HomeFresh Newsಗಾಣಿಗ ಅಭಿವೃದ್ಧಿ ನಿಗಮ ಅಧ್ಯಕ್ಷ‌ ಅನಂತ್‌ ಮೈಸೂರು ಮಂಗಳೂರು ಸೆಂಟ್ರಲ್‌ ರೈಲ್ವೇ ಸ್ಟೇಷನ್‌ಗೆ ಭೇಟಿ: ರೈಲ್ವೇ...

ಗಾಣಿಗ ಅಭಿವೃದ್ಧಿ ನಿಗಮ ಅಧ್ಯಕ್ಷ‌ ಅನಂತ್‌ ಮೈಸೂರು ಮಂಗಳೂರು ಸೆಂಟ್ರಲ್‌ ರೈಲ್ವೇ ಸ್ಟೇಷನ್‌ಗೆ ಭೇಟಿ: ರೈಲ್ವೇ ಸ್ಟೇಷನ್‌ಗೆ ಬ್ಯಾರಿಸ್ಟರ್‌ ಅತ್ತಾವರ ಎಲ್ಲಪ್ಪ ಹೆಸರಿಡಲು ಮನವಿ

ಮಂಗಳೂರು: ಕರ್ನಾಟಕ ಸರಕಾರ ಗಾಣಿಗ ಅಭಿವೃದ್ಧಿ ನಿಗಮ ಅಧ್ಯಕ್ಷ‌, ಮಾಜಿ ಮೇಯರ್ ಅನಂತ್‌ ಮೈಸೂರುರವರು ಆ.2ರಂದು ಸಂಜೆ ಮಂಗಳೂರು ಸೆಂಟ್ರಲ್‌ ರೈಲ್ವೇ ಸ್ಟೇಷನ್‌ಗೆ ಭೇಟಿ ನೀಡಿದರು. ಗಾಣಿಗ ಸಮಾಜ ಮುಖಂಡರೊಂದಿಗೆ ಚರ್ಚಿಸಿ ರೈಲ್ವೇ ಕ್ಷೇತ್ರಾಧಿಕಾರಿ ರಾಕೇಶ್‌ ಕುಮಾರ್‌ ಪಾರಕ್‌ ಭೇಟಿಯಾದರು. ಬಳಿಕ ಮಾತನಾಡಿದ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿರುವ ಬ್ಯಾರಿಸ್ಟರ್‌ ಅತ್ತಾವರ ಎಲ್ಲಪ್ಪರವರು ಗಾಣಿಗ ಯಾನೆ ಸಫಲಿಗ ಸಮಾಜ ಬಾಂಧವರಾಗಿದ್ದು, ಅವರು ದೇಶಕ್ಕಾಗಿ ಎಲ್ಲವನ್ನೂ ಅರ್ಪಣೆ ಮಾಡಿದವರು. ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣಕ್ಕೆ ತಮ್ಮ ಜಾಗವನ್ನು ಕೊಡುಗೆಯಾಗಿ ನೀಡಿದ್ದು, ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣಕ್ಕೆ ಬ್ಯಾರಿಸ್ಟರ್‌ ಅತ್ತಾವರ ಎಲ್ಲಪ್ಪ ಎಂದು ನಾಮಕರಣ ಮಾಡಬೇಕು ಹಾಗೂ ಅವರ ಪ್ರತಿಮೆಯನ್ನು ನಿರ್ಮಿಸಬೇಕು ಎಂದು ಮನವಿ ಮಾಡಿದರು.


ಅಜೇಯ ಭಾರತ ಸಂಸ್ಥಾಪಕ ಮೋಹಿತ್‌ ಬೆಂಗಳೂರು ಮಾತನಾಡಿ ಬ್ಯಾರಿಸ್ಟರ್‌ ಅತ್ತಾವರ ಎಲ್ಲಪ್ಪರವರು ಒಂದು ಸಮಾಜಕ್ಕೆ ಸೀಮಿತವಾದ ವ್ಯಕ್ತಿಯಲ್ಲ ದೇಶಕ್ಕೆ ಕೊಡುಗೆಯಾಗಿ ನೀಡಿದವರು. ಅವರನ್ನು ಸ್ಮರಿಸುವ ಕೆಲಸ ಈ ರೈಲ್ವೇಸ್ಟೇಷನ್‌ ಮೂಲಕ ಆಗಬೇಕು, ಪಠ್ಯಪುಸ್ತಕದಲ್ಲೂ ಅವರ ವಿಷಯ ಕುರಿತು ಬರಬೇಕು ಹೀಗೆ ಮಾಡಿದರೆ ಮಾತ್ರ ಅವರಿಗೆ ಗೌರವ ಕೊಡಬಹುದು. ಕುರಿತು ಸಂಸದ ಕ್ಯಾ. ಬ್ರಿಜೇಶ್‌ ಚೌಟರವರೊಂದಿಗೆ ಮಾತುಕತೆ ನಡೆಸಿದ್ದೇವೆ, ಮೀಟಿಂಗ್‌ ಮೂಲಕ ಚರ್ಚಿಸುವಂತೆ ಅವರು ಹೇಳಿದ್ದಾರೆ. ರೈಲ್ವೇ ಸಚಿವ ಸೋಮಣ್ಣನವರ ಗಮನಕ್ಕೂ ತರುತ್ತೇವೆ ಎಂದರು.
ಈ ಸಂದರ್ಭದಲ್ಲಿ ಬ್ಯಾರಿಸ್ಟರ್‌ ಎಲ್ಲಪ್ಪರವರ ಸೋದರಳಿಯ ಪ್ರಭಾಕರ್‌ ದಾಸ್‌, ದ.ಕ. ಜಿಲ್ಲಾ ಗಾಣಿಗ ಸಂಘ ಅಧ್ಯಕ್ಷ ವಿಶ್ವಾಸ್‌ ಕುಮಾರ್‌ ದಾಸ್‌, ಪುತ್ತೂರು ಗಾಣಿಗ ಯಾನೆ ಸಫಲಿಗರ ಸೇವಾ ಸಂಘದ ಲಕ್ಷ್ಮೀ ಪ್ರಸಾದ್‌ ಬೆಟ್ಟ, ಪ್ರೊ. ಸುರೇಶ್‌ ಕಟೀಲು,‌ ಕಮಲಾಕ್ಷ ಉಳ್ಳಾಲ್, ರವೀಂದ್ರ ಟಿ. ಮಂಗಳೂರು, ಭರತ್‌ ಕುಮಾರ್‌ ಅತ್ತಾವರ, ಹರೀಶ್‌ ಮಂಜೇಶ್ವರ, ತಾರನಾಥ ಸುವರ್ಣ, ಪದ್ಮನಾಭ, ಕಾರ್ತಿಕ್‌ ಕಬಕ, ಪ್ರವನ್ ಮೆಲ್ಕಾರ್‌ ಉಪಸ್ಥಿತರಿದ್ದರು

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments