ಕಾಪು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಬಿ.ಸಿ. ಟ್ರಸ್ಟ್) ಕಾಪು ತಾಲೂಕಿನ ಕುತ್ಯಾರ್ ಗ್ರಾಮದ ನಿವಾಸಿಗಳಾದ ಶ್ರೀಮತಿ ಲೀಲಾ ಕೋಟ್ಯಾನ್ ಹಾಗೂ ಅವರ ಪುತ್ರಿ ಜ್ಯೋತಿ ಅವರು ಅತ್ಯಂತ ಸಂಕಷ್ಟದ ಜೀವನ ನಡೆಸುತ್ತಿದ್ದು, ಇಬ್ಬರೇ ಮನೆಯಲ್ಲಿದ್ದಾರೆ.
ವಯೋಸಹಜ ಸಮಸ್ಯೆ ಹಾಗೂ ತೀವ್ರ ಕಾಲುನೋವಿನಿಂದ ಬಳಲುತ್ತಿರುವ ಲೀಲಾ ಕೋಟ್ಯಾನ್ ಅವರಿಗೆ ಸರಿಯಾಗಿ ನಡೆಯಲು ಸಾಧ್ಯವಾಗುತ್ತಿಲ್ಲ. ಅವರ ಪುತ್ರಿ ಜ್ಯೋತಿ ಅವರು ಬುದ್ಧಿಮಾಂದ್ಯತೆ ಹಾಗೂ ಅಂಗವೈಕಲ್ಯದಿಂದ ಬಳಲುತ್ತಿದ್ದು, ಕುಟುಂಬವು ಆರ್ಥಿಕ ಮತ್ತು ಸಾಮಾಜಿಕವಾಗಿ ಸಂಕಷ್ಟದಲ್ಲಿದೆ.
ಈ ಕುಟುಂಬದ ಪರಿಸ್ಥಿತಿಯನ್ನು ಗುರುತಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾಪು ತಾಲೂಕಿನ ಯೋಜನಾಧಿಕಾರಿಗಳಾದ ಶ್ರೀಮತಿ ಮಮತಾ ಅವರ ಶಿಫಾರಸ್ಸಿನ ಮೇರೆಗೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನೀಡಲಾಗುವ ಮಾಸಾಸನ ಮಂಜೂರಾಗಿದೆ.
ಇಂದು ಫಲಾನುಭವಿಗಳಿಗೆ ಮಾಸಾಸನವನ್ನು ಅಧಿಕೃತವಾಗಿ ವಿತರಿಸಲಾಯಿತು. ಈ ನೆರವು ಅವರ ಜೀವನೋಪಾಯಕ್ಕೆ ಆಸರೆಯಾಗಲಿ ಎಂದು ಶುಭ ಹಾರೈಸಲಾಯಿತು.


