HomeFresh Newsಸಾರೆಪುನಿ : ಮೃತ ನಿಶಾನ ಮನೆಗೆ ಕಾಂಗ್ರೆಸ್ ನಾಯಕರ ತಂಡ ಭೇಟಿ

ಸಾರೆಪುನಿ : ಮೃತ ನಿಶಾನ ಮನೆಗೆ ಕಾಂಗ್ರೆಸ್ ನಾಯಕರ ತಂಡ ಭೇಟಿ

ಅತ್ತೆ, ಮಾವ, ನಾದಿನಿಯ ದೌರ್ಜನ್ಯ ಹಿಂಸೆಯಿಂದ ಮೃತ ಪಟ್ಟಿರುವ ಫಾತಿಮತ್ ನಿಶಾನಳ ಮನೆಗೆ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಚ್. ಮಹಮ್ಮದ್ ಅಲಿ ಮತ್ತು ಕಾಂಗ್ರೆಸ್ ಮುಖಂಡ ಎಂ ಎಸ್ ಮಹಮ್ಮದ್ ನೇತ್ರತ್ವದ ಕಾಂಗ್ರೆಸ್ ತಂಡ ಭೇಟಿ ನೀಡಿ ನಿಶಾನ ಕುಟುಂಬಕ್ಕೆ ಸಾಂತ್ವನ ಹೇಳಿದರು ಮತ್ತು ಮೃತ ನಿಶಾನಳ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದ ನಾಯಕರು ನ್ಯಾಯ ಕೊಡಿಸುವ ಪ್ರಯತ್ನದಲ್ಲಿ ನಿಮ್ಮೊಟ್ಟಿಗೆ ನಾವಿದ್ದೇವೆ ಎಂದು ಕುಟುಂಬದವರಿಗೆ ಭರವಸೆ ನೀಡಿದರು.

ಸಂದರ್ಭದಲ್ಲಿ ಕೆದಂಬಾಡಿ ವಲಯ ಕಾಂಗ್ರೆಸ್ ಅಧ್ಯಕ್ಷ ಪುರಂದರ ರೈ ಕೊರಿಕ್ಕಾರ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಮಾಜಿ ಅಧ್ಯಕ್ಷ ಶಕೂರು ಹಾಜಿ, ಬ್ಲಾಕ್ ಕಾಂಗ್ರೆಸ್ ಮಾಜಿ ಉಪಾಧ್ಯಕ್ಷ ಮೌರಿಸ್ ಮಸ್ಕ್ಯರೇನಸ್, ಕಾಂಗ್ರೆಸ್ ಮುಖಂಡ ಬೋಲೋಡಿ ಚಂದ್ರಹಾಸ ರೈ, ಮುಂಡೂರು ಸಹಕಾರಿ ಸಂಘ ಉಪಾಧ್ಯಕ್ಷ ಯಾಕೂಬು ಮುಲಾರ್, ಮಾಜಿ ಪಂಚಾಯತ್ ಸದಸ್ಯ ಮಲ್ವಿನ್ ಮೊಂತೆರೋ , ಬ್ಲಾಕ್ ಕಾಂಗ್ರೆಸ್ ಸಂಘಟನ ಕಾರ್ಯದರ್ಶಿ ಹಬೀಬ್ ಕಣ್ಣೂರು, ಸ್ಥಳೀಯ ಸಾಮಾಜಿಕ ಕಾರ್ಯಕರ್ತ ಮುಕ್ತಾರ್ ಅರಿಯಡ್ಕ, ಶಾಕೀರ್ ಕಣ್ಣ, ಎಚ್.ಇಕ್ಬಾಲ್, ಅಶ್ರಫ್ ಸಾರೆಪುನಿ, ರಫೀಕ್ ಸಾರೆಪುನಿ ಮೊದಲಾದವರು ಉಪಸ್ಥಿತರಿದ್ದರು

Home interiors
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments