HomeFresh Newsಕುಕ್ಕೆಗೆ ಮಾಜಿ ಸಚಿವ ಎಚ್ ಡಿ ರೇವಣ್ಣ ಭೇಟಿ: ಪಂಚಾಮೃತ ಮಹಾಭಿಷೇಕದಲ್ಲಿ ಭಾಗಿ

ಕುಕ್ಕೆಗೆ ಮಾಜಿ ಸಚಿವ ಎಚ್ ಡಿ ರೇವಣ್ಣ ಭೇಟಿ: ಪಂಚಾಮೃತ ಮಹಾಭಿಷೇಕದಲ್ಲಿ ಭಾಗಿ

ಸುಬ್ರಹ್ಮಣ್ಯ ಜುಲೈ 13 : ರಾಜ್ಯ ಸರಕಾರದ ಮಾಜಿ ಸಚಿವ ಎಚ್ ಡಿ ರೇವಣ್ಣ ಇಂದು ಸೋಮವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಪಂಚಾಮೃತ ಮಹಾಭಿಷೇಕದಲ್ಲಿ ಭಾಗಿಯಾಗಿ, ಮಹಾಮಂಗಳಾರತಿ ವೀಕ್ಷಿಸಿ ತೀರ್ಥ ಪ್ರಸಾದ ಸ್ವೀಕರಿಸಿ, ನಂತರ ಭೋಜನ ಪ್ರಸಾದ ಸ್ವೀಕರಿಸಿರುವರು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಶಿಷ್ಟಾಚಾರ ವಿಭಾಗದ ಪ್ರಮೋದ್ ಕುಮಾರ್ ರೇವಣ್ಣ ಅವರನ್ನು ಬರ ಮಾಡಿಕೊಂಡರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಜಾಕೆ ಮಾಧವ ಗೌಡ, ದಕ ಜಿಲ್ಲಾ ಮಹಿಳಾ ಘಟಕದ ಕಾರ್ಯಾಧ್ಯಕ್ಷೆ ಪ್ರಿಯಾ ಸಾಲಿಯನ್, ದಿವಾಕರ ಬೆಂಗಳೂರು, ಜಯಂತ ಪಂಬತ್ತಾಡಿ, ಬಿಜೆಪಿ ಮುಖಂಡ ಸಂತೋಷ್ ಜಾಕೆ ಮುಂತಾದವರು ಹಾಜರಿದ್ದರು.

ಸುಬ್ರಹ್ಮಣ್ಯ ಮಠಕ್ಕೆ ಭೇಟಿ : ಮಾಜಿ ಸಚಿವ ಎಚ್ ಡಿ ರೇವಣ್ಣ ಅವರು ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠಕ್ಕೆ ಭೇಟಿ ನೀಡಿ ಪೀಠಾಧ್ಯಕ್ಷ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಸ್ವಾಮೀಜಿಯವರು ರೇವಣ್ಣ ರನ್ನು ಶಾಲು ಹೊದಿಸಿ ಮಂತ್ರಾಕ್ಷತೆ ನೀಡಿ ಗೌರವಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments