿಚಾರ: ಜಿಲ್ಲಾಧಿಕಾರಿಗಳ ಭೇಟಿಗೆ ಶಾಸಕರ ಸೂಚನೆ

ಕಟ್ ಕನ್ವರ್ಶನ್ ವಿಚಾರ: ಜಿಲ್ಲಾಧಿಕಾರಿಗಳ ಭೇಟಿಗೆ ಶಾಸಕರ ಸೂಚನೆ

ಪುತ್ತೂರು: ಕಟ್ ಕನ್ವರ್ಶನ್ ವಿಚಾರದಲ್ಲಿನ ಸಮಸ್ಯೆಗೆ ಇತಿಶ್ರೀ ಹಾಡುವಂತೆ ಶಾಸಕ ಅಶೋಕ್ ರೈ ಅವರು ಪುಡಾ ಮತ್ತು ನಗರಸಭೆಗೆ ಸೂಚನೆ ನೀಡಿದ್ದು ಜಿಲ್ಲಾಧಿಕಾರಿಗಳ ಜೊತೆ ಈ ಬಗ್ಗೆ ಚರ್ಚೆ ಮಾಡಿ ಇತ್ಯರ್ಥ ಮಾಡುವಂತೆ ಸೂಚನೆ ನೀಡಿದ್ದು ಅದರಂತೆ ಮಂಗಳವಾರ ನಿಯೋಗ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಸಮಸ್ಯೆಗೆ ಪರಿಹಾರವನ್ನು ಕಂಡಿದೆ.

ಕನ್ವರ್ಶನ್ ಆಗಿ ವಿನ್ಯಾಸ ನಕ್ಷೆಗೆ ಅನುಮೋದನೆ ಪಡೆಯದೆ ಭೂಮಿಯನ್ನು ತುಂಡು ಮಾಡಿ ಮಾರಾಟ ಮಾಡಿದ ಪ್ರಕರಣ(ಕಟ್‌ಕನ್ವರ್ಶನ್)ವನ್ನು ಬಿ ಖಾತೆಯಿಂದ ಎ ಖಾತೆಗೆ ಮಾಡುವಲ್ಲಿ ಸೈಟ್‌ಗೆ ತೆರಳುವ ರಸ್ತೆಯನ್ನು ಸರಕಾರಿ ರಸ್ತೆ ಎಂದು ನೊಟಿಫೈ ಮಾಡುವುದು ಕಡ್ಡಾಯವಾಗಿದೆ. ಖಾಸಗಿ ಜಾಗವಾದರೂ ಅಲ್ಲಿಗೆ ತೆರಳುವ ಖಾಸಗಿ ರಸ್ತೆಯನ್ನು ಸಾರ್ವಜನಿಕ ರಸ್ತೆಯೆಂದು ನೊಟಿಫೈ ಮಾಡಬೇಕು ಆದರೆ ಖಾಸಗಿ ಜಾಗದಲ್ಲಿರುವ ರಸ್ತೆಗಳನ್ನು ಸಾರ್ವಜನಿಕ ರಸ್ತೆ ಎಂದು ನೊಟಿಫೈ ಮಾಡದೇ ಇರುವ ಕಾರಣ ಪುಡಾದಲ್ಲಿ ಸುಮಾರು 80 ಕಡತಗಳು ವಿಲೇವಾರಿಯಾಗದೆ ಉಳಿದುಕೊಂಡಿದೆ. ಕಡತ ವಿಲೇವಾರಿಯಾಗದ ಕಾರಣ ಸಾರ್ವಜನಿಕರಿಗೆ ತೊಂದರೆಯಾಗಿರುವ ಬಗ್ಗೆ ಶಾಸಕರು ಪುಡಾ ಮತ್ತು ನಗರಸಭೆಗೆ ಈ ವಿಚಾರವನ್ನು ಇತ್ಯರ್ಥಪಡಿಸುವಂತೆ ಸೂಚನೆ ನೀಡಿದ್ದರು.

ಮಂಗಳವಾರ ನಗರಸಭಾ ಆಡಳಿತಾಧಿಕಾರಿಯಾಗಿರುವ ದರ್ಶನ್ ಅವರನ್ನು ಭೇಟಿಯಾದ ಪುಡಾ ಮತ್ತು ನಗರಸಭಾ ನಿಯೋಗ ಈ ವಿಚಾರದಲ್ಲಿ ಚರ್ಚೆ ನಡೆಸಿದ್ದಾರೆ. ಖಾಸಗಿ ಜಾಗದ ರಸ್ತೆಯನ್ನು ಸಾರ್ವಜನಿಕ ರಸ್ತೆ ಎಂದು ನೊಟಿಫೈ ಮಾಡುವಂತೆ ನಗರಸಭಾ ಆಯುಕ್ತರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಇದರೊಂದಿಗೆ ಕಟ್ ಕನ್ವರ್ಶನ್ ವಿಚಾರದಲ್ಲಿ ಇದ್ದ ಸಮಸ್ಯೆಗಳು ಇರ್ತ್ಯರ್ಥವಾದಂತಾಗಿದ್ದು ಬಾಕಿ ಇದ್ದ 80 ಕಟ್ ಕನ್ವರ್ಶನ್ ಸಮಸ್ಯೆ ಪರಿಹಾರವಾಗಲಿದೆ. ಜೊತೆಗೆ ನಗರದ ಅರುಣ ಬಳಿ ರಸ್ತೆ ಅಗಲೀಕರಣಕ್ಕೆ ಭೂ ಸ್ವಾಧೀನ ಮಾಡುವ ವಿಚಾರದ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಚರ್ಚೆ ನಡೆಸಲಾಯಿತು

ಈ ಸಂದರ್ಭದಲ್ಲಿ ಪುಡಾ ಅಧ್ಯಕ್ಷ ಅಮಲ ರಾಮಚಂದ್ರ, ನಗರಸಭಾ ಆಯುಕ್ತರಾದ ವಿದ್ಯಾ ಕಾಳೆ, ಪುಡಾ ಸದಸ್ಯರಾದ ಲ್ಯಾನ್ಸಿ ಮಸ್ಕರೇನಸ್, ಅನ್ವರ್‌ಖಾಸಿಂ , ನಿಹಾಲ್ ಪಿ ಶೆಟ್ಟಿ , ಪುಡಾ ಕಾರ್ಯದರ್ಶಿ ಗುರುಪ್ರಸಾದ್, ನಗರಸಭಾ ಇಂಜನಿಯರ್‌ಗಳಾದ ಕೃಷ್ಣಮೂರ್ತಿ ರೆಡ್ಡಿ ರಾಜೇಶ್, ಲೊಕೋಪಯೋಗಿ ಇಲಾಖೆಯ ಇಂಜಿನಿಯರ್ ಪ್ರಮೋದ್ ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments