ನೀಟ್ ಅಕ್ರಮ ಮತ್ತು ಕಾಕ್ರೋಚ್ ಪಕ್ಷದ ಪ್ರತಿಭಟನೆ ಸಂಬಂಧ ಸರಿಯಾದ ಕ್ರಮ ತೆಗೆದುಕೊಳ್ಳುವುದಾಗಿ ಕೇಂದ್ರ ಸರಕಾರವು ಆಶ್ವಾಸನೆ ನೀಡಿದ ಬೆನ್ನಿಗೆ ಸೋನಮ್ ವಾಗ್ಚುಕ್ ಅವರು ತಮ್ಮ 26 ದಿನಗಳ ಉಪವಾಸ ಕೊನೆಗೊಳಿಸಿದರು.
ಗುರುವಾರ ಮಧ್ಯ ರಾತ್ರಿ ವೇಳೆ ಗುರುಗ್ರಾಮದ ವೇದಾಂತಂ ಆಸ್ಪತ್ರೆಗೆ ಕೇಂದ್ರದ ಸಚಿವರುಗಳಾದ ಜೆ. ಪಿ. ನಡ್ಡಾ ಮತ್ತು ಡಾ. ಜಿತೇಂದ್ರ ಸಿಂಗ್ ಅವರುಗಳು ಭೇಟಿ ನೀಡಿದರು. ಉಪವಾಸದೊಡನೆ ಅಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರಬನ್ನು ಕಂಡು ಮಾತನಾಡಿದರು. ಸರಕಾರದ ಭರವಸೆಗಳ ಕುರಿತು ಚರ್ಚಿಸಿದರು. ಆ ಆಶ್ವಾಸನೆಗಳನ್ನು ಒಪ್ಪಿಕೊಂಡ ವಾಂಗ್ಚುಕ್ ಅವರು ಉಪವಾಸ ಮುಕ್ತಾಯಗೊಳಿಸಿದರು.

ಈ ಬಗೆಗೆ ವಾಂಗ್ಚುಕ್ ಅವರು ಎಕ್ಸ್ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ. ವಿವಿಧ ರಾಜಕೀಯ ಪಕ್ಷಗಳ 65ಸಂಸದರು ಕಳೆದ ಕೆಲವು ದಿನಗಳಿಂದ ಭೇಟಿಯಾಗಿ ಉಪವಾಸ ಕೈಬಿಡಲು ಒತ್ತಾಯಿಸಿದ್ದಾರೆ; ಪತ್ರ ಕೊಟ್ಟಿದ್ದಾರೆ. ಈಗ ಸಚಿವರುಗಳು ಬಂದು ಮುಂದಿನ ಕ್ರಮಗಳ ಬಗೆಗೆ ಮಾತನಾಡಿದ್ದಾರೆ. ಹಾಗಾಗಿ ಉಪವಾಸ ಹಿಂತೆಗೆದುಕೊಂಡಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ.
ಜಂತರ್ ಮಂತರ್ ಪ್ರತಿಭಟನಾಕಾರರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ, ನೀಟ್ ಸರಿಪಡಿಸುವಿಕೆ ಇತ್ಯಾದಿ ಅಶ್ವಾಸನೆ ಸಿಕ್ಕಿದೆ. ಅದು ಈಡೇರುವತನಕ ಅಹಿಂಸಾತ್ಮಕ ಹೋರಾಟ ಮುಂದುವರಿಯುತ್ತದೆ ಎಂದು ಅವರು ಹೇಳಿದರು.

