HomeFresh Newsಲೋಕದಲ್ಲಿ ಅತಿ ಹೆಚ್ಚು ಪ್ರದೇಶದಲ್ಲಿ ಬೆಳೆಯುವ ಧಾನ್ಯ ಗೋಧಿ

ಲೋಕದಲ್ಲಿ ಅತಿ ಹೆಚ್ಚು ಪ್ರದೇಶದಲ್ಲಿ ಬೆಳೆಯುವ ಧಾನ್ಯ ಗೋಧಿ

ಗೋಧಿಯು ಲೋಕದಲ್ಲಿ ಅತಿ ಹೆಚ್ಚು ಪ್ರದೇಶದಲ್ಲಿ ಬೆಳೆಯುವ ಧಾನ್ಯವಾಗಿದೆ. ಇದು ಹುಲ್ಲಿನಲ್ಲಿ ಆಗುವ ಧಾನ್ಯವಾಗಿದೆ.

ಪ್ರಪಂಚದಲ್ಲಿ 54.2 ಕೋಟಿ ಎಕರೆ ಪ್ರದೇಶದಲ್ಲಿ ಗೋಧಿ ಬೆಳೆಯುತ್ತಾರೆ. ಒಟ್ಟು ಜಾಗತಿಕ ಉತ್ಪಾದನೆ 88 ಕೋಟಿ ಟನ್ ಇದೆ. ತೂಕದ ರೀತ್ಯಾ ಇದು ಮೆಕ್ಕೆಜೋಳಕ್ಕಿಂತ ತುಸು ಕಡಿಮೆ. ಪಡುವಣ ಏಶಿಯಾದ ಅಲೆಮಾರಿ ಜನರು 23,000 ವರುಷಗಳ ಹಿಂದೆಯೇ ಕಾಡು ಗೋಧಿ ಸಂಗ್ರಹಿಸಿದ್ದಾರೆ. 11,000 ವರುಷಗಳ ಹಿಂದೆ ಆ ಸುತ್ತಿನಲ್ಲೇ ಮೊದಲು ಗೋಧಿಯ ಕೃಷಿ ಆರಂಭವಾಯಿತು.

ಲೋಕದೆಲ್ಲೆಡೆ ಬ್ರೆಡ್, ಬನ್, ಬಿಸ್ಕತ್ತು ರೂಪದಲ್ಲಿ ಗೋಧಿ ಜನರ ಬಳಕೆಗೆ ಬಂದಿದೆ. ಗೋಧಿಯ ಹೊರ ತೌಡು ತೆಗೆದ ಮೈದಾದಲ್ಲಿ ಜೀವಸತ್ವಗಳು ಇಲ್ಲ. ಆದರೆ ಮೈದಾ ಪ್ರಪಂಚದ ಎಲ್ಲ ಕಡೆ ಸಿಗುತ್ತದೆ.

ಜಗತ್ತಿನಲ್ಲಿ ಅತಿ ಹೆಚ್ಚು ಗೋಧಿ ಬೆಳೆಯುವ ದೇಶ ಚೀನಾ. ಭಾರತ ಎರಡನೆಯ ಸ್ಥಾನದಲ್ಲಿದೆ. ಭಾರತದಲ್ಲಿ ಹೆಚ್ಚು ಗೋಧಿ ಬೆಳೆಯುವ ರಾಜ್ಯ ಉತ್ತರ ಪ್ರದೇಶ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments