HomeFresh Newsನೀಟ್ ಪ್ರತಿಭಟನೆ ಮರೆಯಲ್ಲಿ ದೇಶವಿರೋಧಿ ಸಂಚು, ಕಾಂಗ್ರೆಸ್ ಕೈವಾಡ: ಗಜೇಂದ್ರ ಎಸ್ ಬೇಲೆಮನೆ ತೀವ್ರ ಆಕ್ರೋಶ

ನೀಟ್ ಪ್ರತಿಭಟನೆ ಮರೆಯಲ್ಲಿ ದೇಶವಿರೋಧಿ ಸಂಚು, ಕಾಂಗ್ರೆಸ್ ಕೈವಾಡ: ಗಜೇಂದ್ರ ಎಸ್ ಬೇಲೆಮನೆ ತೀವ್ರ ಆಕ್ರೋಶ

ಉಡುಪಿ:ಜು.24 ದೆಹಲಿಯ ಜಂತರ್ ಮಂತರ್‌ನಲ್ಲಿ ನೀಟ್ ಪೇಪರ್ ಲೀಕ್ ನೆಪದಲ್ಲಿ ಸಿ.ಪಿ.ಐ ನಡೆಸುತ್ತಿರುವ ಪ್ರತಿಭಟನೆಯು ಸಂಪೂರ್ಣ ರಾಜಕೀಯ ಪ್ರೇರಿತವಾಗಿದೆ. ಈ ಕುತಂತ್ರದ ಹಿಂದೆ ದೇಶವಿರೋಧಿ ಹಾಗೂ ಸಮಾಜಘಾತಕ ಶಕ್ತಿಗಳು ಸಕ್ರಿಯವಾಗಿ ಭಾಗಿಯಾಗಿವೆ ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಗಜೇಂದ್ರ ಎಸ್ ಬೇಲೆಮನೆ ಅತ್ಯಂತ ಕಠಿಣ ಶಬ್ದಗಳಲ್ಲಿ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ನೀಟ್ ಅಕ್ರಮ ಎಸಗಿದ ಕಿಡಿಗೇಡಿಗಳನ್ನು ಈಗಾಗಲೇ ಕಾನೂನಿನ ಅಡಿಯಲ್ಲಿ ಬಂಧಿಸಿ ಜೈಲಿಗಟ್ಟಲಾಗಿದೆ. ಕೇಂದ್ರ ಸರ್ಕಾರದ ಮಾರ್ಗದರ್ಶನದಲ್ಲಿ ಉನ್ನತ ಮಟ್ಟದ ತನಿಖಾ ಸಂಸ್ಥೆಗಳು ಇಂಚಿಂಚೂ ಮಾಹಿತಿಯನ್ನು ಹೊರತೆಗೆಯಲು ಭರದಿಂದ ತನಿಖೆ ನಡೆಸುತ್ತಿವೆ. ಹೀಗಿರುವಾಗ, ವಿದ್ಯಾರ್ಥಿಗಳ ಭವಿಷ್ಯವನ್ನು ಬಂಡವಾಳ ಮಾಡಿಕೊಂಡು ಸಿ.ಪಿ.ಐ ಪಕ್ಷವು ಸಾರ್ವಜನಿಕರನ್ನು ಹಾದಿ ತಪ್ಪಿಸಲು ಜಂತರ್ ಮಂತರ್‌ನಲ್ಲಿ ಬೀದಿಗಿಳಿದಿರುವುದು ಅತ್ಯಂತ ಖಂಡನೀಯ ಕೃತ್ಯವಾಗಿದೆ ಎಂದು ಕಿಡಿಕಾರಿದ್ದಾರೆ.
ಪ್ರತಿಭಟನೆಯ ಮರೆಯಲ್ಲಿ ನಿಂತು ದೇಶದ ಸಾರ್ವಭೌಮತ್ವಕ್ಕೆ ಸವಾಲು ಹಾಕುವಂತಹ ದೇಶವಿರೋಧಿ ಘೋಷಣೆಗಳನ್ನು ಕೂಗಲಾಗುತ್ತಿದೆ. ನಿಷೇಧಿತ ಹಾಗೂ ದೇಶದ್ರೋಹಿ ಸಂಘಟನೆಗಳಿಗೆ ಮುಕ್ತ ಉಂಟು ಆಹ್ವಾನ ನೀಡಿ, ಮಾರಕಾಸ್ತ್ರಗಳನ್ನು ಪ್ರದರ್ಶಿಸುತ್ತಾ ಹಿಂಸಾಚಾರಕ್ಕೆ ಪ್ರಚೋದನೆ ನೀಡಲಾಗುತ್ತಿದೆ. ಭಾರತದ ಆಂತರಿಕ ಭದ್ರತೆ ಮತ್ತು ಸೌಹಾರ್ದತೆಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿ, ದೇಶಾದ್ಯಂತ ಅಶಾಂತಿ ಸೃಷ್ಟಿಸುವ ಬೃಹತ್ ಸಂಚು ಇದರ ಹಿಂದೆ ಅಡಗಿದೆ.
ಈ ಇಡೀ ದೇಶದ್ರೋಹಿ ಜಾಲ ಹಾಗೂ ಹಿಂಸಾತ್ಮಕ ಕೃತ್ಯದ ಮೂಲ ಸೂತ್ರಧಾರ ಮತ್ತು ಆರ್ಥಿಕ ಬೆಂಬಲಿಗ ಬೇರೆ ಯಾರೂ ಅಲ್ಲ, ಅದು ಕಾಂಗ್ರೆಸ್ ಪಕ್ಷ ಎಂಬುದೀಗ ಜಗತ್ತಿನ ಎದುರು ಸ್ಪಷ್ಟವಾಗಿ ಬಯಲಾಗಿದೆ. ಅಧಿಕಾರದ ಹಪಾಹಪಿಗೆ ಬಿದ್ದು ದೇಶವನ್ನೇ ಅಸ್ಥಿರಗೊಳಿಸಲು ಯತ್ನಿಸುತ್ತಿರುವ ಕಾಂಗ್ರೆಸ್, ತನ್ನ ಇಂತಹ ವ್ಯರ್ಥ, ಸಮಾಜಘಾತಕ ಹಾಗೂ ವಿನಾಶಕಾರಿ ಬುದ್ಧಿಯನ್ನು ತಕ್ಷಣವೇ ನಿಲ್ಲಿಸದಿದ್ದರೆ ದೇಶದ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಗಜೇಂದ್ರ ಎಸ್ ಬೇಲೆಮನೆ ಅವರು ಅತ್ಯಂತ ತೀಕ್ಷ್ಣವಾಗಿ ಎಚ್ಚರಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments