HomeFresh Newsಪುತ್ತೂರು ಯುವ ಮೋರ್ಚಾ ಗ್ರಾಮಾಂತರ ಮಂಡಲದ ಮಾಸಿಕ ಸಭೆ

ಪುತ್ತೂರು ಯುವ ಮೋರ್ಚಾ ಗ್ರಾಮಾಂತರ ಮಂಡಲದ ಮಾಸಿಕ ಸಭೆ

ಭಾರತೀಯ ಜನತಾ ಪಾರ್ಟಿ ಪುತ್ತೂರು ಮಂಡಲ ಯುವ ಮೋರ್ಚಾ ಗ್ರಾಮಾಂತರ ಮಂಡಲದ ಮಾಸಿಕ ಸಭೆಯು ಬಿಜೆಪಿ ಕಚೇರಿಯಲ್ಲಿ ನಡೆಯಿತು. ಪ್ರಸ್ತುತ ಕರ್ನಾಟಕದಲ್ಲಿ ನಡೆಯುತ್ತಿರುವ SIR ಅಭಿಯಾನ, ಮುಂದೆ ನಡೆಯುವ ಸ್ವಚ್ಛತಾ ಅಭಿಯಾನ, ಜೊತೆಗೆ ಯುವ ಸಂಘಟನೆಯ ಕುರಿತು ಸಮಾಲೋಚನೆ ನಡೆಸಲಾಯಿತು.

ಪ್ರಸ್ತುತ ತೆರವುಗೊಂಡ ಯುವ ಮೋರ್ಚಾದ ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿ ಸ್ಥಾನಕ್ಕೆ ನೂತನವಾಗಿ ಮಂಜುನಾಥ ದುಗ್ಗಳ ಹಾಗೂ ಪ್ರೀತಮ್ ಶೆಟ್ಟಿ ಪೆರ್ನೆ ಇವರನ್ನು ಗ್ರಾಮಾಂತರ ಮಂಡಲದ ಯುವ ಮೋರ್ಚಾ ಅಧ್ಯಕ್ಷರಾದ ಶಿಶಿರ್ ಪೆರ್ವೋಡಿ ಘೋಷಿಸಿದರು. ಈ ಸಭೆಯಲ್ಲಿ ಪುತ್ತೂರು ಬಿಜೆಪಿಯ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರ್, ಜಿಲ್ಲಾ ಯುವ ಮೋರ್ಚಾ ಕಾರ್ಯದರ್ಶಿ ಹಾಗೂ ಪುತ್ತೂರು ಯುವ ಮೋರ್ಚಾ ಪ್ರಭಾರಿಯಾದ ಶ್ರೀ ಕೃಷ್ಣ ಎಂ.ಆರ್, ಜಿಲ್ಲಾ ಕಾರ್ಯದರ್ಶಿಯಾದ ಶಿವಕಿರಣ್, ಪುತ್ತೂರು ಗ್ರಾಮಾಂತರ ಮಂಡಲದ ಕಾರ್ಯದರ್ಶಿ ಹಾಗೂ ಯುವ ಮೋರ್ಚಾ ಪ್ರಭಾರಿಯಾದ ರತನ್ ರೈ ಕುಂಬ್ರ ಹಾಗೂ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಯುವಮೋರ್ಚಾದ ಪ್ರಧಾನ ಕಾರ್ಯದರ್ಶಿ ನಿತಿನ್ ಬೊಡ್ಡೋಣಿ ಸ್ವಾಗತಿಸಿ, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಆದೇಶ್ ಶೆಟ್ಟಿ ವಂದಿಸಿದರು.

sudha add new -
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments