HomeFresh Newsನಿವೃತ್ತ ಶಿಕ್ಷಕ ಜಿ. ಕೆ ಭಟ್ ರಸ್ತೆ ಅಪಘಾತಕ್ಕೆ ಬ*ಲಿ

ನಿವೃತ್ತ ಶಿಕ್ಷಕ ಜಿ. ಕೆ ಭಟ್ ರಸ್ತೆ ಅಪಘಾತಕ್ಕೆ ಬ*ಲಿ

ಮೂಡುಬಿದಿರೆ : ಇಲ್ಲಿನ ರತನ್ ಗ್ಯಾರೇಜ್ ಬಳಿ ಬುಧವಾರ ಸಂಜೆ ನಡೆದ ರಸ್ತೆ ಅಪಘಾತದಲ್ಲಿ ಮಹಾವೀರ ಕಾಲೇಜು ಬಳಿಯ ವೇಣುಗೋಪಾಲ ಕಾಲೋನಿಯ ನಿವೃತ್ತ ಶಿಕ್ಷಕ ಗೋಪಾಲ ಕೃಷ್ಣ ಭಟ್ (64 ವ ) ಅವರು ಮೃತರಾಗಿದ್ದಾರೆ.

ಜಿ. ಕೆ ಮಾಸ್ಟ್ರು ಎಂದೇ ಚಿರಪರಿಚಿತರಾಗಿದ್ದರು. ಅವರು ಸಂಜೆ ಮನೆಯಿಂದ ಮೂಡುಬಿದಿರೆಗೆ ಆಟೋ ರಿಕ್ಷಾದಲ್ಲಿ ಬರುತ್ತಿದ್ದ ಸಂದಭ೯ ದ್ವಿಚಕ್ರ ವಾಹನವೊಂದು ಎಡಬದಿಯ ರಸ್ತೆಯಿಂದ ವೇಗವಾಗಿ ಬಂದು ಢಿಕ್ಕಿ ಹೊಡೆಯುವ ಹಂತದಲ್ಲಿರುವುದನ್ನು ಗಮನಿಸಿದ ಆಟೋ ಚಾಲಕ ರಿಕ್ಷಾವನ್ನು ಬಲಕ್ಕೆ ತಿರುಗಿಸಿದಾಗ ನಿಯಂತ್ರಣ ತಪ್ಪಿದಾಗ ಭಟ್ರು ಹೊರಗೆ ಬಿದ್ದಿದ್ದು ಈ ಸಂದಭ೯ ಆಟೋ ಅವರ ಮೇಲೆಯೇ ಮಗುಚಿ ಬಿದ್ದು ತಲೆಯ ಭಾಗಕ್ಕೆ ಪೆಟ್ಟು ಬಿದ್ದಿದೆ ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಆರ್‌ಎಸ್‌ಎಸ್‌ನ ಹಿರಿಯ ಕಾರ್ಯಕರ್ತರಾಗಿದ್ದ ಅವರು ಧಾಮಿ೯ಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ತನ್ನನ್ನು ತೊಡಗಿಸಿಕೊಂಡಿದ್ದರು.
ಕಿರಿಯರು, ಹಿರಿಯರೆನ್ನದೆ ಎಲ್ಲರೊಂದಿಗೆ ಸ್ನೇಹಭಾವವನ್ನು ಹೊಂದಿದ ಜಿ. ಕೆ. ಮಾಸ್ಟ್ರು ವಂದೇಮಾತರಂ ಸೌಹಾದ೯ ಸಹಕಾರಿ ಸಂಘದ ನಿದೇ೯ಶಕ, ಕಲ್ಲಬೆಟ್ಟು ಗಣೇಶ ಸೇವಾ ಟ್ರಸ್ಟಿನ ಸದಸ್ಯರಾಗಿದ್ದರು.ಜಿ.ಕೆ. ಭಟ್ ಅವರು ಪತ್ನಿ ನಿವೃತ್ತ ಶಿಕ್ಷಕಿ ವಸಂತಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments