HomeFresh Newsಪಡುಕುತ್ಯಾರು ಆನೆಗುಂದಿ ಸರಸ್ವತೀ ಪೀಠಕ್ಕೆ ವಿಶ್ವ ಹಿಂದೂ ಪರಿಷತ್ ಅಂತರರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಭೇಟಿ

ಪಡುಕುತ್ಯಾರು ಆನೆಗುಂದಿ ಸರಸ್ವತೀ ಪೀಠಕ್ಕೆ ವಿಶ್ವ ಹಿಂದೂ ಪರಿಷತ್ ಅಂತರರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಭೇಟಿ

ಪಡುಬಿದ್ರಿ: ವಿಶ್ವ ಹಿಂದೂ ಪರಿಷತ್‌ನ ಅಂತರರಾಷ್ಟ್ರೀಯ ಅಧ್ಯಕ್ಷರಾದ ಅಲೋಕ್ ಕುಮಾರ್ ಅವರು ಗುರುವಾರ ರಾತ್ರಿ ಉಡುಪಿ ಜಿಲ್ಲೆಯ ಪಡುಕುತ್ಯಾರು-ಕಟಪಾಡಿಯಲ್ಲಿರುವ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಕ್ಕೆ ಭೇಟಿ ನೀಡಿದರು.
ಶುಕ್ರವಾರ ಮುಂಜಾನೆ ಪರಮಪೂಜ್ಯ ಜಗದ್ಗುರುಗಳವರ ಸಾನ್ನಿಧ್ಯದಲ್ಲಿ ನಡೆದ ಪಟ್ಟದ ದೇವರ ಶ್ರೀಕರ ಅರ್ಚಿತ ಪೂಜಾ ಸೇವೆಯಲ್ಲಿ ಅವರು ಭಕ್ತಿಭಾವದಿಂದ ಭಾಗವಹಿಸಿದರು. ಬಳಿಕ ಜಗದ್ಗುರುಗಳವರೊಂದಿಗೆ ಹಿಂದೂ ಸಮಾಜದ ಸಮಕಾಲೀನ ವಿಚಾರಗಳು, ಸಂಘಟನೆ ಬಲವರ್ಧನೆ ಹಾಗೂ ಧಾರ್ಮಿಕ-ಸಾಮಾಜಿಕ ಬೆಳವಣಿಗೆಗಳ ಕುರಿತು ಸಮಾಲೋಚನೆ ನಡೆಸಿದರು.


ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಮಂಗಳೂರು ಜಿಲ್ಲಾ ಕಾರ್ಯಾಧ್ಯಕ್ಷ ಮನೋಹರ್ ಸುವರ್ಣ, ಉಡುಪಿ ಜಿಲ್ಲಾ ಕಾರ್ಯಾಧ್ಯಕ್ಷ ಸುನಿಲ್ ಕೆ.ಆರ್., ಉಡುಪಿ ಜಿಲ್ಲಾ ಅಧ್ಯಕ್ಷ ವಿಷ್ಣುಮೂರ್ತಿ ಆಚಾರ್, ಉಡುಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ಚಿಕ್ಕಮಗಳೂರಿನ ಶ್ಯಾಮ್ ಸೇರಿದಂತೆ ಉಡುಪಿ ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಆನೆಗುಂದಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ. ಆಚಾರ್ ಕಂಬಾರು, ಕೋಶಾಧಿಕಾರಿ ಅರವಿಂದ ವೈ. ಆಚಾರ್ಯ ಬೆಳುವಾಯಿ ಹಾಗೂ ವಿಶ್ವಸ್ಥರಾದ ಸುಂದರ ಆಚಾರ್ಯ ಬೆಳುವಾಯಿ, ದಿನೇಶ್ ಆಚಾರ್ಯ ಪಡುಬಿದ್ರಿ, ದಯಾನಂದ ಆಚಾರ್ಯ ತೆಂಕನಿಡಿಯೂರು, ರಾಘವೇಂದ್ರ ಆಚಾರ್ಯ ಉಡುಪಿ, ಗಂಗಾಧರ ಆಚಾರ್ಯ ಕೊಂಡೆಯೂರು, ಸುರೇಶ್ ಆಚಾರ್ಯ ಇರಂದಾಡಿ, ಭರತ್ ಆರ್. ಆಚಾರ್ಯ ಕಾಸರಗೋಡು, ಲೋಲಾಕ್ಷ ಶರ್ಮ, ಕೇಶವ ಶರ್ಮ, ನವೀನ್ ಆಚಾರ್ಯ ಪಣಿಯೂರು, ಸುಧಾಕರ ಆಚಾರ್ಯ ಕುಕ್ಕಿಕಟ್ಟೆ, ಜಗದೀಶ್ ಆಚಾರ್ಯ ಕಪೆಟ್ಟು ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

Sudha Interior new 1
RELATED ARTICLES

LEAVE A REPLY

Please enter your comment!
Please enter your name here

Most Popular

Recent Comments