ಯುವ ಬಾಂಧವರು ಮಾಣಿ ಆಶ್ರಯದಲ್ಲಿ ೨ನೇ ವರ್ಷದ ಮಾಣಿದ ಮಣ್ಣ್‌ಡ್ ಕೆಸರ್ದ ಗೊಬ್ಬು 2026 ಕಾರ್ಯಕ್ರಮವು ಆ.23ರಂದು ಮಾಣಿ ಕಾಪಿಕಾಡು ಗದ್ದೆಯಲ್ಲಿ ನಡೆಯಲಿದೆ.

ಆ.೨೩ರ ಆದಿತ್ಯವಾರ ಬೆಳಿಗ್ಗೆ 8 ಗಂಟೆಯಿಂದ ಕಾರ್ಯಕ್ರಮವು ಆರಂಭಗೊಳ್ಳಲಿದ್ದು, ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಸಚಿನ್ ರೈ ಮಾಣಿಗುತ್ತು ಉದ್ಘಾಟಿಸಲಿದ್ದಾರೆ.
ಪ್ರಶಸ್ತಿ ಪುರಸ್ಕೃತ ಪ್ರಗತಿಪರ ಕೃಷಿಕರಾದ ಪ್ರಫುಲ್ಲ ಆರ್ ವಿಠಲಕೋಡಿ ಅವರ ಗೌರವ ಉಪಸ್ಥಿತಿಯಲ್ಲಿ ನಡೆಯಲಿರುವ ಉದ್ಘಾಟನಾ ಕಾರ್ಯಕ್ರಮದಲ್ಲಿ ಕಂಬಳ ಕ್ಷೇತ್ರದ ಹಿರಿಯ ತೀರ್ಪುಗಾರ ಶೀನ ಶೆಟ್ಟಿ ವೀರಕಂಭ, ಕಂಬಳ ಕ್ಷೇತ್ರದ ಹಿರಿಯ ತೀರ್ಪುಗಾರ ಅಣ್ಣು ಪೂಜಾರಿ ಅಮ್ಟಾಡಿ, ಕಂಬಳ ಕ್ಷೇತ್ರದ ಹಿರಿಯ ಬರವಣಿಗೆಗಾರ ಸಂಕಪ್ಪ ಶೆಟ್ಟಿ ನಗ್ರಿ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು. ವಿಶೇಷ ಆಕರ್ಷಣೆಯಾಗಿ ಬೋಳಾರ ತ್ರಿಶಾಲ್ ಕೆ ಪೂಜಾರಿಯವರ ಕೋಣ ಚಾಂಪಿಯನ್ ಕಾಳನಿಗೆ ಸನ್ಮಾನ ಕಾರ್ಯಕ್ರಮವು ನಡೆಯಲಿದೆ.
ಪುರುಷರಿಗೆ, ಮಹಿಳೆಯರಿಗೆ, 1ರಿಂದ 10ನೇ ತರಗತಿಯ ಹುಡುಗರಿಗೆ, 1ರಿಂದ 10ನೇ ತರಗತಿಯ ಹುಡುಗಿಯರಿಗಾಗಿ ಹಾಗೂ ಸಾರ್ವಜನಿಕರಿಗಾಗಿ ಹಲವಾರು ಆಟೋಟ ಸ್ಪರ್ಧೆಗಳು ನಡೆಯಲಿದ್ದು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ವಿನಂತಿಸಿದ್ದಾರೆ

