ಪೋಳ್ಯ ಶ್ರೀಲಕ್ಷ್ಮೀವೇಂಕಟರಮಣ ಮಠದಲ್ಲಿ 08.02.2027 ರಿಂದ 14.02.2027ರವರೆಗೆ ಜೀರ್ಣೋಧ್ದಾರ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ನಡೆಯಲಿದ್ದು, ಆ ಪ್ರಯುಕ್ತ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವ್ಯವಸ್ಥಾಪನಾ ಸಮಿತಿ ಮತ್ತು ಜೀರ್ಣೋಧ್ದಾರ & ಬ್ರಹ್ಮಕಲಶೋತ್ಸವ ಸಮಿತಿಗಳ ಪದಾಧಿಕಾರಿಗಳಿಂದ ಏಕಾದಶ ರುದ್ರ ಪಾರಾಯಣ ಸೇವೆ, ಪ್ರಾರ್ಥನೆ ಸಮರ್ಪಿಸಲಾಯಿತು.

ಈ ಸಂಧರ್ಭ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಉಮಾಶಂಕರ ಎದುರ್ಕಳ, ಜೀರ್ಣೋಧ್ದಾರ & ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಡಾ. ಕೃಷ್ಣಪ್ರಸನ್ನ, ಪ್ರಧಾನ ಕಾರ್ಯದರ್ಶಿ ಡಾ. ಶಶಿಧರ್ ಕಜೆ, ಕೋಶಾಧಿಕಾರಿ ಮಂಜಳಗಿರಿ ನಾರಾಯಣ ಭಟ್, ಸದಸ್ಯರುಗಳಾದ ಕೊಡಿಪ್ಪಾಡಿ ರಾಮಚಂದ್ರ ಭಟ್ ಪೋಳ್ಯ, ನಂದಕಿಶೋರ್ ಪೋಳ್ಯ, ಜಯಾನಂದ, ರಮೇಶ್ ಪದೆಂಜಾರು, ಈಶ್ಟರ ಗೌಡ ಪುಳಿತ್ತಡಿ, ಕೊಡಿಪ್ಪಾಡಿ ಪ್ರೇಮ ಭಟ್ ಪೋಳ್ಯ, ಸಂಧ್ಯಾ ಕಜೆ, ಜಯಲಕ್ಷ್ಮೀ ಮುರ, ಅನುರಾಧಾ ಮುರ, ತುಳಸಿ ಮುರ ಮುಂತಾದವರು ಉಪಸ್ಥಿತರಿದ್ಧರು.


