HomeFresh Newsಅಯೋದ್ಯೆ ರಾಮ ಮಂದಿರ ಹುಂಡಿ ಕಳವು ವಿಷಯದಲ್ಲಿ ವಿಶ್ವಕರ್ಮ ಸಮಾಜಕ್ಕೆ ಜಾಲತಾಣದಲ್ಲಿ ಅವಹೇಳನ ಉಡುಪಿ ಎಸ್...

ಅಯೋದ್ಯೆ ರಾಮ ಮಂದಿರ ಹುಂಡಿ ಕಳವು ವಿಷಯದಲ್ಲಿ ವಿಶ್ವಕರ್ಮ ಸಮಾಜಕ್ಕೆ ಜಾಲತಾಣದಲ್ಲಿ ಅವಹೇಳನ ಉಡುಪಿ ಎಸ್ ಪಿಗೆ ಮನವಿ

ಬ್ರಹ್ಮಾವರ: ಅಯೋದ್ಯೆ ರಾಮಮಂದಿರದಲ್ಲಿ ಹುಂಡಿಹಣ ಕಳವು ವಿಷಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಉಡುಪಿ ಕಲ್ಮಾಡಿ ಪರಿಸರದ ನಿವಾಸಿ ಸೂರಜ್ ಕರ್ಕೇರಾ ಎನ್ನುವವರು ವಿಶ್ವಕರ್ಮ ಸಮಾಜದ ಆಚಾರಿಗಳು ಉಡುಪಿ ಕೃಷ್ಣ ಮಠ ಬಳಿಯಲ್ಲಿ ಬಂಗಾರದ ಕೆಲಸ ಮಾಡುವ ಆಚಾರಿಗಳು ಬೆಳ್ಳಿ ಮತ್ತು ಚಿನ್ನವನ್ನು ಕರಗಿಸಲು ಇದ್ದಾರೆ ಎಂದು ಜಾತಿ ನಿಂದನೆ ಮತ್ತು ವೃತ್ತಿಗೆ ಕಳಂಕ ತರುವರೀತಿಯಲ್ಲಿ ಬರೆದ ಕುರಿತು ಉಡುಪಿ ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ವತಿಯಿಂದ ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ ಶಂಕರ್ ರವರೀಗೆ ಶುಕ್ರವಾರ ಮನವಿ ನೀಡಿದರು. ಪ್ರಕರಣದಲ್ಲಿ ನಮ್ಮ ಸಮುದಾಯವನ್ನು ಎಳೆದು ತಂದು ಕೆಲಸಗಾರ ಹಾಗು ಮಠದ ಆಸುಪಾಸಿನಲ್ಲಿ ಚಿನ್ನ ಬೆಳ್ಳಿ ಕೆಲಸ ಮಾಡುವವರ ಮತ್ತು ವರ್ತಕರ ಬಗ್ಗೆ ಮಾಡಿರುವ ಕಾಮೆಂಟನ ಬಗ್ಗೆ ಉಡುಪಿ ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರ ಸಂಘವು ತೀರ್ವವಾಗಿ ಖಂಡಿಸಿ ಮನವಿ ನೀಡಿದ್ದರು. ಮನವಿಗೆ ಸ್ಪಂದಿಸಿದ ಪೊಲೀಸ್ ಅಧೀಕ್ಷಕರು ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿರುತ್ತಾರೆ. ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ರವಿಚಂದ್ರ ಆಚಾರ್ಯ ಮಾರಾಳಿ ಗೌರವ ಅಧ್ಯಕ್ಷರಾದ ಬಾಲಕೃಷ್ಣ ಆಚಾರ್ಯ ಕಪ್ಪೆಟ್ಟು ಸಂಘದ ಕಾನೂನು ಸಲಹೆಗಾರರಾದ ಗಂಗಾಧರ್ ಎಚ್ ಎಂ ಕಾರ್ಯದರ್ಶಿ ರಘುನಾಥ್ ಆಚಾರ್ಯ ಉಡುಪಿ, ನಿಕಟಪೂರ್ವ ಅಧ್ಯಕ್ಷರಾದ ಕಿಶೋರ್ ಆಚಾರ್ಯ ಗುಂಡಿಬೈಲ್ ಅರುಣ್ ಆಚಾರ್ಯ,ವೆಂಕಟೇಶ್ ಆಚಾರ್ಯ, ಟಿ ಜಿ ಪ್ರಭಾಕರ್ ಆಚಾರ್ಯ ಸಚ್ಚಿದಾನಂದ ಆಚಾರ್ಯ, ಸುರೇಶ್ ಆಚಾರ್ಯ, ಉಮೇಶ್ ಆಚಾರ್ಯ, ರವೀಂದ್ರ ಆಚಾರ್ಯ,ಯೋಗೀಶ್ ಆಚಾರ್ಯ, ಸುರೇಶ್ ಆಚಾರ್ಯ ಮೊದಲಾದ ಸದಸ್ಯರು ಹಾಜರಿದ್ದರು.

Home interiors
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments