HomeFresh Newsಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಮನವಿಗೆ ಸ್ಪಂದನೆ:ರಾಷ್ಟ್ರಕವಿ "ಗಿಳಿವಿಂಡು" ಸಮುಚ್ಚಯದ ದುರಸ್ತಿ ಕಾಮಗಾರಿಗೆ ಚಾಲನೆ, ಒಂದು...

ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಮನವಿಗೆ ಸ್ಪಂದನೆ:ರಾಷ್ಟ್ರಕವಿ “ಗಿಳಿವಿಂಡು” ಸಮುಚ್ಚಯದ ದುರಸ್ತಿ ಕಾಮಗಾರಿಗೆ ಚಾಲನೆ, ಒಂದು ಕೋಟಿ ರೂಪಾಯಿ ವಿಶೇಷ ಅನುದಾನಕ್ಕೆ ಮನವಿ

ಕನ್ನಡದ ಪ್ರಥಮ ರಾಷ್ಟ್ರಕವಿ ಎಂದೇ ಪ್ರಸಿದ್ಧರಾದ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ನೆಲೆಸಿದ ಹುಟ್ಟೂರು ಸದ್ಯ ಕೇರಳದಲ್ಲಿರುವ ಮಂಜೇಶ್ವರದ “ರಾಷ್ಟ್ರಕವಿ ನಿವಾಸ”ಕ್ಕೆ,ಅಂತರರಾಷ್ಟ್ರೀಯ ಬಹುಭಾಷಾ ವಿದ್ವಾಂಸ, ಸಾಂಸ್ಕೃತಿಕ ರಾಯಭಾರಿ ,ಎಲ್. ಜಿ.ಜ್ಯೋತೀಶ್ವರ ಬೆಂಗಳೂರು ಅವರು 2026 ಜೂನ್ 2ರಂದು ಮಂಜೇಶ್ವರದ ರಾಷ್ಟ್ರಕವಿ ನಿವಾಸ “ಗಿಳಿವಿಂಡು”ವಿಗೆ ಆಗಮಿಸಿ, ರಾಷ್ಟ್ರ ಮರೆತಿರುವ ರಾಷ್ಟ್ರ ಕವಿಯ ಸ್ಮಾರಕ ಎಂದು ವಿಷಾದ ವ್ಯಕ್ತಪಡಿಸಿದರು.
ಈ ಕುರಿತು ಕಾಸರಗೋಡು ಕನ್ನಡ ಗ್ರಾಮದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ, ಕಾಸರಗೋಡು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ,ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ಕೇರಳ ರಾಜ್ಯ ಘಟಕದ ಅಧ್ಯಕ್ಷ ಶಿವರಾಮ ಕಾಸರಗೋಡು ಅವರು 2026 ಜೂನ್ 8 ರಂದು ಕೇರಳ ,ಕರ್ನಾಟಕ ಮುಖ್ಯಮಂತ್ರಿಗಳು ಹಾಗೂ ಕರ್ನಾಟಕ ಮಾಜಿ ಮುಖ್ಯಮಂತ್ರಿ , ಗೋವಿಂದ ಪೈ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ. ಎಂ .ವೀರಪ್ಪ ಮೊಯ್ಲಿ ಅವರಿಗೆ ಪ್ರತ್ಯೇಕವಾಗಿ ಮನವಿ ಸಲ್ಲಿಸಿ ಕಾರ್ಯೋನ್ಮುಖ ರಾಗುವಂತೆ ಮನವಿ ಸಲ್ಲಿಸಲಾಗಿತ್ತು.


ಹಲವು ದಶಕಗಳ ಹಿಂದೆ ಕೇರಳ- ಕರ್ನಾಟಕ ಸರಕಾರಗಳ ಜಂಟಿ ಸಹಭಾಗಿತ್ವದಲ್ಲಿ ರಾಷ್ಟ್ರಕವಿಯ ಹೆಸರಿನಲ್ಲಿ ಟ್ರಸ್ಟ್,ಸಮಿತಿಯನ್ನು ರಚಿಸಿ ಕಾರ್ಯ ಪ್ರವೃತ್ತರಾದರೂ, ಇವುಗಳ ನಿರಾಸಕ್ತಿಯಿಂದ ರಾಷ್ಟ್ರಕವಿ ನಿವಾಸ,ಗ್ರಂಥ ಭಂಡಾರ, ಅತಿಥಿ ಗೃಹ, “ಭವನಿಕಾ”ಲಲಿತಕಲಾ ಮಂದಿರ ಕಾಮಗಾರಿಗಳು ಪೂರ್ಣಗೊಳ್ಳದೇ,ಇರುವ ಇಬ್ಬರು ನೌಕರರಿಗೆ ಸಂಬಳ ಪಾವತಿಯಾಗದೇ ಶೋಚನೀಯ ಸ್ಥಿತಿಯಲ್ಲಿತ್ತು .ರಾಷ್ಟ್ರಕವಿ ಸ್ಮಾರಕದ ಸಮಗ್ರ ಅಭಿವೃದ್ಧಿಗಾಗಿ ಕೇರಳ, ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳು, ಸಚಿವರು ಹಾಗೂ ಕಾಸರಗೋಡು ,ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಸದಸ್ಯರು, ಶಾಸಕರು ಮತ್ತು ಕಾಸರಗೋಡು ಜಿಲ್ಲಾ ಪಂಚಾಯತು ಸದಸ್ಯರಿಗೆ ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಮನವಿ ಸಲ್ಲಿಸಿ ಒತ್ತಾಯಿಸಿದ್ದರು.


ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್ , ಸಮಿತಿಯನ್ನು ಪುನರ್ ಸಂಘಟಿಸಿ, ಕೇರಳ- ಕರ್ನಾಟಕ ಸರಕಾರದಿಂದ ನಾಮ ನಿರ್ದೇಶಿತ ನೂತನ ಸದಸ್ಯರನ್ನು ಸೇರ್ಪಡೆಗೊಳಿಸಬೇಕೆಂದು ಸಂಬಂಧಪಟ್ಟ ಕೇರಳ- ಕರ್ನಾಟಕ ಸರಕಾರದ ಮುಖ್ಯಮಂತ್ರಿಗಳಿಗೆ ಕಾಸರಗೋಡು ಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಪ್ರಾತಿನಿಧಿಕವಾದ ನಿಯೋಗವನ್ನು ಕೊಂಡೊಯ್ಯುವ ಉದ್ದೇಶದಿಂದ ಸಮಾನ ಆಸಕ್ತರ ಸಮ್ಮುಖದಲ್ಲಿ ಮುಂದಿನ ರೂಫುರೇಷೆ ತಯಾರಿಸಲು ಬೆಂಗಳೂರಿನಲ್ಲಿ ಸಾಹಿತಿಗಳು,ವಿದ್ವಾಂಸರು, ಮಾಧ್ಯಮದವರು, ಸಾಹಿತ್ಯಿಕ, ಸಾಂಸ್ಕೃತಿಕ, ಕನ್ನಡ ಸಂಘಟನೆಗಳು, ಸಾಂಸ್ಕೃತಿಕ ರಾಯಭಾರಿಗಳ ದುಂಡು ಮೇಜಿನ ಪರಿಷತ್ತು ಸಭೆಯನ್ನು ಕರೆಯಲಾಯಿತು. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಾ. ಎಂ.ವೀರಪ್ಪ ಮೊಯ್ಲಿ ಅವರನ್ನು ಅವರ ಬೆಂಗಳೂರಿನ ಕಚೇರಿ ನಿವಾಸದಲ್ಲಿ ಭೇಟಿಯಾಗಿ ಚರ್ಚಿಸಲಾಗುವುದೆಂದು ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ತಿಳಿಸಿದ್ದಾರೆ.
ಇದೀಗ 2026 ಅಗಸ್ಟ್ 1 ರಂದು ಮಂಜೇಶ್ವರದ ಗಿಳಿವಿಂಡು ರಾಷ್ಟ್ರ ಕವಿ ನಿವಾಸದಲ್ಲಿ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ. ಎಂ.ವೀರಪ್ಪ ಮೊಯ್ಲಿ, ಯೋಜನಾ ನಿರ್ದೇಶಕ ಕೆ. ತೇಜೋಮಯ, ನೂತನ ಟ್ರಸ್ಟ್ ಆಡಳಿತಾಧಿಕಾರಿ ಉದಯಕುಮಾರ್ ಇರ್ವತ್ತೂರು, ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್, ಟ್ರಸ್ಟ್ ಸದಸ್ಯರಾದ ಡಾ.ಬಿ.ಎ ವಿವೇಕ ರೈ, ಎಂ.ಜಿ.ಕಿಣಿ ಶುಭಾಶ್ಚಂದ್ರ ಕಣ್ವತೀರ್ಥ ಹಾಗೂ ಕಾಸರಗೋಡು ಜಿಲ್ಲಾಡಳಿತದ ಅಧಿಕಾರಿಗಳೊಂದಿಗೆ ಜಂಟಿ ಸಭೆ ನಡೆಸಿದ್ದಾರೆ.
ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಾ. ಎಂ. ವೀರಪ್ಪ ಮೊಯ್ಲಿ ಅವರನ್ನು ಬೆಂಗಳೂರಿನ ಕಚೇರಿ ನಿವಾಸದಲ್ಲಿ ಶೀಘ್ರದಲ್ಲೇ ಬೇಟಿಯಾಗಿ ಕೇರಳ ಕರ್ನಾಟಕ ಮುಖ್ಯಮಂತ್ರಿಗಳನ್ನು ರಾಷ್ಟ್ರಕವಿ ನಿವಾಸಕ್ಕೆ ಆಹ್ವಾನಿಸಿ,ಟ್ರಸ್ಟ್ ನ ಅಭಿವೃದ್ಧಿ ಕಾಮಗಾರಿಗೆ ಒಂದು ಕೋಟಿ ರೂಪಾಯಿ ಮೊತ್ತದ ವಿಶೇಷ ಅನುದಾನ ಒದಗಿಸುವಂತೆ ಕೇರಳ ಮುಖ್ಯಮಂತ್ರಿ ವಿ.ಡಿ.ಸತೀಶನ್ ಕರ್ನಾಟಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲಾಗುವುದು.
ಗಡಿನಾಡುವಿನಲ್ಲಿರುವ ರಾಷ್ಟ್ರಕವಿ ನಿವಾಸ ಗಿಳಿವಿಂಡುವಿನಲ್ಲಿ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳ ಸಂಘಟನೆಗೆ ರೂಪು ರೇಷೆ ತಯಾರಿಸಲು ಕಾಸರಗೋಡು ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಸಾಹಿತಿಗಳು ,ಲೇಖಕರು ವಿದ್ವಾಂಸರು, ಮಾಧ್ಯಮದವರು, ಸಾಹಿತ್ಯಿಕ, ಸಾಂಸ್ಕೃತಿಕ ಸಂಘಟಕರು, ಕಲಾವಿದರ ಒಂದು ದಿನದ ಸಮಾವೇಶವನ್ನು ಹಮ್ಮಿಕೊಳ್ಳಬೇಕೆಂದು ಕಾಸರಗೋಡು ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments