HomeFresh Newsಪುತ್ತೂರಿನಲ್ಲಿ ಆಗಸ್ಟ್ 7ರಂದು ಬೃಹತ್ ತಿರಂಗಾ ಯಾತ್ರೆ: ಪೂರ್ವಸಿದ್ಧತಾ ಸಭೆ

ಪುತ್ತೂರಿನಲ್ಲಿ ಆಗಸ್ಟ್ 7ರಂದು ಬೃಹತ್ ತಿರಂಗಾ ಯಾತ್ರೆ: ಪೂರ್ವಸಿದ್ಧತಾ ಸಭೆ

ಪುತ್ತೂರಿನಲ್ಲಿ ಆಗಸ್ಟ್ 7, 2026ರ ಶುಕ್ರವಾರ ನಡೆಯಲಿರುವ ಬೃಹತ್ ತಿರಂಗಾ ಯಾತ್ರೆಯ ಯಶಸ್ವಿ ಆಯೋಜನೆಗಾಗಿ ಪೂರ್ವಸಿದ್ಧತಾ ಸಭೆ ನಡೆಯಿತು. ಸಭೆಯಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಅವರು ಭಾಗವಹಿಸಿ, ಕಾರ್ಯಕ್ರಮದ ರೂಪರೇಷೆ, ಸಂಘಟನೆ ಹಾಗೂ ಯಶಸ್ವಿ ನಿರ್ವಹಣೆ ಕುರಿತು ಸಮಗ್ರ ಸಲಹೆ-ಸೂಚನೆಗಳನ್ನು ನೀಡಿದರು.

ದೇಶಭಕ್ತಿ ಹಾಗೂ ರಾಷ್ಟ್ರಪ್ರೇಮವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಆಯೋಜಿಸಲಾಗುತ್ತಿರುವ ಈ ಬೃಹತ್ ತಿರಂಗಾ ಯಾತ್ರೆಯಲ್ಲಿ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ವಿದ್ಯಾರ್ಥಿಗಳು, ಯುವಕರು, ಮಹಿಳೆಯರು ಹಾಗೂ ಅಪಾರ ಸಂಖ್ಯೆಯ ದೇಶಭಕ್ತ ನಾಗರಿಕರು ಭಾಗವಹಿಸಲಿದ್ದಾರೆ.

ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕರೆಯಂತೆ “ಹರ್ ಘರ್ ತಿರಂಗಾ” ಅಭಿಯಾನದ ಅಂಗವಾಗಿ ದೇಶದಾದ್ಯಂತ ಸ್ವಾತಂತ್ರ್ಯೋತ್ಸವವನ್ನು ಹೆಮ್ಮೆಯಿಂದ ಆಚರಿಸುವ ನಿಟ್ಟಿನಲ್ಲಿ ಪುತ್ತೂರಿನ ಈ ತಿರಂಗಾ ಯಾತ್ರೆಯೂ ವಿಶೇಷ ಮಹತ್ವವನ್ನು ಪಡೆದುಕೊಂಡಿದೆ.

ಆದ್ದರಿಂದ, ಆಗಸ್ಟ್ 7ರಂದು ನಡೆಯಲಿರುವ ಈ ರಾಷ್ಟ್ರಭಕ್ತಿ ಜಾಗೃತಿ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲಾ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಬೃಹತ್ ತಿರಂಗಾ ಯಾತ್ರೆಯನ್ನು ಯಶಸ್ವಿಗೊಳಿಸಬೇಕಾಗಿ ಆಯೋಜಕರ ಪರವಾಗಿ ವಿನಂತಿಸಲಾಗಿದೆ.

Home interiors


RELATED ARTICLES

LEAVE A REPLY

Please enter your comment!
Please enter your name here

Most Popular

Recent Comments