HomeFresh Newsಕಿನ್ನಿಗೋಳಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯಕ್ಷದ್ರುವ,ಯಕ್ಷ ಶಿಕ್ಷಣ, ನಾಟ್ಯಾಭ್ಯಾಸ ಕಾರ್ಯಕ್ರಮ ಉದ್ಘಾಟನೆ

ಕಿನ್ನಿಗೋಳಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯಕ್ಷದ್ರುವ,ಯಕ್ಷ ಶಿಕ್ಷಣ, ನಾಟ್ಯಾಭ್ಯಾಸ ಕಾರ್ಯಕ್ರಮ ಉದ್ಘಾಟನೆ

ಕಿನ್ನಿಗೋಳಿ: ರೋಟರಿ ಆಂಗ್ಲ ಮಾಧ್ಯಮ ಶಾಲೆ ಕಿನ್ನಿಗೋಳಿಯಲ್ಲಿ ಯಕ್ಷದ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ಮಂಗಳೂರು, ಯಕ್ಷದ್ರುವ,ಯಕ್ಷ ಶಿಕ್ಷಣ, ನಾಟ್ಯಾಭ್ಯಾಸ ಕಾರ್ಯಕ್ರಮದ ಉದ್ಘಾಟನೆಯನ್ನು ಗುರುವಾರ ನೆರವೇರಿಸಲಾಯಿತು.
ಕಿನ್ನಿಗೋಳಿಯ ಲೇಖಕಿ ಸೌದಾಮಿನಿ ಶೆಟ್ಟಿ ಉದ್ಘಾಟಿಸಿ, ಯಕ್ಷಗಾನ ಅನ್ನೋದು ಒಂದು ಹೆಮ್ಮೆಯ ಕಲೆ, ಅದನ್ನು ಯಕ್ಷದ್ರುವ ಪಟ್ಲ ಫೌಂಡೇಷನ್ ಟ್ರಸ್ಟ್ ರವರು ಬಹಳಷ್ಟು ಉತ್ತಮ ರೀತಿಯಲ್ಲಿ ನೆರವೇರಿಸಿಕೊಂಡು ನಡೆಸಿಕೊಂಡು ಹೋಗುತ್ತಿದ್ದಾರೆ ಎಂದರು. ಪಟ್ಲ ಪೌಂಡೇಶನ್ ನ ಕಿನ್ನಿಗೋಳಿ ಘಟಕದ ಅಧ್ಯಕ್ಷ ಪುರುಷೋತ್ತಮ ಶೆಟ್ಟಿ ಮಾತನಾಡಿ, ಶಾಲೆಗಳಲ್ಲಿ ಮಕ್ಕಳು ಯಕ್ಷಗಾನದ ಅಭಿರುಚಿಯನ್ನು ವಿದ್ಯಾರ್ಥಿ ದೆಸೆಯಲ್ಲಿ ರೂಢಿಸಿಕೊಂಡರೆ ಉತ್ತಮ ಎಂದರು. ರೋಟರಿ ಅಧ್ಯಕ್ಷ ಪ್ರವೀಣ್ ಸಾಲ್ಯಾನ್ ರವರು ಯಕ್ಷಗಾನದ ಮಹತ್ವವನ್ನು ತಿಳಿಸಿದರು. ಪಟ್ಲ ಪೌಂಡೇಶನ್ ನ ಕೇಂದ್ರೀಯ ಘಟಕದ ಟ್ರಸ್ಟಿ ಪ್ರಥ್ವಿರಾಜ್ ಆಚಾರ್ಯ, ಯಕ್ಷಗಾನ ತರಬೇತಿ ತರಬೇತುದಾರೆ ಅನ್ವಿತಾ ಕೆರೆಕಾಡು, ಶಾಲಾಡಳಿತ ಮಂಡಳಿಯ ಶರತ್ ಶೆಟ್ಟಿ, ಸ್ವರಾಜ್ ಶೆಟ್ಟಿ, ಹರೀಶ್ ಶೆಟ್ಟಿ, ದೇವಿದಾಸ್ ಶೆಟ್ಟಿಯವರು ಉಪಸ್ಥಿತರಿದ್ದರು . ಮುಖ್ಯೋಪಾಧ್ಯಾಯಿನಿ ಸುನಿತಾ ಗುರುರಾಜ್ ಗಣ್ಯರನ್ನು ಸ್ವಾಗತಿಸಿ, ಶಿಕ್ಷಕಿ ದೇವಕಿ ಅತಿಥಿಗಳ ಪರಿಚಯ ಮಾಡಿ, ಶಿಕ್ಷಕಿ ಶುಭಲಕ್ಷ್ಮಿ ವಂದಿಸಿದರು.ಶಿಕ್ಷಕ ಪ್ರಸಾದ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments