ಪಡುಬಿದ್ರಿ: ಆಯುಷ್ ಫೆಡರೇಶನ್ ಆಫ್ ಇಂಡಿಯಾ (ರಿ.), ಉಡುಪಿ ಜಿಲ್ಲೆ ವತಿಯಿಂದ ವೈದ್ಯರ ದಿನಾಚರಣೆ, ಕುಟುಂಬೋತ್ಸವ ಹಾಗೂ “ವೈದ್ಯಶ್ರೀ 2026” ಸನ್ಮಾನ ಕಾರ್ಯಕ್ರಮವನ್ನು ಜುಲೈ 19, 2026 (ಭಾನುವಾರ) ಮಧ್ಯಾಹ್ನ 3.00 ಗಂಟೆಗೆ ಉಡುಪಿಯ ಹೋಟೆಲ್ ಓಷನ್ ಪರ್ಲ್, ಮಂಡವಿ ಟೈಮ್ಸ್ ಸ್ಕ್ವೇರ್ನ ಪೆಸಿಫಿಕ್–1 ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರದ ಆರೋಗ್ಯ ಸಚಿವ ಯು.ಟಿ. ಖಾದರ್ ಉದ್ಘಾಟಿಸಲಿದ್ದು, ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕರ್ನಾಟಕ ಸರ್ಕಾರದ ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ಸುಹಾಸಂ ಉಡುಪಿ ಅಧ್ಯಕ್ಷೆ ಶ್ರೀಮತಿ ಸಂಧ್ಯಾ ಶೆಣೈ, ಸ್ವದೇಶಿ ಔಷಧ ಭಂಡಾರ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕ ಶ್ರೀ ಮನೋಜ್ ಪ್ರಭು ಹಾಗೂ ಗಿರಿಜಾ ಹೆಲ್ತ್ ಕೇರ್ & ಸರ್ಜಿಕಲ್ಸ್, ಉಡುಪಿ ಸಂಸ್ಥೆಯ ಶ್ರೀ ರವೀಂದ್ರ ಶೆಟ್ಟಿ ಗೌರವ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.
ಜಿಲ್ಲಾ ಅಧ್ಯಕ್ಷ ಡಾ. ಎನ್.ಟಿ. ಅಂಚನ್ ಹಾಗೂ ಜಿಲ್ಲಾ ಕಾರ್ಯದರ್ಶಿ ಡಾ. ಸತೀಶ್ ರಾವ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾರ್ಕಳ, ಕುಂದಾಪುರ ಮತ್ತು ಉಡುಪಿ ತಾಲೂಕು ಘಟಕಗಳ ಪದಾಧಿಕಾರಿಗಳೂ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


