ಕನ್ನಡ ಜಿಲ್ಲೆಯಲ್ಲಿ ಕಡೆಗೂ ರಾತ್ರಿ ನಿರ್ಬಂಧ ವಾಪಸ್ , ಮದ್ಯದಂಗಡಿ ಸೇರಿದಂತೆ ಎಲ್ಲ ವ್ಯಾಪಾರ ಕೇಂದ್ರಗಳಿಗೂ ನಿರ್ಬಂಧ ಮುಕ್ತ, ರಾತ್ರಿ 9 ಗಂಟೆ ಬಳಿಕದ ನಿರ್ಬಂಧ ಆದೇಶ ಹಿಂಪಡೆದ ದ.ಕ. ಜಿಲ್ಲಾಧಿಕಾರಿ
ಮಂಗಳೂರಿನ ಹೆಸರಾಂತ ದ್ವಿಚಕ್ರ ವಾಹನ ಶೋರೂಮ್ ಆದ ವೆಸ್ಟ್ ಕೊಸ್ಟ್ ನಲ್ಲಿ ಇದೀಗ ಗ್ರಾಹಕರಿಗೆ ಸ್ವಾತಂತ್ರೋತ್ವದ ಪ್ರಯುಕ್ತ ಬೋನನ್ ಝಾ ಫೆಸ್ಟಿವಲ್ನ್ನು ಆಯೋಜಿಸಿದ್ದಾರೆ. ಹಲವಾರು ರೀತಿಯ ರಿಯಾಯಿತಿಯೊಂದಿಗೆ ಮತ್ತು ಉಚಿತ ಕೊಡುಗೆ ಜೊತೆಗೆ ಇದೀಗ ವೆಸ್ಟ್ ಕೋಸ್ಟ್ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುತ್ತಿದೆ. ಭರ್ಜರಿ ಒಂದು ತಿಂಗಳುಗಳ ಕಾಲ ಈ ಆಫರ್ನ್ನು ನೀಡುತ್ತಿದ್ದಾರೆ. ಗ್ರಾಹಕರಿಗಾಗಿ ೦% ಡೌನ್ ಪೇಮೆಂಟ್, ಪ್ರತಿವಾರ ಲಕ್ಕಿ ಡ್ರಾ ಜೊತೆಗೆ ಬಂಪರ್ ಪ್ರೈಜ್
ಉಳ್ಳಾಲ: ಪಾಂಡೇಶ್ವರ ಠಾಣಾ ವ್ಯಾಪ್ತಿಯಿಂದ ನಾಪತ್ತೆಯಾಗಿದ್ದ ವೃದ್ಧರೋರ್ವರ ಮೃತದೇಹ ಉಳ್ಳಾಲ ಉಳಿಯ ನೇತ್ರಾವತಿ ನದಿತೀರದಲ್ಲಿ ಇಂದು ಬೆಳಿಗ್ಗೆ ಪತ್ತೆಯಾಗಿದೆ.ಜೆಪ್ಪು ಮಜಿಲ ನಿವಾಸಿ ಕುಮಾರ್(೭೮) ಎಂಬವರ ಮೃತದೇಹ ಇಂದು ಪತ್ತೆಯಾಗಿದೆ. ಗುರುವಾರ ಬೆಳಿಗ್ಗೆಯಿಂದ ನಾಪತ್ತೆಯಾಗಿದ್ದ ಇವರ ಕುರಿತು ಮನೆಮಂದಿ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ಕುಮಾರ್ ಅವರು ಚರ್ಮರೋಗವಿದ್ದ ಹಿನ್ನೆಲೆಯಲ್ಲಿ ಖಿನ್ನತೆಗೆ ಒಳಗಾಗಿದ್ದರು. ಕೆಲ ದಿನಗಳ
ಮಂಗಳೂರಿನ ಪ್ರಸಿದ್ಧ ತಂದೂರ್ ರೆಸ್ಟೋರೆಂಟ್ನ ಮಾಲಕರಾದ ಜಿ. ಆನಂದ್ ರಾಯ ಶೆಣೈ ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಅವರಿಗೆ 77 ವರ್ಷ ಪ್ರಾಯವಾಗಿತ್ತು. ಮಂಗಳೂರಿನ ಗುರುಪುರದವರಾದ ಇವರು ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಜನಮನ್ನಣೆ ಗಳಿಸಿದ್ದರು. ಇವರು ಪತ್ನಿ ಸುಜಾತ ಆನಂದ ರಾಯಿ, ಪುತ್ರ ವರದರಾಜ್ ಶೆಣೈ, ಪುತ್ರಿ ಶಾರದಾ ದಿಲೀಪ್ ಆಚಾರ್ಯ, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಬೆಂಗಳೂರು, ಜು, 5; ಹಲೋವರ್ಲ್ಡ್ ಫಿಜಿಟಲ್ ಮೆಟಾವರ್ಸ್ ಪ್ಲಾಟ್ ಫಾರ್ಮ್ ನಿಂದ ಭಾರತದ ಅತಿ ಎತ್ತರದ “ಭೀಮಾ” ರೋಬೋಟ್ ಅನ್ನು ಅನಾವರಣಗೊಳಿಸಲಾಗಿದೆ. ಹಲೋವರ್ಲ್ಡ್ ಫಿಜಿಟಲ್ ಮೆಟಾವರ್ಸ್ ಪ್ಲಾಟ್ ಫಾರ್ಮ್ ನ ಸಂಸ್ಥಾಪಕ ಹರ್ಷ ಕಿಕ್ಕೇರಿ ಅವರು ದೇಶೀಯ ರೊಬೋಟ್ ಅನ್ನು ಅಭಿವೃದ್ಧಿಪಡಿಸಿದ್ದಾರೆ. “ಭೀಮಾ” 7.7 ಅಡಿ ಎತ್ತರದ ರೋಬೋಟ್ ಆಗಿದ್ದು, ಇದರ ದೇಹಕ್ಕೆ ಎಲ್.ಇ.ಡಿ ತಂತ್ರಜ್ಞಾನದ ಸ್ಪರ್ಷ ನೀಡಲಾಗಿದೆ. ಈ ರೋಬೋಟ್ ಬಹುಪಯೋಗಿಯಾಗಿದ್ದು, ವಿಶೇಷವಾಗಿ ಸ್ವಾಗತಕಾರನ
ಉಡುಪಿ: ಉಡುಪಿ ಮೂಲದ ಸಿನಿ ಶೆಟ್ಟಿ 2022ರ ಫೆಮಿನಾ ಮಿಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. 21ರ ಹರೆಯದ ಸಿನಿ ಶೆಟ್ಟಿ ಉಡುಪಿ ಜಿಲ್ಲೆಯ ಇನ್ನಂಜೆಯವರು. ಸ್ಪರ್ಧೆಯಲ್ಲಿ ಸಿನಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಭಾನುವಾರ ಜುಲೈ 04 ರಂದು ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ನಲ್ಲಿ ನಡೆದ ಫಿನಾಲೆಯಲ್ಲಿ ಸಿನಿ ಶೆಟ್ಟಿ ಮಿಸ್ ಇಂಡಿಯಾ ಕಿರೀಟವನ್ನು ಮುಡಿಗೇರಿಸಕೊಂಡರು. ಸಿನಿ ಮುಂಬೈನಲ್ಲಿ ಹುಟ್ಟಿ ಬೆಳೆದರೂ ಕೂಡಾ ಮಿಸ್ ಇಂಡಿಯಾ
ಮಠಾಧೀಶರೇ ಆಗಲೀ..ಮಂತ್ರಿ ಮಾಗದರೇ ಆಗಲೀ ಅಧಿಕಾರದ ಪಿತ್ತ ನೆತ್ತಿಗೇರಿ ಎಲ್ಲವೂ ನಾನೇ, ಎಲ್ಲವೂ ನಾನು ನನ್ನಿಂದಲೇ ನಡೆಯಬೇಕು ಎಂಬ ಸರ್ವಾಧಿಕಾರ ಧೋರಣೆ ತಾಳಿದರೆ ಅವರ ಅವನತಿ ಆರಂಭವಾದಂತೆ ಎಂಬುದಾಗಿ ಶ್ರೀರಾಮ ಕ್ಷೇತ್ರ ಕನ್ಯಾಡಿಯ ಮಠಾಧೀಶರಾದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ. ಅವರು ಕಾಪು ಬಿಲ್ಲವರ ಸಹಾಯಕ ಸಂಘದ ಅಧೀನದಲ್ಲಿ ನೂತನವಾಗಿ ನಿರ್ಮಿಣಗೊಳ್ಳಲಿರುವ ಬ್ರಹ್ಮಶ್ರೀ ನಾರಾಯಣಗುರು ಜ್ಞಾನ ಮಂದಿರದ ಶಿಲಾನ್ಯಾಸ ಕಾರ್ಯದಲ್ಲಿ ಭಾಗವಹಿಸಿ,
“ಉತ್ತರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೀನಕಳಿಯ, ಕೊಟ್ಟಾರ, ಹೊಸಬೆಟ್ಟು ಲೋಟಸ್ ಪಾರ್ಕ್ ಪ್ರದೇಶದಲ್ಲಿ ಮೊದಲ ಮಳೆಯಲ್ಲೇ ಕೃತಕ ನೆರೆ ಪರಿಸ್ಥಿತಿ ನಿರ್ಮಾಣವಾಗಿದ್ದು ಜನರು ಪಡಬಾರದ ಸಂಕಷ್ಟ ಅನುಭವಿಸಿದ್ದಾರೆ ಎಂದು ಮಂಗಳೂರು ಉತ್ತರ ಮಾಜಿ ಶಾಸಕ ಮೊಯಿದೀನ್ ಬಾವಾ ಆರೋಪಿಸಿದ್ದಾರೆ. ಸುರತ್ಕಲ್ನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, , “2500 ಕೋಟಿ ರೂ. ಸ್ಮಾರ್ಟ್ ಸಿಟಿ ಹೆಸರಲ್ಲಿ ಹಣ ಬಂದಿದೆ. ಆದರೆ ಆ ಹಣ ಎಲ್ಲಿ ಹೋಯಿತು
ದೇರಳಕಟ್ಟೆಯ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ವೈದ್ಯರ ದಿನಾಚರಣೆ ಅಚ ವೈದ್ಯರ ದಿನಾಚರಣೆ ಪ್ರಯುಕ್ತ ನಿಸ್ವಾರ್ಥ ಸಾಧಕ ವೈದ್ಯ ಡಾ. ಗೋಪಾಲ್ ಅವರಿಗೆ ಸನ್ಮಾನಿಸಲಾಯಿತು. ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಚೇರ್ ಮೆನ್ ಯು.ಕೆ. ಮೋನು ಸನ್ಮಾನಿಸಿ ಮಾತನಾಡಿ, ಸನಾತನ ಧರ್ಮದಲ್ಲಿ ಅನೇಕ ಮಹಾತ್ಮರನ್ನು ಇನ್ನಿತರ ಧರ್ಮದಲ್ಲೂ ಅವರ ಜನ್ಮ ದಿನದ ಮೂಲಕ ಭಾರತೀಯರಾದ ನಾವು ಕೊಂಡಾಡುತ್ತಿದ್ದು ಸೇವಾ ವೃತ್ತಿ
ಚಾಲಕನ ನಿಯಂತ್ರಣ ತಪ್ಪಿದ ಬಸ್ಸೊಂದು ಹೆಜಮಾಡಿ ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಎದುರು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಮರಿಗೆ ಬಿದ್ದ ಘಟನೆ ಸಂಭವಿಸಿದೆ.ಖಾಸಗಿ ವೇಗದೂತ ಬಸ್ ಉಡುಪಿಯಿಂದ ಮಂಗಳೂರಿಗೆ ತೆರಳುತ್ತಿತ್ತು ಎಂದು ತಿಳಿದುಬಂದಿದೆ. ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳನ್ನು ಹೊರತುಪಡಿಸಿ ಯಾವುದೇ ಸಾವು ನೋವು ಸಂಭವಿಸಿಲ್ಲ.ಹೆಜಮಾಡಿ ಟೋಲ್ ಸುರಕ್ಷತಾ ಅಧಿಕಾರಿ ಶೈಲೇಶ್ ಶೆಟ್ಟಿ, ಟೋಲ್ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಪ್ರಯಾಣಿಕರನ್ನು ಸುರಕ್ಷಿತವಾಗಿ