ಪುತ್ತೂರು: ಹಿರಿಯ ಯೋಗ ಗುರುವಾಗಿದ್ದ ಪುತ್ತೂರಿನ ಬನ್ನೂರು ನೆಕ್ಕಿಲ ನಿವಾಸಿ ಪ್ರಸಾದ್ ಪಾಣಾಜೆ(70.ವ) ಅವರು ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ಅ.1ರಂದು ನಡೆದಿದೆ.ಬೆಳಿಗ್ಗೆ ಬನ್ನೂರು ನೆಕ್ಕಿಲದಲ್ಲಿರು ತನ್ನ ತೋಟಕ್ಕೆ ಅಡಿಕೆ ಹೆಕ್ಕಲೆಂದು ತೆರಲಿದ್ದ ಅವರು ಬಹಳ ಸಮಯವಾದರೂ ಮನೆಗೆ ಹಿಂತಿರುಗದೇ ಇದ್ದಾಗ ಅವರ ಪತ್ನಿ ಹುಡುಕಿಕೊಂಡು ತೋಟಕ್ಕೆ ತೆರಳಿದಾಗ ತೋಟದಲ್ಲಿರುವ ಕೆರೆಯ ನೀರಿನಲ್ಲಿ ಅವರ ಮೃತ ದೇಹ ತೇಲುತ್ತಿರುವುದು ಕಂಡುಬಂದಿತ್ತು. ತೋಟಕ್ಕೆ ಅಡಿಕೆ ಹೆಕ್ಕಲು ಹೋಗಿದ್ದ ಅವರು ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿ ಮೃತಪಟ್ಟಿರುವುದಾಗಿ ಮೃತರ ಪತ್ನಿ ಶ್ರೀಮತಿಯವರು ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೂಲತಃ ಪಾಣಾಜೆ ನಿವಾಸಿಯಾಗಿರುವ ಪ್ರಸಾದ್ ಅವರು ಬೆಂಗಳೂರಿನ ಎಸ್ ವ್ಯಾಸ ಯೋಗ ವಿಶ್ವ ವಿದ್ಯಾನಿಲಯದಲ್ಲಿ ಯೋಗ ಶಿಕ್ಷಣದಲ್ಲಿ ಪ್ರಥಮ ಬ್ಯಾಚ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ದಕ್ಷಿಣ ಕನ್ನಡ ಜಿಲ್ಲೆಗೆ ಯೋಗವನ್ನು ಪರಿಚಿಯಿಸಿದ್ದರು. ಡಾ.ಎಚ್.ಆರ್ ನಾಗೇಂದ್ರ ಅವರಲ್ಲಿ ಯೋಗ ತರಬೇತಿ ಪಡೆದಿದ್ದ ಪ್ರಸಾದ್ ಪಾಣಾಜೆಯವರು 1979ರಲ್ಲಿ ಪುತ್ತೂರಿನಲ್ಲಿ ಯೋಗ ಕೇಂದ್ರವನ್ನು ಸ್ಥಾಪಿಸಿ ನಿರಂತರವಾಗಿ ಯೋಗ ತರಬೇತಿ ನೀಡುವ ಮೂಲಕ ಯೋಗ ಮಹತ್ವವನ್ನು ತಿಳಿಸುವ ಜೊತೆಗೆ ಲಕ್ಷಾಂತರ ಶಿಷ್ಯಂದಿರು ಹಾಗೂ ಯೋಗ ಶಿಕ್ಷಕರನ್ನು ತಯಾರಿಸಿದ್ದರು.
ಪ್ರತಿ ವರ್ಷ ಪುತ್ತೂರಿನಲ್ಲಿ ವಿಶ್ವಯೋಗ ದಿನಾಚರಣೆಯನ್ನು ಅದ್ದೂರಿಯಾಗಿ ಆಯೋಜನೆ ಮಾಡುತ್ತಿದ್ದರು. ಯೋಗ ಕ್ಷೇತ್ರದ ಇವರ ಸಾಧನೆಗೆ ಸಹಸ್ರಾರು ಗೌರವ, ಸನ್ಮಾನಗಳು ದೊರೆತಿದ್ದವು.ಮೃತರು ಪತ್ನಿ ಶ್ರೀಮತಿ ಪುತ್ರರಾದ ಇಂಜಿನಿಯರ್ ಆಗಿರುವ ಕೇಶವವರ್ಧನ ಹಾಗೂ ವಿಶಾಖ ನಾರಾಯಣ ಅವರನ್ನು ಅಗಲಿದ್ದಾರೆ.


