HomeFresh Newsದಕ್ಷಿಣ ಕನ್ನಡ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಆಂಗ್ಲ ಭಾಷೆ ಉಪನ್ಯಾಸಕರಿಗಾಗಿ ಕಾರ್ಯಾಗಾರ

ದಕ್ಷಿಣ ಕನ್ನಡ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಆಂಗ್ಲ ಭಾಷೆ ಉಪನ್ಯಾಸಕರಿಗಾಗಿ ಕಾರ್ಯಾಗಾರ

ಮಂಗಳೂರು: ಇಂದು ಜಾಗತಿಕ ಮಟ್ಟದಲ್ಲಿ ಶೈಕ್ಷಣಿಕ, ತಾಂತ್ರಿಕ ಹಾಗೂ ಸಂವಹನ ಕ್ಷೇತ್ರಗಳಲ್ಲಿ ಇಂಗ್ಲಿಷ್ ಭಾಷೆಯ ಜ್ಞಾನ ಮಹತ್ತರ ಪಾತ್ರವನ್ನು ವಹಿಸುತ್ತದೆ. ಪ್ರತಿಯೊಬ್ಬರಿಗೂ ಅವರವರ ಮಾತೃಭಾಷೆ ಶ್ರೇಷ್ಠವಾದರೂ ಕೂಡ, ಇಂಗ್ಲಿಷ್ ಎಲ್ಲರಿಗೂ ಪ್ರವಂಚವನ್ನು ಕಾಣುವುದಕ್ಕೆ ಕಿಟಕಿ ಇದ್ದಂತೆ. ಅತ್ಯಂತ ಕಪ್ಪದ ಪರಿಸ್ಥಿತಿಯಲ್ಲಿ ಇದ್ದುಕೊಂಡು ಕನ್ನಡ ಮಾಧ್ಯಮದಲ್ಲಿ ಕಲಿತು ಗ್ರಾಮೀಣ ಪರಿಸರದಿಂದ ಬಂದವರು ಕೂಡ ಉನ್ನತ ಶಿಕ್ಷಣವನ್ನು ಪಡೆದು ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುವ ಸಾಮರ್ಥ್ಯವನ್ನು ಪಡೆಯಬಹುದು ಹಾಗೂ ಆ ಮೂಲಕ ಜೀವನದಲ್ಲಿ ಬಹಳಷ್ಟು ಸಾಧಿಸಬಹುದು ಎಂಬುದಕ್ಕೆ ಸ್ವತಃ ನಾನೇ ಸಾಕ್ಷಿಯಾಗಿದ್ದೇನೆ. ಹಾಗಾಗಿ ಯುವ ಜನಾಂಗವನ್ನು ವಿದ್ಯಾರ್ಥಿ ದೆಸೆಯಿಂದಲೇ ಇಂಗ್ಲಿಷ್ ಭಾಷಾ ಜ್ಞಾನ ಮತ್ತು ಸಂವಹನ ಕೌಶಲ್ಯವನ್ನು ಹೊಂದುವಂತೆ ತಯಾರಿ ಮಾಡುವುದು ಇಂಗ್ಲಿಷ್ ಭಾಷಾ ಉಪನ್ಯಾಸಕರ ಹೊಣೆಗಾರಿಕೆಯಾಗಿದೆ. “ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್ಂಟ್ ಕಾಲೇಜ್ ನ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ಮಂಜುನಾಥ ಭಂಡಾರಿ ಹೇಳಿದರು.

ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ,ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಕಾಲೇಜುಗಳ ಆಂಗ್ಲ ಭಾಷಾ ಉಪನ್ಯಾಸಕರ ವೇದಿಕೆ, ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ ಹಾಗೂ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜು ಅಡ್ಯಾರು ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಪದವಿ ಪೂರ್ವ ಕಾಲೇಜುಗಳ ಅಂಗ್ಲ ಭಾಷೆ ಉಪನ್ಯಾಸಕರಿಗಾಗಿ ನಡೆದ ಒಂದು ದಿವಸದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ದ.ಕ ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷರಾದ ಡಾ.ನವೀನ್ ಶೆಟ್ಟಿ ಕೆ. ಮಾತನಾಡಿ, “ನಿರಂತರ ಅಧ್ಯಯನಶೀಲರಾಗಿರುವ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಸ್ಫೂರ್ತಿ ಆಗುತ್ತಾರೆ. ವಿಷಯಧಾರಿತ ಕಾರ್ಯಾಗಾರ ಉಪನ್ಯಾಸಕರ ಜ್ಞಾನ ತಿಳುವಳಿಕೆ ಹಾಗೂ ಹೊಸ ವಿಷಯಗಳ ವೆನಿಮಯಗಳಿಗೆ ಸೂಕ್ತ ವೇದಿಕೆಯನ್ನು ಒದಗಿಸುತ್ತದೆ. ಒಂದು ನಿರ್ದಿಷ್ಟ ಬೋಧನಾ ವಿಷಯವನ್ನು ನಿರ್ವಹಿಸುವ ಉಪನ್ಯಾಸಕರ ಮಧ್ಯೆ ಉತ್ತಮ ಬಾಂಧವ್ಯವಿದ್ದಾಗ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಅದು ಸಹಕಾರಿ, ಜಿಲ್ಲಾ ಮಟ್ಟದಲ್ಲಿ ನಡೆಯುವಂತಹ ಈ ರೀತಿಯ ಸಮಾವೇಶಗಳು ಅರ್ಥಪೂರ್ಣ.” ಎಂದರು.


ಪದವಿ ಪೂರ್ವ ಶಿಕ್ಷಣ ಇಲಾಖೆಯ ಪ್ರಭಾರ ಉಪನಿರ್ದೇಶಕರಾದ ಶ್ರೀಮತಿ ಜಯಶ್ರೀ ಪಿ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.

ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜು ಉಪನ್ಯಾಸಕರ ಸಂಘದ ಜಂಟಿ ಕಾರ್ಯದರ್ಶಿ ಶ್ರೀ ವಿಠಲ ಎ,ಜಿಲ್ಲಾ ಘಟಕದ ಅಧ್ಯಕ್ಷರಾದ ಶ್ರೀ ಹರಿಪ್ರಕಾಶ್ ಬಿ. ಇವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಕಾರ್ಯಾಗಾರಕ್ಕೆ ಶುಭ ಹಾರೈಸಿದರು.

ಸಹ್ಯಾದ್ರಿ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಂಟ್ ಕಾಲೇಜ್ ನ ಆಡಳಿತಾಧಿಕಾರಿ ಶ್ರೀ ಕೃಷ್ಣ ಹೆಗ್ಡೆ, ಪ್ರಾಚಾರ್ಯ ಪ್ರೊ. ಎಸ್.ಎಸ್‌. ಇಂಜನಗೇರಿ ಉಪಸ್ಥಿತರಿದ್ದರು

ಈ ಶೈಕ್ಷಣಿಕ ಸಾಲಿನಲ್ಲಿ ಸೇವಾ ನಿವೃತ್ತಿ ಹೊಂದುತ್ತಿರುವ ಹಿರಿಯ ಉಪನ್ಯಾಸಕರಾದ ಶ್ರೀಮತಿ. ಜಯಂತಿ ರಾವ್ ಹಾಗೂ ಶ್ರೀಮತಿ ಸುಜಾತಾ ಬೇಕಲ್ ಇವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಆಂಗ್ಲಭಾಷಾ ತಜ್ಞ, ಲೇಖಕ ಶ್ರೀ.ಶಿವಕುಮಾರ್ ಮಾವಳಿ ಬೆಂಗಳೂರು ಹಾಗೂ ಹಿರಿಯ ಉಪನ್ಯಾಸಕರಾದ ಶ್ರೀ ರಾಧೇಶ್ ತೋಳ್ಳಾಡಿ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯಾಗಾರದಲ್ಲಿ ಪಾಲ್ಗೊಂಡರು. ಜಿಲ್ಲಾ ಅಂಗ್ಲಭಾಷಾ ಉಪನ್ಯಾಸಕರ ವೇದಿಕೆಯ ಅಧ್ಯಕ್ಷ ಹರಿಶಂಕರ ಕೆ.ಎಂ. ಉಪಾಧ್ಯಕ್ಷೆ ಶ್ರೀಮತಿ ಅರ್ಲಿನ್ ಅನ್ನೆ ಗೋಮ್ಸ್, ಕಾರ್ಯದರ್ಶಿ ಸ್ಮಿತಾ.ಎ. ಕೋಶಾಧಿಕಾರಿ ಶ್ರೀ ದಾಮೋದರ್ ಉಪಸ್ಥಿತರಿದ್ದರು.

ಶ್ರೀಮತಿ ಸ್ಮಿತಾ ಎ. ಸ್ವಾಗತಿಸಿದರು, ಕಾರ್ಯಾಗಾರದ ಸಂಯೋಜಕಿ ಶ್ರೀಮತಿ ಸೆಲೀನ್ ಇವರು ವಂದಿಸಿದರು.

ಜತೆ ಕಾರ್ಯದರ್ಶಿ ಶ್ರೀ ಶಿವಪ್ರಸಾದ್ ಕಾರ್ಯಕ್ರಮ ನಿರೂಪಿಸಿರು. ಉಪನ್ಯಾಸಕರಾದ ಶ್ರೀಮತಿ ಅನುರಾಧಾ, ಹಾಗೂ ಶ್ರೀಮತಿ ಸುಜಾತ ಸಹಕರಿಸಿದರು.

Home interiors
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments