HomeFresh Newsಸ್ವರ್ಣ ಸೌಹಾರ್ದ ಸಹಕಾರಿ ಸಂಘದ ಪ್ರಧಾನ ಕಛೇರಿಯಲ್ಲಿ ಜು.12 ಭಾನುವಾರ ಉಚಿತ ಕಣ್ಣಿನ ತಪಾಸಣಾ ಶಿಬಿರ

ಸ್ವರ್ಣ ಸೌಹಾರ್ದ ಸಹಕಾರಿ ಸಂಘದ ಪ್ರಧಾನ ಕಛೇರಿಯಲ್ಲಿ ಜು.12 ಭಾನುವಾರ ಉಚಿತ ಕಣ್ಣಿನ ತಪಾಸಣಾ ಶಿಬಿರ

ಪಡುಬಿದ್ರಿ: ಸ್ವರ್ಣ ಸೌಹಾರ್ದ ಸಹಕಾರಿ ಸಂಘ ನಿಯಮಿತ ಮತ್ತು ಘಾಟ್ಗೆ ಕರ್ಕೇರ ಪವರ್ ಇಂಡಸ್ಟ್ರೀಸ್ ಪ್ರಾಯೋಜಕತ್ವದಲ್ಲಿ ಜೆ ಸಿ ಐ ಸುರತ್ಕಲ್
ಮತ್ತು ಸುರತ್ಕಲ್ ಡಾಕ್ಟರ್‌ ಅಗರ್‌ವಾಲ್ಸ್ ಕಣ್ಣಿನ ಆಸ್ಪತ್ರೆ ಇವರ ಸಹಭಾಗಿತ್ವದಲ್ಲಿ ದಿನಾಂಕ 12.07.2026ನೇ ಭಾನುವಾರ ಬೆಳಿಗ್ಗೆ ಗಂಟೆ 9.00ಕ್ಕೆ ಪಡುಬಿದ್ರಿ, ಕಣ್ಣಂಗಾರ್ ಬೈಪಾಸ್ ರಸ್ತೆಯ ಕರ್ಕೇರ ಟವರ್ಸ್ ನ ಸ್ವರ್ಣ ಸೌಹಾರ್ದ ಸಹಕಾರಿ ಸಂಘದ ಪ್ರಧಾನ ಕಛೇರಿಯಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರವು ನಡೆಯಲಿದೆ.

ಶಿಬಿರದಲ್ಲಿ ದೃಷ್ಟಿ ತಪಾಸಣೆ, ಕಣ್ಣಿನ ಸಂಖ್ಯೆಯ ಪರಿಶೀಲನೆ ಹಾಗೂ ಕಣ್ಣಿಗೆ ಸಂಬಂಧಿತ ತಪಾಸಣೆಗಳ ಸಲಹೆ ಹಾಗೂ ಅವಶ್ಯಕತೆಯವರಿಗೆ ಮುಂದಿನ ಚಿಕಿತ್ಸೆಯ ಸಲಹೆಯನ್ನು ನೀಡಲಾಗುವುದು.

ಉಚಿತ ಕಣ್ಣಿನ ತಪಾಸಣಾ ಶಿಬಿರದಲ್ಲಿಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಈ ಶಿಬಿರದ ಪ್ರಯೋಜನವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಂಬಂಧಪಟ್ಟ
ಶ್ರೀ ಶೇಖರ್ ಕೆ ಕರ್ಕೇರ ಅಧ್ಯಕ್ಷರು ಸ್ವರ್ಣ ಸೌಹಾರ್ದ ಸಹಕಾರಿ ಸಂಘ ನಿಯಮಿತ ಮತ್ತು ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments