ಮಂಗಳೂರು: ತುಳು ನಾಟಕ ಕಲಾವಿದರ ಒಕ್ಕೂಟ (ರಿ) ಮಂಗಳೂರು ಇವರ ಈ ಬಾರಿಯ ‘ತೌಳವ ಪ್ರಶಸ್ತಿ’ಗೆ ಹಿರಿಯ ನಾಟಕಕಾರ ಹಾಗೂ ಕಲಾ ನಿರ್ದೇಶಕ ತಮ್ಮ ಲಕ್ಷ್ಮಣರು ಆಯ್ಕೆಯಾಗಿರುತ್ತಾರೆ. ಆಗಸ್ಟ್ 11ರಂದು ಪುರಭವನದಲ್ಲಿ ಜರಗಲಿರುವ ವಾರ್ಷಿಕ ಸಂಭ್ರಮದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುವುದು ಎಂದು ತುಳು ನಾಟಕ ಕಲಾವಿದರ ಒಕ್ಕೂಟದ ಅಧ್ಯಕ್ಷರಾಗಿರುವ ಕಿಶೋರ್ ಡಿ. ಶೆಟ್ಟಿ ತಿಳಿಸಿದ್ದಾರೆ.
ತಮ್ಮಲಕ್ಷ್ಮಣ ಅವರು ನಾಟಕ ರಂಗ ಮತ್ತು ಸಿನಿಮಾರಂಗದಲ್ಲಿ 57 ವರ್ಷಗಳ ಕಾಲ ದುಡಿದು ಸಾಧನೆ ಮಾಡಿರುವ ಅನುಭವಸ್ಥ ಹಿರಿಯ ಕಲಾವಿದರಾಗಿದ್ದಾರೆ. ಸಿನಿಮಾಕ್ಕೆ ಸಂಬಂಧಿಸಿದಂತೆ ತುಳು ಭಾಷೆಯ “ಸುವರ್ಣ ಚಲನಚಿತ್ರಗಳು” ಮತ್ತು “ತುಳು ಬೆಳ್ಳಿತೆರೆಯ ಸುವರ್ಣ ಯಾನ” ಎಂಬ ಇವರ ಕೃತಿಗಳು ಪ್ರಕಟಗೊಂಡಿದೆ. ಅಲ್ಲದೆ ಇವರ ರಚನೆಯ “ಸತ್ಯ ಮುನಿಂಡಾ” ಪ್ರಸಿದ್ದ ನಾಟಕವು ಪುಸ್ತಕ ರೂಪದಲ್ಲಿ ಪ್ರಕಟಗೊಂಡಿದೆ.


