ಜಗತ್ತಿನಲ್ಲಿ 1.4ಕೋಟಿ ಸಾಕಿದ ಒಂಟೆಗಳು ಇದ್ದು, ಪ್ರತಿ ವರುಷ ಮಾಂಸಕ್ಕಾಗಿ 33 ಲಕ್ಷ ಒಂಟೆಗಳನ್ನು ಕೊಯ್ಯಲಾಗುತ್ತದೆ.
ಸೌದಿ ಅರೇಬಿಯಾ ಅತಿ ಹೆಚ್ಚು ಒಂಟೆಯ ಮಾಂಸ ಉತ್ಪಾದಿಸುವ ದೇಶವಾಗಿದೆ. ಬಹುತೇಕ ದೇಶಗಳ ಸೇನೆಗಳಲ್ಲಿ ಒಂಟೆಗಳ ಪಡೆ ಇದೆ. ಅಮೆರಿಕ ಸಂಯುಕ್ತ ಸಂಸ್ಥಾನ ಕೂಡ ಒಂಟೆ ತುಕಡಿ ಹೊಂದಿದೆ.
ಸೌದಿ ಅರೇಬಿಯಾ 1.9 ಲಕ್ಷ ಟನ್, ಕೆನ್ಯಾ 1.3ಲಕ್ಷ ಟನ್, ಸೊಮಾಲಿಯಾ 48 ಸಾವಿರ ಟನ್, ಯುಎಇ 35 ಸಾವಿರ ಟನ್, ಇತಿಯೋಪಿಯಾ 33 ಸಾವಿರ ಟನ್, ಚೀನಾ 28ಸಾವಿರ ಟನ್, ಮಾರಿಟಾನಿಯಾ 26 ಸಾವಿರ ಟನ್, ಮಾಲಿ 21 ಸಾವಿರ ಟನ್, ಓಮನ್ 16 ಸಾವಿರ ಟನ್, ಮಂಗೋಲಿಯಾ 13 ಸಾವಿರ ಟನ್ ಅತಿ ಹೆಚ್ಚು ಒಂಟೆಯ ಮಾಂಸ ಉತ್ಪಾದಿಸುವ ದೇಶಗಳಾಗಿವೆ.


