HomeFresh Newsಜಾರ್ಖಂಡ್‌ನಲ್ಲಿ ಪ್ರತಿಭಟನೆ: 9 ದಿನಗಳ ಉಪವಾಸದ ಬಳಿಕ ದೇವೇಂದ್ರ ನಾಥ್ ಮಹ್ತೊ ಆಸ್ಪತ್ರೆಗೆ ದಾಖಲು

ಜಾರ್ಖಂಡ್‌ನಲ್ಲಿ ಪ್ರತಿಭಟನೆ: 9 ದಿನಗಳ ಉಪವಾಸದ ಬಳಿಕ ದೇವೇಂದ್ರ ನಾಥ್ ಮಹ್ತೊ ಆಸ್ಪತ್ರೆಗೆ ದಾಖಲು

ಜಾರ್ಖಂಡ್‌ನಲ್ಲಿ ನೇಮಕ ಪರೀಕ್ಷೆಗಳಲ್ಲಿನ ಅಕ್ರಮಗಳನ್ನು ವಿರೋಧಿಸಿ ಕಳೆದ ಒಂಬತ್ತು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಜಾರ್ಖಂಡ್‌ ಲೋಕತಾಂತ್ರಿಕ ಕ್ರಾಂತಿಕಾರಿ ಮೋರ್ಚಾ ನಾಯಕ ದೇವೇಂದ್ರ ಮಹತೊ ಅವರ ಆರೋಗ್ಯ ಹದಗೆಟ್ಟಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಹತೊಗೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಕ್ತದಲ್ಲಿನ ಸಕ್ಕರೆ ಮಟ್ಟ ತೀವ್ರವಾಗಿ ಕುಸಿದಿರುವುದರಿಂದ ಅವರ (ಮಹತೊ) ಸ್ಥಿತಿ ಚಿಂತಾಜನಕವಾಗಿದೆ ಎಂದು ರಾಂಚಿಯ ಸದರ್ ಆಸ್ಪತ್ರೆಯ ವೈದ್ಯಾಧಿಕಾರಿ ನ್ಯಾನ್ಸಿ ಪ್ರಿಯಾ ತಿಳಿಸಿದ್ದಾರೆ.

ತೀವ್ರ ಅನಾರೋಗ್ಯದ ಹೊರತಾಗಿಯೂ ಮಹತೊ ಸೋಮವಾರ ವಿಧಾನಸಭೆ ಚಲೊದಲ್ಲಿ ಪಾಲ್ಗೊಂಡಿದ್ದರು. ಮಾಜಿ ಮುಖ್ಯಮಂತ್ರಿ ಶಿಬು ಸೊರೇನ್ ಭಾವಚಿತ್ರ ಹಿಡಿದುಕೊಂಡು ಆಂಬುಲೆನ್ಸ್‌ನಲ್ಲಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ್ದರು. ಸ್ಟ್ರೆಚರ್ ಮೇಲೆ ನಿಂತುಕೊಂಡೇ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ್ದರು.

‘ನಾನು ಕಳೆದ ಒಂಬತ್ತು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದೇನೆ. ಹೀಗಿದ್ದರೂ ಪೊಲೀಸರು ನನ್ನನ್ನು ತಳ್ಳಿ, ಕಿರುಕುಳ ನೀಡಿ ಬಲವಂತವಾಗಿ ಆಂಬುಲೆನ್ಸ್‌ ಒಳಗೆ ತಳ್ಳಿದರು. ಆದರೆ, ನಾನು ಈ ಹೋರಾಟವನ್ನು ಕೈಬಿಡುವುದಿಲ್ಲ’ ಎಂದು ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments